ವಿಕೆಟ್​ ಕೀಪರ್​ಗೆ ಆಗಿದ್ದೇನು..? ನೋವಿನಿಂದ ನರಳಾಡಿದ ರಿಷಭ್​ ಪಂತ್!​

author-image
Bheemappa
Updated On
ವಿಕೆಟ್​ ಕೀಪರ್​ಗೆ ಆಗಿದ್ದೇನು..? ನೋವಿನಿಂದ ನರಳಾಡಿದ ರಿಷಭ್​ ಪಂತ್!​
Advertisment
  • ಟೆಸ್ಟ್ ಬ್ಯಾಟಲ್​ಗೂ ಮುನ್ನ ಟೀಮ್ ಇಂಡಿಯಾಗೆ ಮಹಾಘಾತ!
  • ಬೆಕ್​ಹ್ಯಾಮ್‌ನಲ್ಲಿ ನೆಟ್ ಸೆಷನ್​​ನಿಂದ ದೂರ ಉಳಿದ ಕೀಪರ್
  • ಸಮರಾಭ್ಯಾಸದಲ್ಲೇ ಟೀಮ್ ಇಂಡಿಯಾಗೆ ಇಂಜುರಿ ಟೆನ್ಶನ್

ತೆಂಡುಲ್ಕರ್, ಆ್ಯಂಡರ್ಸನ್ ಬ್ಯಾಟ್ ಆ್ಯಂಡ್ ಬಾಲ್ ಬ್ಯಾಟನ್​​ನ ಮಹಾಯುದ್ಧಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಟೆಸ್ಟ್​ ಆರಂಭಕ್ಕೆ 9 ದಿನಗಳಷ್ಟೇ ಬಾಕಿಯಿದೆ. ಆದ್ರೆ, ಅದಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಮಹಾಘಾತ ಎದುರಾಗಿದೆ. ಗೇಮ್ ಚೇಂಜರ್ ರಿಷಭ್​​​​​​​ ಪಂತ್​, ಟೀಮ್​ ಮ್ಯಾನೇಜ್​​ಮೆಂಟ್​​ಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಅಷ್ಟಕ್ಕೂ ವಿಕೆಟ್ ಕೀಪರ್​ ಪಂತ್​ಗೆ ಆಗಿದ್ದೇನು?.

ಇಂಡೋ- ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ವಿಶ್ವ ಕ್ರಿಕೆಟ್​ನ ಮದಗಜಗಳ ಕಾದಾಟ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹುಟ್ಟಿಹಾಕಿದೆ. ಇಂಗ್ಲೆಂಡ್ ಪರ್ಯಟನೆಯಲ್ಲಿರುವ ಯಂಗ್​ ಇಂಡಿಯಾ, ಹೊಸ ಚರಿತ್ರೆ ಸೃಷ್ಟಿಸುವ ಇರಾದೆಯಲ್ಲಿದೆ. ಇದಕ್ಕಾಗಿ ಗೇಮ್​ಪ್ಲಾನ್, ಸ್ಟ್ರಾಟರ್ಜಿ ಮಾಡ್ತಿದೆ. ಆದ್ರೆ, ಸಮರಾಭ್ಯಾಸದ ಹೊತ್ತಿನಲ್ಲೇ ಟೀಮ್ ಇಂಡಿಯಾಗೆ ಇಂಜುರಿ ಟೆನ್ಶನ್ ಶುರುವಾಗಿದೆ.

publive-image

ರಿಷಭ್​​ ಪಂತ್​ಗೆ ಇಂಜುರಿ.. ಕ್ಯಾಂಪ್​ನಲ್ಲಿ ಟೆನ್ಶನ್​.. ಟೆನ್ಶನ್​..!

ಇಂಡೋ, ಇಂಗ್ಲೆಡ್​​​ ಟೆಸ್ಟ್​ ಕದನದ ಆರಂಭಕ್ಕೆ 9 ದಿನ ಮಾತ್ರ ಬಾಕಿ. ಈ ಮಹತ್ವದ ಟೆಸ್ಟ್ ಸರಣಿಗಾಗಿ ಟೀಮ್​ ಇಂಡಿಯಾ ಸಿದ್ಧತೆ ಆರಂಭಿಸಿದೆ. ಆದ್ರೆ, ಈ ಸಿದ್ಧತೆಯ ಹಂತದಲ್ಲೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ವೈಸ್​ ಕ್ಯಾಪ್ಟನ್ ರಿಷಭ್ ಪಂತ್​ ಇಂಜುರಿಗೆ ತುತ್ತಾಗಿದ್ದಾರೆ. ಪಂತ್​​ ನೆಟ್ಸ್​ನಲ್ಲಿ ಬ್ಯಾಟಿಂಗ್​ ವೇಳೆ ಗಾಯಗೊಂಡಿರೋದು ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಟೆನ್ಶನ್ ಹೆಚ್ಚಾಗುವಂತೆ ಮಾಡಿದೆ.

ಎಡಗೈಗೆ ಬಡಿದ ಚೆಂಡು.! ನೋವಲ್ಲಿ ಪಂತ್​ ನರಳಾಟ.!

ಬೆಕ್​ಹ್ಯಾಮ್‌ನಲ್ಲಿ ರಿಷಭ್ ಪಂತ್​​ ಬ್ಯಾಟಿಂಗ್ ಅಭ್ಯಾಸ ನಡೆಸ್ತಿದ್ರು. ಈ ವೇಳೆ ಮಿಸ್​ ಆದ ಎಸೆತವೊಂದು ರಿಷಭ್ ಪಂತ್​​ರ ಎಡಗೈಗೆ ಬಿದ್ದಿದೆ. ಗಂಭೀರ ನೋವಲ್ಲೇ ರಿಷಭ್ ಪಂತ್​ ನರಳಾಡಿದ್ದಾರೆ. ನೋವಿನಿಂದ ಬಳಲುತ್ತಿದ್ದ ರಿಷಭ್ ಪಂತ್​​ಗೆ ಟೀಮ್ ಡಾಕ್ಟರ್​, ಐಸ್​​ಪ್ಯಾಕ್​ ಇಟ್ಟು ಟ್ರೀಟ್​ಮೆಂಟ್ ನೀಡಿದ್ದಾರೆ. ಕೆಲ ಸಮಯದ ನಂತರ ತೋಳಿಗೆ ಬ್ಯಾಂಡೇಜ್ ಕಟ್ಟಿದ್ದಾರೆ.

ನೆಟ್ ಸೆಷನ್​ನಿಂದ ದೂರ.. ಮುಂದಿನ ಪಂದ್ಯಕ್ಕೆ ಡೌಟ್.?

ಗಂಭೀರ್ ಇಂಜುರಿ ನೋವಿನಿಂದ ಬಳಲಿದ ರಿಷಭ್ ಪಂತ್, ನೆಟ್ ಸೆನಷ್​ನಿಂದ ದೂರ ಉಳಿದಿದ್ದಾರೆ. ವೈದ್ಯರ ಸೂಚನೆಯಂತೆ ವಿಶ್ರಾಂತಿಗೆ ಮರಳಿದ್ದಾರೆ. ಕೆಲ ಮೂಲಗಳ ಪ್ರಕಾರ ರಿಷಭ್​​ ಪಂತ್ ಗಂಭೀರ ನೋವಿನಿಂದ ಬಳಲುತ್ತಿದ್ದು, ಇಂಜುರಿ ಆತಂಕಕಾರಿಯಾಗಿದೆ ಎನ್ನಲಾಗ್ತಿದೆ. ಹೀಗಾಗಿ ಮೊದಲ ಪಂದ್ಯಕ್ಕೆ ಅನುಮಾನ ಎನ್ನಲಾಗ್ತಿದೆ. ಇದು ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಹೊಸ ಟೆನ್ಶನ್ ಹುಟ್ಟಿಹಾಕಿದೆ.

ಟ್ರಬಲ್ ಶೂಟರ್​ ಇಲ್ದಿದ್ರೆ ಟೀಮ್ ಇಂಡಿಯಾಗೆ ಟ್ರಬಲ್!

ರಿಷಭ್​ ಪಂತ್, ಇಂಗ್ಲೆಂಡ್ ಸಿರೀಸ್​ನಲ್ಲಿ ಟೀಮ್ ಇಂಡಿಯಾ ಕೀ ಪ್ಲೇಯರ್, ಆ್ಯಂಡ್ ಗೇಮ್ ಚೇಂಜರ್. ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಪಂತ್, ಕ್ಷಣಾರ್ಧದಲ್ಲೇ ಪಂದ್ಯದ ಗತಿ ಬದಲಿಸಬಲ್ಲರು. ಒಂದು ರೀತಿ ಟೀಮ್ ಇಂಡಿಯಾದ ಟ್ರಬಲ್ ಶೂಟರ್. ಇದೀಗ ಇದೇ ಟ್ರಬಲ್ ಶೂಟರ್​​​ ಮೊದಲ ಪಂದ್ಯಕ್ಕೆ ಅಲಭ್ಯರಾದ್ರೆ, ಟೀಮ್ ಇಂಡಿಯಾ ಟ್ರಬಲ್​ನಲ್ಲಿ ಸಿಲುಕೋ ಸಾಧ್ಯತೆಯಿದೆ.

ಇದನ್ನೂ ಓದಿ: 55 ಕೆ.ಜಿ ದೇಹದ ತೂಕ ಇಳಿಸಿದ ಬ್ಯೂಟಿ.. ಖಾಲಿ ಹೊಟ್ಟೆಯಲ್ಲಿ ಅರಿಶಿಣ ನೀರು ಕುಡಿದ್ರೆ ತೆಳ್ಳಗೆ ಆಗ್ತಾರಾ?

publive-image

ರಿಷಭ್​ ಪಂತ್ ಸ್ಥಾನ ತುಂಬ್ತಾರಾ ಧ್ರುವ್ ಜುರೇಲ್..?

ಪಂತ್ ಅಲಭ್ಯತೆಯಲ್ಲಿ ಸ್ಥಾನ ಯಾರ್ ತುಂಬ್ತಾರೆ ಅನ್ನೋದೆ ಪ್ರಶ್ನೆ ಈಗ ಎದುರಾಗಿದೆ. ಧ್ರುವ್ ಜುರೇಲ್ ಇದಕ್ಕೆ ಅನ್ಸರ್​ ಆಗಿದ್ದಾರೆ. ಇಂಗ್ಲೆಂಡ್ ಲಯನ್ಸ್ ಎದುರಿನ ಮೊದಲ ಅನಧಿಕೃತ ಟೆಸ್ಟ್​ನಲ್ಲಿ 94 ರನ್ ಗಳಿಸಿದ್ದ ಜುರೇಲ್, ಇದೇ ಪಂದ್ಯದ ಸೆಕೆಂಡ್ ಇನ್ನಿಂಗ್ಸ್​ನಲ್ಲೂ ಅಜೇಯ 53 ರನ್ ಗಳಿಸಿದ್ರು. 2ನೇ ಟೆಸ್ಟ್​ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿರುವ ಜುರೇಲ್​, ಪಂತ್​ ಸ್ಥಾನಕ್ಕೆ ಬೆಸ್ಟ್​ ಆಯ್ಕೆಯಾಗಿದ್ದಾರೆ.

ಧೃವ್​​ ಜುರೇಲ್​​ ಆಡಿದ್ರೂ ಪಂತ್​ರಷ್ಟು ಇಂಪ್ಯಾಕ್ಟ್​ ಮೂಡಿಸೋದು ಅನುಮಾನವೇ. ಡೇರ್​​ಡೆವಿಲ್​ ಪಂತ್​ ಇದ್ರೇನೆ ಎದುರಾಳಿ ತಂಡಕ್ಕೆ ಒಂದು ಭಯ ಇರುತ್ತೆ. ಜೂನ್​ 20ರ ವೇಳೆಗೆ ಪಂತ್​ ಫುಲ್ ಫಿಟ್ ಆಗಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment