/newsfirstlive-kannada/media/post_attachments/wp-content/uploads/2024/06/RISHABH_PANT_GILLKRIST.jpg)
ಆ್ಯಂಡಂ ಗಿಲ್ ಕ್ರಿಸ್ಟ್.. ಹೆಸರು ಕೇಳಿದ್ರೆ, ಎಂಥಾ ಬೌಲರ್ಗೂ ನಡುಕ ಹುಟ್ಟುತ್ತಿತ್ತು. ಟೆರರ್ ಬ್ಯಾಟಿಂಗ್, ಚುರುಕಿನ ಕೀಪಿಂಗ್. ಅಬ್ಬಾ ಅದ್ಭುತ ಬಿಡಿ, ಆದ್ರೆ, ಗಿಲ್ಲಿ ನಿರ್ಗಮನದ ಬಳಿಕ ಡೇರ್ಡೆವಿಲ್ ಆಟಗಾರನ ಅಲಭ್ಯತೆ ಕಾಡಿತ್ತು. ಇದೀಗ ಸಮರ್ಥವಾಗಿ ರೀಪ್ಲೆಸ್ ಮಾಡೋ ಆಟಗಾರ ಸಿಕ್ಕಿದ್ದಾನೆ. ಆ ಪರ್ಫೆಕ್ಟ್ ಆಟಗಾರನೇ ಟೀಮ್ ಇಂಡಿಯಾದ ರಿಷಬ್ ಪಂತ್. ಫೆಂಟಾಸ್ಟಿಕ್ ಪಂತ್ಗೂ, ಆ್ಯಡಂ ಗಿಲ್ಕ್ರಿಸ್ಟ್ಗೂ ಏನು ಸಾಮ್ಯತೆ.?
ಇದನ್ನೂ ಓದಿ: NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ
ಆ್ಯಡಂ ಗಿಲ್ಕ್ರಿಸ್ಟ್.. ಮೋಸ್ಟ್ ಡೇಂಜರಸ್ ಬ್ಯಾಟರ್.. ವಿಕೆಟ್ ಹಿಂದೆ ಕ್ಷಣಾದ್ರದಲ್ಲೇ ಚಮಾತ್ಕಾರ ಮಾಡ್ತಿದ್ದ ವಿಕೆಟ್ ಕೀಪರ್. ಈ ಡೇರ್ಡೆವಿಲ್ ಬ್ಯಾಟರ್ಗೆ ಬೌಲರ್ ಯಾರು. ಕಂಡೀಷನ್ಸ್ ಏನು ಅನ್ನೋದು ಲೆಕ್ಕಕ್ಕೇ ಇರ್ತಾ ಇರಲಿಲ್ಲ. ಹೊಡಿಬಡಿ ಆಟವಾಡ್ತಿದ್ದ ಈತನ ಬ್ಯಾಟಿಂಗ್ಗೆ ಬೌಲರ್ಗಳು ಬೆಚ್ಚಿ ಬೀಳ್ತಿದ್ರು. ಎದುರಾಳಿ ಪಡೆ ಕಟ್ಟಿ ಹಾಕೋದು ಹೇಗೆ ಅನ್ನೋದು ಗೊತ್ತಾಗದೇ ಪರದಾಡ್ತಿದ್ರು.
ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್ ರೇವಣ್ಣ ವಿಚಾರಣೆ
ಡೆರ್ ಡೆವಿಲ್ ಬ್ಯಾಟರ್ ರಿಷಬ್ ಪಂತ್
ಈ ಡೇಂಜರಸ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಬಳಿಕ, ಪರ್ಯಾಯ ಆಟಗಾರ ಕ್ರಿಕೆಟ್ ಲೋಕಕ್ಕೆ ಸಿಕ್ಕಿರಲಿಲ್ಲ. ಈತನ ಹತ್ತಿರಕ್ಕೂ ಸುಳಿದಿರಲಿಲ್ಲ. ಇದೀಗ ವಿಶ್ವ ಕ್ರಿಕೆಟ್ನಲ್ಲಿ ಗಿಲ್ಲಿ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಉದಯಿಸಿದ್ದಾರೆ. ಆತನೇ ಟೀಮ್ ಇಂಡಿಯಾದ ಡೆರ್ ಡೆವಿಲ್ ಬ್ಯಾಟರ್ ರಿಷಬ್ ಪಂತ್..
ಇದನ್ನೂ ಓದಿ: ದರ್ಶನ್ ಗ್ಯಾಂಗ್ನ ಆರೋಪಿಗಳ ಹೆಸರಲ್ಲಿ ಹೊಸ ಸಿಮ್ ಖರೀದಿಸಿದ ಪೊಲೀಸರು.. ತನಿಖೆ ಏನೇನು ಆಗ್ತಿದೆ?
ಸದ್ಯ ತನ್ನ ಕರಿಯರ್ನ ‘ಸೆಕೆಂಡ್’ ಇನ್ನಿಂಗ್ಸ್ ಆರಂಭಿಸಿರುವ ಪಂತ್, ಟಿ20 ವಿಶ್ವಕಪ್ನಲ್ಲಿ ಎದುರಾಳಿ ಪಾಲಿನ ವಿಲನ್ ಆಗಿದ್ದಾರೆ. ದಂಡಂದಶ ಗುಣಂ ಆಟದಿಂದಲೇ ಎಲ್ಲರ ಮನ ಗೆಲ್ತಿರುವ ಪಂತ್, ವಿಕೆಟ್ ಹಿಂದೆ ಮ್ಯಾಜಿಕ್ ಮಾಡ್ತಿದ್ದಾರೆ. ಈ ಮ್ಯಾಜಿಕಲ್ ಇನ್ನಿಂಗ್ಸ್ಗಳು, ಚಾಣಾಕ್ಷ ಕೀಪಿಂಗ್ ನೋಡಿದವರಿಗೆ ಪಂತ್, ಆ್ಯಡಂ ಗಿಲ್ಕ್ರಿಸ್ಟ್ ಆಟ ನೋಡಿದಂತೆ ಭಾಸವಾಗ್ತಿದೆ. ಇದಕ್ಕೆ ಕಾರಣವೂ ಇದೆ.
ಗಿಲ್ಕ್ರಿಸ್ಟ್ರಂತೆ ಬಹುಮುಖ ಪ್ರತಿಭೆ ಪಂತ್..!
ಲೆಜೆಂಡರಿ ಆ್ಯಡಂ ಗಿಲ್ಕ್ರಿಸ್ಟ್ ಹಾಗೂ ಪಂತ್ ನಡುವೆ ಹಲವು ಸಾಮ್ಯತೆಗಳಿವೆ. ಇದು ಜಸ್ಟ್ ಲೆಫ್ಟಿ ಬ್ಯಾಟರ್, ವಿಕೆಟ್ ಕೀಪರ್ಗಳೆಂಬ ಕಾರಣಕ್ಕೆ ಹೇಳ್ತಿರುವ ಹೋಲಿಕೆ ಅಲ್ಲ. ಇದರಾಚೆಗಿನ ಸಾಮ್ಯತೆ ಹೆಚ್ಚಿದೆ. ಈ ಇಬ್ಬರ ಬ್ಯಾಟಿಂಗ್ ಶೈಲಿಯೇ ಇದಕ್ಕೆ ಮೊದಲ ಎಕ್ಸಾಂಪಲ್. ಲೆಫ್ಟಿ ಬ್ಯಾಟರ್ಗಳಾದ ಇವರು, ಹೊಡಿಬಡಿ ಆಟದಲ್ಲಿ ನಿಸ್ಸೀಮರು. ಫಾರ್ಮೆಟ್ ಯಾವುದೇ ಆಗಿಲಿರಲಿ, ಪರಿಸ್ಥಿತಿ ಹೇಗೆ ಇರಲಿ, ಬ್ಯಾಟಿಂಗ್ ಕ್ರಮಾಂಕ ಯಾವುದೇ ಆಗಿರ್ಲಿ, ಇವರಿಬ್ಬರ ಮೂಲಮಂತ್ರವೇ ಹೊಡಿಬಡಿ ಆಟ.
ಪಂತ್ ಸ್ಫೋಟಕ ಬ್ಯಾಟಿಂಗ್.. ಇಬ್ಬರ ಬಲವೂ ಒಂದೇ..!
ಆಕ್ರಮಣಕಾರಿ ಆಟವೇ ಪಂತ್ ಶಕ್ತಿಯಾಗಿದೆ. ಮೊದಲ ಬಾಲ್ನಿಂದ ಅಟ್ಯಾಕಿಂಗ್ ಬ್ಯಾಟಿಂಗ್ಗೆ ಇಳಿಯುವ ability ಹೊಂದಿದ್ದಾರೆ. ರಿಷಬ್ ಪಂತ್ರ ಅಗ್ರೆಸ್ಸಿವ್ ಬ್ಯಾಟಿಂಗ್, ನಿಜಕ್ಕೂ ಆಸಿಸ್ ದಿಗ್ಗಜನನ್ನೇ ಹೋಲುತ್ತೆ. ಆ್ಯಡಂ ಗಿಲ್ಕ್ರಿಸ್ಟ್ ಕೂಡ ವಿಸ್ಫೋಟಕ ಬ್ಯಾಟರ್ ಆಗಿದ್ರು. ಲೀಲಾಜಾಲವಾಗಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸುತ್ತಿದ್ರು. ಇದೇ ಅಗ್ರೆಸ್ಸಿವ್ ಬ್ಯಾಟಿಂಗ್, ಗಿಲ್ಕ್ರಿಸ್ಟ್ರನ್ನ ಡಿಫರೆಂಟ್ ಸ್ಟ್ರೈಲ್ ಆಫ್ ಪ್ಲೇಯರ್ ಆಗಿ ಗುರುತಿಸುವಂತೆ ಮಾಡಿತ್ತು.
ವಿದೇಶಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ಲೇಯರ್ ರಿಷಬ್.!
ಧೋನಿ ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ. ಆದ್ರೆ, ಕ್ರಿಕೆಟ್‌ನ ಜೀನಿಯಸ್ ಧೋನಿಯನ್ನೇ ಪಂತ್ ಮೀರಿಸಿದ್ದಾರೆ. ಇದಕ್ಕೆ ಸಾಕ್ಷಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ನೆಲಗಳಲ್ಲಿ ಸಿಡಿಸಿರುವ ಟೆಸ್ಟ್ ಶತಕಗಳಾಗಿವೆ. ಇಂಥಾ ಸಾಧನೆಯನ್ನ ಧೋನಿ ಮಾಡಿದ್ದಿಲ್ಲ. ವಿದೇಶದಲ್ಲಿ ಪಂತ್ ಸಿಡಿಸಿರುವ ಶತಕಗಳು, ಆಡಿರುವ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ಗಳು ಧೋನಿಯನ್ನ ಮೀರಿಸುವಂಥದ್ದೇ ಆಗಿದೆ. ಈ ಪಂತ್ ಬ್ಯಾಟ್ ಬೀಸುವಂತೆ, ಆಗ ಹೋಮ್ ಕಂಡೀಷನ್ಸ್ ಹೊರತಾಗಿ ಗಿಲ್ಕ್ರಿಸ್ಟ್, ಸಿಂಗಲ್ ಹ್ಯಾಂಡ್ ಮ್ಯಾಚ್ ವಿನ್ನರ್ ಆಗಿದ್ರು.
ರಿಷಭ್ ಪಂತ್ ಭವಿಷ್ಯದ ಶ್ರೇಷ್ಠ ವಿಕೆಟ್ ಕೀಪರ್..?
15 ಸಾವಿರ ರನ್, 800 ವಿಕೆಟ್ ಪಡೆದ ಗಿಲ್ಕ್ರಿಸ್ಟ್ ಜೊತೆ ರಿಷಭ್ ಪಂತ್ ಹೋಲಿಸ್ತಾ ಇರೋದು, ಕೆಲವರಿಗೆ ನಗು ತರಿಸಬಹುದು. ಆದ್ರೆ, ಭವಿಷ್ಯದಲ್ಲಿ ಪಂತ್ಗೆ, ಗಿಲ್ಕ್ರಿಸ್ಟ್ ಸ್ಥಾನ ತುಂಬಬಲ್ಲ ತಾಕತ್ತು ಇದೆ. ಕ್ವಿಂಟನ್ ಡಿಕಾಕ್, ಜೋಸ್ ಬಟ್ಲರ್ನ್ನ ಹಿಂದಿಕ್ಕಿ, ಮಾಡ್ರನ್ ಡೇ ಕ್ರಿಕೆಟ್‌ನ ಶ್ರೇಷ್ಠ ವಿಕೆಟ್ ಕೀಪರ್ ಆಗಿ ರೂಪುಗೊಳ್ಳಬಲ್ಲ ಸಾಮರ್ಥ್ಯ ಇದೆ. ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಇಯಾನ್ ಸ್ಮಿತ್, ಇಬ್ಬರನ್ನು ಹೋಲಿಕೆ ಮಾಡಿದ್ದಾರೆ. ಜೊತೆಗೆ ಪಂತ್ಗೆ ಮಹತ್ವದ ಸಲಹೆಯನ್ನ ನೀಡಿದ್ದಾರೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?
ಪಂತ್ ದೂರ ಸಾಗಬೇಕು..!
26 ವರ್ಷದ ಕ್ರಿಕೆಟಿಗನ್ನು ಗಿಲ್ಕ್ರಿಸ್ಟ್ಗೆ ಹೋಲಿಸಲು ನಾವು ಕಾಯಬೇಕಿದೆ. ಗಿಲ್ಕ್ರಿಸ್ಟ್ ಮಟ್ಟವನ್ನು ತಲುಪಲು ಪಂತ್, ಬಹಳ ದೂರ ಸಾಗಬೇಕಿದೆ. ಆದ್ರೆ, ಇಬ್ಬರೂ ಟೆಸ್ಟ್ ಕ್ರಿಕೆಟ್ನಲ್ಲಿ ಕೆಳ ಕ್ರಮಾಂಕದಲ್ಲಿ ಮತ್ತು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮೇಲ್ಪಂಕ್ತಿಯಲ್ಲಿ ಬ್ಯಾಟಿಂಗ್ ಮಾಡ್ತಾರೆ. ಹೀಗಾಗಿ ಗಿಲ್ಕ್ರಿಸ್ಟ್ ಹಾಗೂ ಪಂತ್ ನಡುವೆ ಸಾಮ್ಯತೆ ಇದೆ.
ಇಯಾನ್ ಸ್ಮಿತ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್.. ಇಬ್ಬರ ಮೃತದೇಹಗಳು ಪತ್ತೆ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಸ್ಮಿತ್, ಹೇಳಿದಂತೆ ಪಂತ್ ಹಾಗೂ ಗಿಲ್ಕ್ರಿಸ್ಟ್ ನಡುವೆ ಹಲವು ಸಿಮಿಲಾರಿಟಿಗಳಿವೆ. ಆದ್ರೆ, ಪಂತ್, ಆಡಂ ಗಿಲ್ಕ್ರಿಸ್ಟ್ ಮೀರಿಸಬೇಕಂದ್ರೆ, ಈ ಡೈನಾಮಿಕ್ ಆಟವನ್ನ ಮತ್ತಷ್ಟು ದಿನ ಮುಂದುವರಿಯಬೇಕಿದೆ. ಸದ್ಯದ ಫಾರ್ಮ್ ಉಳಿಸಿಕೊಳ್ಳುವ ಜೊತೆ ಜೊತೆಗೆ ಬದಲಾದ ಕಾಲಕ್ಕೆ ತಕ್ಕಂತೆ ಆಟದಲ್ಲಿ ಇಂಪ್ರೂವ್ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಪಂತ್, ಭವಿಷ್ಯದ ಗಿಲ್ ಕ್ರಿಸ್ಟ್ ಆಗಲು ಸಾಧ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ