ಬ್ಯಾಕ್​ ಟು ಬ್ಯಾಕ್​ ಸೆಂಚುರಿ.. ಕನ್ನಡಿಗ ಕೆ.ಎಲ್ ರಾಹುಲ್ ಬೆನ್ನಲ್ಲೇ ರಿಷಭ್ ಪಂತ್​ ಶತಕ

author-image
Bheemappa
Updated On
ಬ್ಯಾಕ್​ ಟು ಬ್ಯಾಕ್​ ಸೆಂಚುರಿ.. ಕನ್ನಡಿಗ ಕೆ.ಎಲ್ ರಾಹುಲ್ ಬೆನ್ನಲ್ಲೇ ರಿಷಭ್ ಪಂತ್​ ಶತಕ
Advertisment
  • ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದ ವಿಕೆಟ್​ ಕೀಪರ್​
  • ಇಂಗ್ಲೆಂಡ್​ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ ರಿಷಭ್ ಪಂತ್
  • ಮೊದಲ ಟೆಸ್ಟ್​ನ ನಾಲ್ಕನೇ ದಿನದಾಟದಲ್ಲಿ ಇಬ್ಬರು 100 ಗಳಿಸಿದರು

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರು ಶತಕ ಬಾರಿಸಿದ ಬೆನ್ನಲ್ಲೇ ವಿಕೆಟ್​ ಕೀಪರ್​ ರಿಷಭ್ ಪಂತ್ ಅವರು ಮತ್ತೊಂದು ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ.

ಹೆಡಿಂಗ್ಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ​ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಅಮೋಘವಾದ ಬ್ಯಾಟಿಂಗ್ ಮಾಡುವ ಮೂಲಕ ರನ್​ ಗಳನ್ನು ಕಲೆ ಹಾಕುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ 471 ರನ್​ಗಳನ್ನು ಕೂಡಿ ಹಾಕಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಟೀಮ್ 465 ರನ್​ ಗಳಿಸಿ ಆಲೌಟ್ ಆಗಿತ್ತು. ಇದರಿಂದ ಭಾರತದ 6 ರನ್​ ಮುನ್ನಡೆ ಪಡೆದುಕೊಂಡಿತ್ತು.

ಇದನ್ನೂ ಓದಿ:202 ಎಸೆತ, 100 ರನ್​ ಬಾರಿಸಿದ KL ರಾಹುಲ್​.. ಕನ್ನಡಿಗನ ಬ್ಯಾಟಿಂಗ್​ಗೆ ಇಂಗ್ಲೆಂಡ್​ ಫುಲ್ ಡಲ್!

publive-image

ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಏಕೆಂದರೆ ಓಪನರ್ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತ್ತು. ಇವರ ಬೆನ್ನಲ್ಲೇ ಕ್ರೀಸ್​ಗೆ ಬಂದಿದ್ದ ಸಾಯಿ ಸುದರ್ಶನ್ ಕೇವಲ 30 ರನ್​ಗೆ ಕ್ಯಾಚ್​ಗೆ ಬಲಿಯಾಗಿದ್ದರು. ಇದಾದ ಮೇಲೆ ಕ್ರೀಸ್​ಗೆ ಬಂದಿದ್ದ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಕೇವಲ 8 ರನ್​ಗೆ ಔಟ್ ಆಗಿ ಭಾರೀ ನಿರಾಸೆ ಮೂಡಿಸಿದ್ದರು.

ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಕೇವಲ 130 ಬಾಲ್​ಗಳಲ್ಲಿ 13 ಬೌಂಡರಿ ಹಾಗೂ 2 ಅದ್ಭುತವಾದ ಸಿಕ್ಸರ್​ಗಳಿಂದ ಹಂಡ್ರೆಡ್​ ಬಾರಿಸಿದರು. ಈ ಟೆಸ್ಟ್​ ಪಂದ್ಯದಲ್ಲಿ ಪಂತ್ ಅವರ 2ನೇ ಶತಕ ಇದಾಗಿದೆ. ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಶತಕ ಸಿಡಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 202 ಬಾಲ್​ಗಳನ್ನ ಆಡಿದ ಕೆ.ಎಲ್ ರಾಹುಲ್ ಅವರು 13 ಅಂದವಾದ ಬೌಂಡರಿಗಳಿಂದ ಹಂಡ್ರೆಡ್​ ಬಾರಿಸಿ ಸಂಭ್ರಮಿಸಿದರು. ರಿಷಭ್ ಪಂತ್ ಅವರು ಮೊದಲ ಇನ್ನಿಂಗ್ಸ್​ನಲ್ಲಿ 134 ರನ್​ಗೆ ಔಟ್ ಆಗಿದ್ದರು. ಸದ್ಯ ಟೀಮ್ ಇಂಡಿಯಾ 3 ವಿಕೆಟ್​ಗೆ 291 ರನ್​ಗಳ ಮುನ್ನಡೆ ಪಡೆದುಕೊಂಡು ಬ್ಯಾಟಿಂಗ್ ಮಾಡುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment