6, 6, 6, 6, 6, 6, 6, 6; ರಿಷಭ್ ಪಂತ್ ಭರ್ಜರಿ ಸೆಂಚುರಿ.. RCB ಮುಂದಿದೆ ಬಿಗ್​ ಟಾರ್ಗೆಟ್​​

author-image
Bheemappa
Updated On
6, 6, 6, 6, 6, 6, 6, 6; ರಿಷಭ್ ಪಂತ್ ಭರ್ಜರಿ ಸೆಂಚುರಿ.. RCB ಮುಂದಿದೆ ಬಿಗ್​ ಟಾರ್ಗೆಟ್​​
Advertisment
  • ಆರ್​ಸಿಬಿ ಬೌಲರ್​ಗಳನ್ನು ಸತತ ಕಾಡಿದ ಕ್ಯಾಪ್ಟನ್​ ರಿಷಭ್ ಪಂತ್​
  • ಲಕ್ನೋ ತಂಡದ ಓಪನರ್​ ಮಿಚೆಲ್ ಮಾರ್ಷ್​ ಹಾಫ್​ಸೆಂಚುರಿ
  • ಬೃಹತ್ ರನ್​ಗಳನ್ನ ಟಾರ್ಗೆಟ್​ ಮಾಡುತ್ತಿರುವ ಬೆಂಗಳೂರು ತಂಡ

ನಾಯಕ ರಿಷಭ್ ಪಂತ್ ಅವರ ಅದ್ಭುತವಾದ ಸೆಂಚುರಿಯಿಂದ ಲಕ್ನೋ ಸೂಪರ್ ಜೇಂಟ್ಸ್​ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೃಹತ್​ ಮೊತ್ತದ ಟಾರ್ಗೆಟ್​ ಅನ್ನು ನೀಡಿದೆ.

ಲಕ್ನೋದ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ನಾಯಕ ಜಿತೇಶ್ ಶರ್ಮಾ ಅವರು ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಇದರಿಂದ ಲಕ್ನೋ ಸೂಪರ್ ಜೇಂಟ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ಓಪನರ್​ಗಳಾದ ಮಿಚೆಲ್ ಮಾರ್ಷ್ ಹಾಗೂ ಮ್ಯಾಥ್ಯೂ ಬ್ರೀಟ್ಜ್ಕೆ ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 14 ರನ್​ಗೆ ಮ್ಯಾಥ್ಯೂ ವಿಕೆಟ್​ ಒಪ್ಪಿಸಿ ಹೊರ ನಡೆದರು.

ಮ್ಯಾಥ್ಯೂ ಔಟ್​ ಆಗುತ್ತಿದ್ದಂತೆ ಬ್ಯಾಟಿಂಗ್​ ಬಂದ ರಿಷಭ್ ಪಂತ್ ಅವರು ಆರ್​​ಸಿಬಿ ಬೌಲರ್​ಗಳ ಮೇಲೆ ಮೆಲ್ಲಗೆ ಒತ್ತಡ ಏರಲು ಆರಂಭಿಸಿದರು. ಇನ್ನೊಂದೆಡೆ ಓಪನರ್​ ಮಿಚೆಲ್ ಮಾರ್ಷ್​ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ 37 ಬಾಲ್​ಗಳನ್ನು ಆಡಿದ ಮಿಚೆಲ್ ಮಾರ್ಷ್​​, 4 ಬೌಂಡರಿ ಹಾಗೂ 5 ಸಿಕ್ಸರ್​ಗಳಿಂದ 67 ರನ್​ಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು. ಈ ವೇಳೆ ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ವಿಕೆಟರ್ ಕೀಪರ್​ ಜಿತೇಶ್ ಶರ್ಮಾಗೆ ಕ್ಯಾಚ್​ ಕೊಟ್ಟರು.

ಇದನ್ನೂ ಓದಿ:ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟ ಟೀಮ್ ಯಾವುದು.. RCBನಾ?

publive-image

ಇನ್ನು ಮಿಚೆಲ್ ಮಾರ್ಷ್​ ಜೊತೆ ಬ್ಯಾಟಿಂಗ್​ನಲ್ಲಿ ಲಯ ಕಂಡುಕೊಂಡ ರಿಷಭ್ ಪಂತ್​, ಆರ್​ಸಿಬಿ ಬೌಲರ್​ಗಳ ಮೇಲೆ ಎರಗಿದರು. ಕಳೆದ ಪಂದ್ಯಗಳಲ್ಲಿ ಸತತ ವೈಫಲ್ಯಕ್ಕೆ ಒಳಗಾಗಿದ್ದ ಪಂತ್ ಕೊನೆಯ ಪಂದ್ಯದಲ್ಲಿ ಫಿನಿಕ್ಸ್​ನಂತೆ ಪ್ರದರ್ಶನ ನೀಡಿದರು. ಕೇವಲ 54 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್, 10 ಬೌಂಡರಿ ಹಾಗೂ 6 ಸಿಕ್ಸರ್​ಗಳಿಂದ ಸೆಂಚುರಿ ಬಾರಿಸಿದರು.

ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಒಟ್ಟು 61 ಎಸೆತಗಳನ್ನು ಆಡಿದ ಪಂತ್ 11 ಬೌಂಡರಿ, 8 ಸಿಕ್ಸರ್​​ಗಳಿಂದ 118 ರನ್​ ಬಾರಿಸಿ ಅಜೇಯರಾಗಿ ಉಳಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪೂರನ್, ಈ ಮ್ಯಾಚ್​ನಲ್ಲಿ ಕೇವಲ 13 ರನ್​ಗೆ ಕ್ಯಾಚ್ ಕೊಟ್ಟರು. ಇದರಿಂದ ಲಕ್ನೋ ತಂಡ 20 ಓವರ್​ಗಳಲ್ಲಿ 3 ವಿಕೆಟ್​ಗೆ 228 ರನ್​ಗಳ ಬೃಹತ್​​ ಟಾರ್ಗೆಟ್ ಅನ್ನು ಆರ್​ಸಿಬಿಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment