12 ಪಂದ್ಯಗಳಲ್ಲಿ ಅಟ್ಟರ್ ಫ್ಲಾಪ್..​ RCB ವಿರುದ್ಧ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ರಿಷಭ್​ ಪಂತ್​​

author-image
Bheemappa
Updated On
ನಿನ್ನೆಯ ದಿನ ಬರೀ ಬೌಂಡರಿಯಲ್ಲೇ ಡೀಲ್ ಮಾಡಿದ RCB.. ಒಟ್ಟು ದಾಖಲಾದ ಫೋರ್​ಗಳ ಸಂಖ್ಯೆ ಎಷ್ಟು..?
Advertisment
  • 6, 6, 6, 6, 6, 6 ಹಾಗೂ 10 ಬೌಂಡರಿಗಳಿಂದ ಪಂತ್ ಸೆಂಚುರಿ
  • ಐಪಿಎಲ್​ ಸೀಸನ್​ ಕೊನೆ ಪಂದ್ಯದಲ್ಲಿ ರಿಷಭ್ ಪಂತ್ ಸಿಡಿಲಬ್ಬರ
  • ಆರ್​ಸಿಬಿ ಬೌಲರ್​ಗಳ ಮೇಲೆ ಪರಾಕ್ರಮ ಮೆರೆದ ಲಕ್ನೋ ಕ್ಯಾಪ್ಟನ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಕ್ಯಾಪ್ಟನ್​ ರಿಷಭ್ ಪಂತ್ ಅವರು ಮನ ಮೋಹಕವಾದ ಸೆಂಚುರಿ ಬಾರಿಸಿದ್ದಾರೆ. ಸತತ ವೈಫಲ್ಯದಿಂದ ಬಳಲುತ್ತಿದ್ದ ರಿಷಭ್ ಪಂತ್ ಈ ಶತಕದಿಂದ ಬ್ಯಾಟಿಂಗ್​ ಟ್ರ್ಯಾಕ್​ಗೆ ಮರಳಿದಂತೆ ಆಗಿದೆ.

ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ನಾಯಕ ಜಿತೇಶ್ ಶರ್ಮಾ ಅವರು ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಇದರಿಂದ ಲಕ್ನೋ ಸೂಪರ್ ಜೇಂಟ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ಆರಂಭಿಕರಾಗಿ ಮ್ಯಾಥ್ಯೂ ಬ್ರೀಟ್ಜ್ಕೆ ಹಾಗೂ ಮಿಚೆಲ್ ಮಾರ್ಷ್​ ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 14 ರನ್​ಗೆ ಮ್ಯಾಥ್ಯೂ ವಿಕೆಟ್​ ಒಪ್ಪಿಸಿ ಹೊರ ನಡೆದರು.

ಇದನ್ನೂ ಓದಿ:IPL ಅಂತಿಮ ಲೀಗ್​ ಪಂದ್ಯದಲ್ಲಿ ಈ 2 ಐಕಾನಿಕ್​ ರೆಕಾರ್ಡ್ ಮಾಡ್ತಾರಾ ಕಿಂಗ್​ ಕೊಹ್ಲಿ?

publive-image

ಇವರಾದ ಮೇಲೆ ಕ್ರೀಸ್​ಗೆ ಆಗಮಿಸಿದ ರಿಷಭ್ ಪಂತ್, ಮಿಚೆಲ್​ ಮಾರ್ಷ್​ಗೆ ಉತ್ತಮ ಸಾಥ್ ಕೊಟ್ಟರು. ಹಾಗೇ ಬ್ಯಾಟಿಂಗ್ ವೇಗ ಪಡೆದ ರಿಷಭ್ ಪಂತ್, ಆರ್​ಸಿಬಿ ಬೌಲರ್​ಗಳನ್ನು ದಂಡಿಸಲು ಪ್ರಾರಂಭಿಸಿದರು. ಕಳೆದ 12 ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದ ರಿಷಭ್ ಪಂತ್ ಕೊನೆ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ವೈಭವ ಮಾಡಿದರು. ಸೆಂಚುರಿ ಸಿಡಿಸುತ್ತಿದ್ದಂತೆ ರಿಷಭ್ ಪಂತ್ ಫುಲ್ ಹ್ಯಾಪಿ ಆಗಿ ಸೆಲೆಬ್ರೆಷನ್ ಮಾಡಿದರು. ಪಿಚ್​​ನಲ್ಲಿ ಬ್ಯಾಟ್ ಕೆಳಗಿಟ್ಟು ಬ್ಯಾಕ್​ಫ್ಲಿಪ್​ ಹೊಡೆದು ಸಂಭ್ರಮಿಸಿದರು.

ಪಂದ್ಯದಲ್ಲಿ ಕೇವಲ 54 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್, 10 ಬೌಂಡರಿ ಹಾಗೂ 6 ಸಿಕ್ಸರ್​ಗಳಿಂದ 100 ರನ್​ಗಳನ್ನು ಸಿಡಿಸಿದರು. ಇದು ಈ ಸೀಸನ್​ನಲ್ಲಿ ಪಂತ್ ಅವರ ದೊಡ್ಡ ರನ್​ಗಳು ಆಗಿವೆ. ಕಳೆದ 12 ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ಪಂತ್ ಸತತ ವಿಫಲ ಅನುಭವಿಸಿದ್ದರು. ಇನ್ನು ಪಂದ್ಯದಲ್ಲಿ ಒಟ್ಟು 61 ಎಸೆತಗಳನ್ನು ಆಡಿದ ಪಂತ್ 11 ಅದ್ಭುತವಾದ ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್​​ಗಳಿಂದ 118 ರನ್​ ಬಾರಿಸಿ ಅಜೇಯರಾಗಿ ಉಳಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment