ರಿಷಬ್ ಪಂತ್-ಬೂಮ್ರಾ ಮಧ್ಯೆ ಬಿಗ್ ವಾರ್.. ಬೌಲಿಂಗ್ ಕೋಚ್ ಮಾರ್ಕೆಲ್ ಸ್ಟನ್..!

author-image
Ganesh
Updated On
ರಿಷಬ್ ಪಂತ್-ಬೂಮ್ರಾ ಮಧ್ಯೆ ಬಿಗ್ ವಾರ್.. ಬೌಲಿಂಗ್ ಕೋಚ್ ಮಾರ್ಕೆಲ್ ಸ್ಟನ್..!
Advertisment
  • ಬೂಮ್ರಾ ಮೇಲೆ 100 ಡಾಲರ್ ಬೆಟ್, ಗೆದ್ದಿದ್ಯಾರು?
  • ಟೀಮ್ ಇಂಡಿಯಾ ಪ್ರ್ಯಾಕ್ಟೀಸ್ ಸೆಷನ್​​ ವೇಳೆ ಫನ್​!
  • ಆಫ್​ ದಿ ಫೀಲ್ಡ್​ನಲ್ಲೂ ನಕ್ಕು ನಗಿಸ್ತಾರೆ ರಿಷಭ್ ಪಂತ್

ರಿಷಭ್ ಪಂತ್.. ಹೊಡಿ ಬಡಿ ಆಟಕ್ಕೆ ಕೇರ್ ಆಫ್ ಅಡ್ರೆಸ್. ಫಾರ್ಮೆಟ್ ಯಾವುದೇ ಇರಲಿ, ಸಿಡಿಲಬ್ಬರ ಬ್ಯಾಟಿಂಗ್​ನಿಂದ ಎಟರ್​ಟೈನ್ಮೆಂಟ್ ನೀಡ್ತಾರೆ. ಇದೇ ಪಂತ್, ವಿಕೆಟ್ ಹಿಂದೆಯೂ ಹಾಗೂ ಆಫ್ ದಿ ಫೀಲ್ಡ್​ನಲ್ಲೂ ಎಂಟರ್​ಟೈನರ್.. ಅದ್ಯಾಕೆ ಅಂತೀರಾ ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಎದುರಾಳಿ ಯಾರೇ ಆಗಲಿ ದಂಡಂ ದಶಗುಣಂ ಮಂತ್ರ ಪಠಿಸುವ ಪಂತ್, ಕ್ರೀಸ್​ನಲ್ಲಿದ್ದಷ್ಟು ಹೊತ್ತು ಎಂಟರ್​​ಟೈನ್ಮೆಂಟ್​​ಗೇನು ಕೊರತೆ ಇಲ್ಲ. ಇಂಟ್ರೆಸ್ಟಿಂಗ್ ಅಂದ್ರೆ ಈತ ಕ್ರೀಸ್​ನಲ್ಲೇ ಅಲ್ಲ. ಎಲ್ಲಿದ್ದರೂ ಮಸ್ತ್​ ಮಜಾ ಗ್ಯಾರಂಟಿ. ಇಂಥ ಫನ್​​ಗೆ ಟೀಮ್ ಇಂಡಿಯಾದ ನೆಟ್ ಸೆಷನ್ ಸಾಕ್ಷಿಯಾಗಿದೆ. ಪರ್ತ್ ಟೆಸ್ಟ್​ಗಾಗಿ ಆಟಗಾರರು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಪಂತ್ ಮಾತ್ರ, ಅಭ್ಯಾಸದ ವೇಳೆ ಕಾಲೆಳೆಯುತ್ತಾ ಆಟಗಾರರ ಜೊತೆ ಮಸ್ತಿ ಮಾಡಿದ್ದಾರೆ. ಅದ್ರಲ್ಲೂ ಉಪ ನಾಯಕ ಜಸ್​ಪ್ರೀತ್ ಬೂಮ್ರಾ ಎದುರು ತಮಾಷೆಯ ಪೈಪೋಟಿಯೂ ನಡೆದಿದೆ.

ಇದನ್ನೂ ಓದಿ:RCB ಟಾರ್ಗೆಟ್ ದಕ್ಷಿಣ ಆಫ್ರಿಕಾದ ಈ ಸೂಪರ್ ಸ್ಟಾರ್​​.. ಬೌಲಿಂಗ್​ಗಾಗಿ ಕೋಟಿ ಕೋಟಿ ಸುರಿಯಲು ರೆಡಿ..!

publive-image

ಪ್ರ್ಯಾಕ್ಟೀಸ್ ಸೆಷನ್​​ ವೇಳೆ ಫನ್​!
ಟೀಮ್ ಇಂಡಿಯಾ ಪರ್ತ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಇದೇ ಅಭ್ಯಾಸದ ವೇಳೆ ಬುಮ್ರಾ ಹಾಗೂ ರಿಷಬ್ ಪಂತ್ ಬಿಗ್ ವಾರ್ ನಡೆದಿದೆ. ಅದ್ರಲ್ಲೂ ಬೂಮ್ರಾ ವಿಕೆಟ್​​ಗಾಗಿ ಪಂತ್, ಬರೋಬ್ಬರಿ 100 ಡಾಲರ್​​ಗಳ ಬೆಟ್​ ಕೂಡ ಕಟ್ಟಿದ್ದಾರೆ. ಈ ಬೆಟ್ಟಿನಲ್ಲಿ ಗೆದ್ದವರು ಯಾರು?

ಪಂತ್ : ಮಾರ್ನೆಯನ್ನ ಕೇಳಿ.. ನೀವು ಬೂಮ್ರಾ ಔಟಾ..? ಇಲ್ವಾ ಅನ್ನೋದನ್ನು ಹೇಳಿ..

ಮಾರ್ನೆ ಮಾರ್ಕೆಲ್​: ನಿಮ್ಮ ಬೌಲಿಂಗ್ ಆ್ಯಕ್ಷನ್​​ ಆಸಿಮ್ ಆಮ್ಲಾರಂತೆ ಇದೆ.

ಪಂತ್: 100 ಡಾಲರ್ಸ್​.. ಈ ಎಸೆತದಲ್ಲಿ ನಾನು ಬೂಮ್ರಾನ ಔಟ್​ ಮಾಡುತ್ತೇನೆ.

ಬುಮ್ರಾ: ವಿಕೆಟ್ ಬೀಳುವುದಿಲ್ಲ. ಇರಲಿ ಬಿಡು..

ಪಂತ್: ಫಸ್ಟ್​ ಕ್ಲಾಸ್​ ಕ್ರಿಕೆಟ್‌ನಲ್ಲಿ ನನ್ನದೂ ಒಂದು ವಿಕೆಟ್ ಇದೆ ಸರಿನಾ?

ಬುಮ್ರಾ: ಸರಿ ಒಳ್ಳೆಯದಾಗಲಿ. ಈಗ ಅದನ್ನು ಮಾಡಿ ತೋರಿಸಿ..

ಇಬರಿಬ್ಬರ ವಾಕ್ಸಮರದ ಬಳಿಕ ಪಂತ್ ಎಸೆತವನ್ನು ಬೂಮ್ರಾ ಡಿಫೆಂಡ್​ ಮಾಡ್ತಾರೆ. ಚೆಂಡು ಎಸೆದು ವಾಪಸ್​ ಬಂದ ಪಂತ್, ಈ ಸಲ ಬೌನ್ಸರ್ ಹಾಕ್ತೀನಿ ಎನ್ನುತ್ತಾರೆ.

ಪಂತ್ : ಈ ಸಲ ಬೌನ್ಸರ್​ ಹಾಕುತ್ತೇನೆ.

ಪಂತ್ : ಇದು ಔಟ್​. (ಶಾರ್ಟ್​ ಲೆಗ್​ ಮೇಲೆ ಹೊಡೆದ ಬೂಮ್ರಾ ಔಟ್ ಎಂದು ಹೇಳ್ತಾರೆ)

ಪಂತ್ ಹೀಗೆ ಕಾಲೆಳೆಯೋದು.. ನಕ್ಕು ನಗಿಸುವುದು ಇದು ಮೊದಲೇನಲ್ಲ. ಈ ಈ ಹಿಂದೆಯೂ ಆನ್​​ ಫೀಲ್ಡ್​ ಆ್ಯಂಡ್ ಆಫ್​ ದಿ ಫೀಲ್ಡ್​ನಲ್ಲಿ ಕೆಲ ಸ್ವಾರಸ್ಯಕರ ಘಟನೆಗಳಿಂದ ನಕ್ಕು ನಗಿಸಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್​; ಟೀಮ್​ ಇಂಡಿಯಾ ಹೊಸ ಕ್ಯಾಪ್ಟನ್​ ಘೋಷಣೆ

ಬಾಂಗ್ಲಾ ಫೀಲ್ಡಿಂಗ್ ಸೆಟ್ ಮಾಡಿದ್ದ ಪಂತ್

ಬಾಂಗ್ಲಾ ಎದುರಿನ ಮೊದಲ ಟೆಸ್ಟ್​ ಮ್ಯಾಚ್ ನಿಮಗೆ ನಿನಪಿದ್ಯೋ? ಇಲ್ವೋ? ಆ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಪಂತ್​​​​​​​​​​​​​​​​​​​​​​​​​​​​ ಬ್ಯಾಟಿಂಗ್​ ಪರಿಗೆ ಯಾವ ರೀತಿ ಫೀಲ್ಡ್ ಸೆಟ್ ಮಾಡೋದು ಎಂದು ತಲೆಕೆಡಿಸಿಕೊಂಡಿತ್ತು. ಈ ವೇಳೆ ಎದುರಾಳಿಗಳಿಗಳ ಫೀಲ್ಡ್​ ಸೆಟ್​ ಮಾಡಿದ್ರು.

ಕಿವೀಸ್ ಬ್ಯಾಟರ್​ಗೆ ಹಿಂದೆ ಗೊತ್ತೆಂದ ಪಂತ್..?
ವಿಕೆಟ್ ಹಿಂದೆ ಒಂದಿಲ್ಲೊಂದು ರೀತಿ ಕಾಲೆಳೆಯುವ ಪಂತ್, ನ್ಯೂಜಿಲೆಂಡ್ ಟೆಸ್ಟ್​ ಸರಣಿಯಲ್ಲಿ ಸುಂದರ್​ಗೆ ಹಿಂದಿಯಲ್ಲಿ ಟಿಪ್ಸ್ ನೀಡಿದ್ರು. ಈ ಬೆನ್ನಲ್ಲೇ ಅಜಾಜ್​ ಪಟೇಲ್​ ಬೌಂಡರಿ ಸಿಡಿಸಿದ್ರು. ಈ ಬೆನ್ನಲ್ಲೇ ಸಹ ಆಟಗಾರ ಅವರಿಗೆ ಹಿಂದಿ ಬರುತ್ತೆ ಎಂದು ತಿಳಿಸಿದ್ರು. ಇದಕ್ಕೆ ಪ್ರತಿಯಾಗಿ ಪಂತ್, ಅವರಿಗೆ ಹಿಂದಿ ಗೊತ್ತು ಅನ್ನೋದು ನನಗೇನು ಗೊತ್ತು ಎಂದಿದ್ದರು.

ದುಲೀಪ್ ಟ್ರೋಫಿ ವೇಳೆ ಕುಲ್​ದೀಪ್ ಕಾಲೆಳೆದ ಪಂತ್
ವಿಕೆಟ್ ಹಿಂದೆ ಪಂತ್ ಸ್ಲೆಡ್ಜ್ ಮಾಡೋದು ಕಾಮನ್. ದುಲೀಪ್ ಟ್ರೋಪಿಯಲ್ಲಿ ರಿಷಭ್ ಪಂತ್, ಕುಲ್​ದೀಪ್ ಯಾದವ್​ಗೆ ವಿಭಿನ್ನ ರೀತಿಯಲ್ಲಿ ಸ್ಲೆಡ್ಜ್‌ ಮಾಡಿ ಗಮನ ಸೆಳೆದಿದ್ದರು. 1 ರನ್‌ ತೆಗೆದುಕೊಳ್ಳಲ್ಲ ಎಂದು ಅಮ್ಮನ ಆಣೆ ಮಾಡುವಂತೆ ಕುಲ್​ದೀಪ್ ಕಾಲೆಳೆದಿದ್ದರು. ಇದೇ ಪಂದ್ಯದಲ್ಲಿ ಪಂತ್, ಭಾರತ ಎ ತಂಡದ ಟೀಮ್ ಹಡಲ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ರು.

ಇದನ್ನೂ ಓದಿ:BBK11: 50ನೇ ದಿನಕ್ಕೆ ಬಿಗ್​ಬಾಸ್​ ಮನೆಯ ಆಟ ಮುಗಿಸಿದ ಸ್ಪರ್ಧಿ ಇವರೇ ನೋಡಿ

ಬೇಬಿ ಸಿಟ್ಟರ್​​ ಎಂದಿದ್ದ ಪೈನ್​ಗೆ ಸಖತ್ ಕೌಂಟರ್
ಪಂತ್ ಕೌಂಟರ್​​ಗೆ ರೀ ಕೌಂಟರ್ ಕೊಡ್ತಾರೆ ಅನ್ನೋದು ಗೊತ್ತಾಗಿದ್ದೇ ಆಸಿಸ್ ಸರಣಿಯಲ್ಲಾಗಿತ್ತು. ಈ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕ್ಯಾಪ್ಟನ್ ಟಿಮ್ ಪೈನ್, ನಾನು, ನನ್ನ ಪತ್ನಿ ಸಿನಿಮಾಗೆ ಹೋದರೆ ಮಕ್ಕಳನ್ನ ನೋಡಿಕೊಳ್ಳಬಹುದು ಎಂದು ಕೆಣಕಿದ್ದರು. ಇದಕ್ಕೆ ಪಂತ್​, ತಾತ್ಕಾಲಿಕ ನಾಯಕ ಎಂದು ಕಿಚಾಯಿಸಿದ್ದರು. ರಿಷಭ್​​ ಪಂತ್​ರ ಸ್ಲೆಡ್ಜಿಂಗ್​ಗೆ ಸ್ವತಃ ಆಸ್ಟ್ರೇಲಿಯಾ ಪ್ರಧಾನಿಯೇ ಫಿದಾ ಆಗಿದ್ದರು. ಐಪಿಎಲ್​​ನಲ್ಲಿ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಸೇರಿದಂತೆ ಹಲವರ ಕಾಲೆಳೆದಿದ್ದಾರೆ. ವಿಕೆಟ್ ಹಿಂದೆ ತರಲೆ ಮಾಡಿ ನಕ್ಕು ನಗಿಸಿದ್ದಾರೆ. ಹೀಗಾಗಿಯೇ ಪಂತ್, ಟೀಮ್ ಇಂಡಿಯಾದ ರಿಯಲ್ ಎಂಟರ್​ಟೈನರ್.

ಇದನ್ನೂ ಓದಿ:ನ್ಯೂಸ್​ಫಸ್ಟ್​ ಕನ್ನಡದ ಸೀನಿಯರ್​ ಆ್ಯಂಕರ್​​ ವಿದ್ಯಾಶ್ರೀ ಅವರಿಗೆ ಸನ್ಮಾನ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment