newsfirstkannada.com

Rishabh Pant: ಅಭಿಮಾನಿಗಳ ಅದೊಂದು ಕೊರಗಿಗೆ ಬ್ರೇಕ್ ಹಾಕಿದ ಪಂತ್​; ಫ್ಯಾನ್ಸ್​ ಫುಲ್ ಖುಷ್..!

Share :

Published April 1, 2024 at 12:21pm

    ವೈಜಾಗ್​ನಲ್ಲಿ ರಿಷಬ್ ಪಂತ್​ ಫೆಂಟಾಸ್ಟಿಕ್​ ಆಟ

    ಅರ್ಧಶತಕ ಸಿಡಿಸಿ ಅಬ್ಬರಿಸಿದ ಸಿಡಿಗುಂಡು ಪಂತ್

    ಗುರುವಿನ ಎದುರು ಕಮ್​ಬ್ಯಾಕ್​ ಇನ್ನಿಂಗ್ಸ್​ ಆಟ

ಈ ಬಾರಿಯ ಐಪಿಎಲ್​ ಜಾತ್ರೆ ಆರಂಭಕ್ಕೂ ಮುನ್ನ ಸೆನ್ಸೇಷನ್​ ಸೃಷ್ಟಿಸಿದ್ದ ವಿಚಾರ ಅಂದ್ರೆ ಅದು ಡೇರ್​ ಡೆವಿಲ್​ ರಿಷಭ್​ ಪಂತ್​ ಕಮ್​ಬ್ಯಾಕ್​. ರಿಷಭ್​ ಪಂತ್​ ಕಮ್​ಬ್ಯಾಕ್​ ಏನೋ ಮಾಡಿದ್ರು. ಆದ್ರೆ ಪರ್ಫಾಮ್​ ಮಾಡ್ತಿಲ್ಲ ಅನ್ನೋ ಕೊರಗು ಕ್ರಿಕೆಟ್​​ ಅಭಿಮಾನಿಗಳನ್ನ ಕಾಡ್ತಿತ್ತು. ಕೊನೆಗೂ ಆ ಕೊರಗಿಗೆ ಬ್ರೇಕ್​ ಬಿದ್ದಿದೆ.

ರಿಷಭ್​ ಪಂತ್​ ಅಂದ್ರೆ ಕ್ರಿಕೆಟ್​ ಪ್ರೇಮಿಗಳ ಪಾಲಿನ ಪ್ಯೂರ್​ ಎಂಟರ್​​ಟೈನರ್​. ಎದುರಾಳಿ ಯಾರು? ಪಿಚ್​ ಹೇಗಿದೆ? ಸಿಚ್ಯುವೇಶನ್​ ಏನು? ಅನ್ನೋದು ಪಂತ್​ಗೆ ಮ್ಯಾಟರ್​ ಆಗೋದೆ ಇಲ್ಲ. ಮೊದಲ ಎಸೆತದಿಂದಲೇ ಧೂಳ್​ ಎಬ್ಬಿಸೋದು, ಬೌಂಡರಿ-ಸಿಕ್ಸರ್​​ಗಳ ಸುರಿಮಳೆ ಸುರಿಸಿ ಎಂಟರ್​​ಟೈನ್​ ಮಾಡೋದು ಪಂತ್​ರ ಹವ್ಯಾಸ. ಈ ಬಾರಿ ಐಪಿಎಲ್​ಗೆ ಪಂತ್​ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋ ಸುದ್ದಿ ಹೊರ ಬಿದ್ದಾಗಲೂ ಫ್ಯಾನ್ಸ್​ ನಿರೀಕ್ಷೆ ಮಾಡಿದ್ದು ಅದೇ ಆಟವನ್ನ..

453 ದಿನ, 1 ವರ್ಷ, 3 ತಿಂಗಳು
ಹೌದು.. 1 ವರ್ಷ, 3 ತಿಂಗಳು.. ಸರಿಯಾಗಿ 453 ದಿನಗಳ ಬಳಿಕ ಕಮ್​​ಬ್ಯಾಕ್​​ ಮಾಡಿದ ರಿಷಭ್​ ಪಂತ್​ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಅಸಲಿ ಅಖಾಡದಲ್ಲಿ ನಿರೀಕ್ಷೆ ಹುಸಿಯಾಗಿಬಿಡ್ತು. ಪಂತ್​ ಕಮ್​​ಬ್ಯಾಕ್​​ ಸುದ್ದಿ ಕೇಳಿ ಫುಲ್​ ಖುಷ್​ ಆಗಿದ್ದ ಫ್ಯಾನ್ಸ್​​ಗೆ ಹಳೆ ಖದರ್​​ ಕಾಣಿಸ್ತಿಲ್ವಲ್ಲಾ ಅನ್ನೋ ಬೇಸರ ಬಿಡದೇ ಕಾಡಿತ್ತು.

ಮೊದಲ ಪಂದ್ಯ: 18 ರನ್​ಗಳಿಗೆ ಆಟ ಅಂತ್ಯ
ಆಡಿದ ಮೊದಲ ಪಂದ್ಯದಲ್ಲಿ ರಿಷಭ್​ ಪಂತ್​ ವೈಫಲ್ಯ ಅನುಭವಿಸಿದ್ರು. ಪಂಜಾಬ್​ ವಿರುದ್ಧ 18 ರನ್​ಗಳಿಸಿದ್ದ ವೇಳೆ ಅನಾವಶ್ಯಕ ಶಾಟ್​ಗೆ ಕೈ ಹಾಕಿ ವಿಕೆಟ್​ ಒಪ್ಪಿಸಿದ್ರು.

2ನೇ ಪಂದ್ಯ: ಸೈಡ್​​ಸ್ಕ್ರೀನ್​ಗೆ ಬ್ಯಾಟ್​ನಿಂದ ಬಾರಿಸಿ ಆಕ್ರೋಶ
ಜೈಪುರದಲ್ಲಿ ರಾಜಸ್ಥಾನ್​ ರಾಯಲ್ಸ್​ ಎದುರಿನ ಆಡಿದ 2ನೇ ಪಂದ್ಯದಲ್ಲೂ ಪಂತ್​ ಅಬ್ಬಬ್ಬಾ ಅನ್ನುವಂತ ಆಡವಾಡಲಿಲ್ಲ. ಕೇವಲ 28 ರನ್​ಗಳಿಸಿ ಸುಲಭಕ್ಕೆ ವಿಕೆಟ್​ ಒಪ್ಪಿಸಿದ್ರು. ಇದ್ರಿಂದ ತೀವ್ರ ನಿರಾಶರಾದ ಪಂತ್​​, ಪೆವಿಲಿಯನ್​ಗೆ ತೆರಳ್ತಾ ಸೈಡ್​ ಸ್ಕ್ರೀನ್​ಗೆ ಬ್ಯಾಟ್​​ನಿಂದ ಹೊಡೆದು FRUSTRATION​ ಹೊರ ಹಾಕಿದ್ರು.

3ನೇ ಪಂದ್ಯ: ವೈಜಾಗ್​ನಲ್ಲಿ ಪಂತ್​​ ಫೆಂಟಾಸ್ಟಿಕ್​ ಆಟ
ಮೊದಲ 2 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಪಂತ್​, ನಿನ್ನೆ ಆಡಿದ 3ನೇ ಪಂದ್ಯದಲ್ಲಿ ಧಮ್​ಧಾರ್​ ಪರ್ಫಾಮೆನ್ಸ್​ ನೀಡಿದ್ರು. ಫೆಂಟಾಸ್ಟಿಕ್ ಆಟವಾಡಿದ ಪಂತ್​, ಹಳೆ ಖದರ್​ನಲ್ಲಿ ಬ್ಯಾಟ್​ ಬೀಸಿದ್ರು. 4 ಬೌಂಡರಿ, 3 ಸಿಕ್ಸರ್​ ಸಿಡಿಸಿ ಆರ್ಭಟಿಸಿದ್ರು.

ಅರ್ಧಶತಕದ ಅಬ್ಬರ, ಗುರುವಿನ ಎದುರು ಕಮ್​ಬ್ಯಾಕ್​.!
ನಿನ್ನೆ ನಿಧಾನಗತಿಯ ಆರಂಭ ಪಡೆದುಕೊಂಡರೂ ಕೂಡ ಆತ್ಮವಿಶ್ವಾಸದ ಆಟವಾಡಿದ್ರು. ಸೆಟಲ್​ ಆಗುವವರೆ ತಾಳ್ಮೆಯ ಆಟವಾಡಿ ಬಳಿಕ ಘರ್ಜಿಸಿದ್ರು. ಗುರು ಧೋನಿಯೇ ಎದುರು 2021ರ ಬಳಿಕ ಮೊದಲ ಹಾಫ್​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಪಂದ್ಯದಲ್ಲಿ 32 ಎಸೆತಗಳನ್ನ ಎದುರಿಸಿದ ಪಂತ್​, 159.38 ಸ್ಟ್ರೇಕ್​ರೇಟ್​​ನಲ್ಲಿ 51 ರನ್​ ಚಚ್ಚಿದ್ರು. ಮಥಿಶಾ ಪತಿರಣ ಎಸೆದ 18 ಓವರ್​ನಲ್ಲಿ ಸಿಕ್ಸರ್​ ಸಹಿತ ಬ್ಯಾಕ್​ ಟು ಬ್ಯಾಕ್​ ಬೌಂಡರಿ ಬಾರಿಸಿದ್ದು ಹಳೆ ಆಟವನ್ನ ಒಮ್ಮೆ ನೆನಪಿಸಿತು.

ಒಟ್ಟಿನಲ್ಲಿ, ಡೇರ್​​ಡೆವಿಲ್​ ರಿಷಭ್​ ಪಂತ್​ ಕಮ್​ಬ್ಯಾಕ್​ ಮಾಡಿದ ಬಳಿಕ ಆಡಿದ ಮೊದಲ 2 ಪಂದ್ಯಗಳಲ್ಲಿ ಕೀಪಿಂಗ್​ನಲ್ಲಿ ಪಾಸ್​ ಆಗಿದ್ರು. ಇದೀಗ 3ನೇ ಪಂದ್ಯದೊಂದಿಗೆ ಬ್ಯಾಟಿಂಗ್​ ಅಗ್ನಿಪರೀಕ್ಷೆಯನ್ನೂ ಗೆದ್ದಿದ್ದಾರೆ. ಅರ್ಧಶತಕ ಸಿಡಿಸಿ ಕಮ್​ಬ್ಯಾಕ್​ ಮಾಡಿರೋ ಪಂತ್​ ಮುಂದಿನ ಪಂದ್ಯಗಳಲ್ಲೂ ಸಿಡಿಲಬ್ಬರದ ಪ್ರದರ್ಶನ ನೀಡಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Rishabh Pant: ಅಭಿಮಾನಿಗಳ ಅದೊಂದು ಕೊರಗಿಗೆ ಬ್ರೇಕ್ ಹಾಕಿದ ಪಂತ್​; ಫ್ಯಾನ್ಸ್​ ಫುಲ್ ಖುಷ್..!

https://newsfirstlive.com/wp-content/uploads/2024/04/Pant-dhoni.jpg

Load More