newsfirstkannada.com

ಗಾಯಕ್ವಾಡ್​ಗೆ ಬಿಗ್​ ಶಾಕ್ ಕೊಟ್ಟ ರಿಷಬ್​ ಪಂತ್.. CSK ಕ್ಯಾಪ್ಟನ್ ಆಗ್ತಾರಾ ಯಂಗ್ ಪ್ಲೇಯರ್?

Share :

Published July 20, 2024 at 8:04pm

    ಚೆನ್ನೈ ತಂಡದಲ್ಲಿ ಗಾಯಕ್ವಾಡ್ ನಾಯಕತ್ವ ಯಾರಿಗೂ ಹಿಡಿಸಲಿಲ್ವಾ?

    ಡೆಲ್ಲಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಂಗ್ ಪ್ಲೇಯರ್ ಪಂತ್

    2025ರ ಐಪಿಎಲ್​​ನಲ್ಲಿ ಪಂತ್ ಚೆನ್ನೈ ತಂಡದ ಕ್ಯಾಪ್ಟನ್ ಆಗ್ತಾರಾ..?

ತನ್ನ ಕರಿಯರ್​ನ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಿರುವ ಭಾರತದ ಭರವಸೆಯ ಯಂಗ್ ಪ್ಲೇಯರ್​ ರಿಷಬ್ ​ ಪಂತ್, ಟಿ20 ಪಂದ್ಯಗಳಲ್ಲಿ ಎದುರಾಳಿ ಪಾಲಿನ ವಿಲನ್ ಆಗಿದ್ದಾರೆ. ದಂಡಂದಶ ಗುಣಂ ಆಟದಿಂದಲೇ ಪಂತ್ ಎಲ್ಲರ ಮನ ಗೆಲ್ಲುತ್ತಿರುತ್ತಾರೆ. ವಿಕೆಟ್ ಹಿಂದೆಯು ಸಖತ್ ಮ್ಯಾಜಿಕ್​ ಮಾಡ್ತಾರೆ. ಸದ್ಯ ಈ ಯಂಗ್​ ಎನರ್ಜಿಟಿಕ್ ಚಾಣಾಕ್ಷ ಕೀಪಿಂಗ್ ಮಾಡುವ ರಿಷಬ್​ ಪಂತ್​ ಬಗ್ಗೆ ಹೊಸ ಅಪ್​ಡೇಟ್​ ಹೊರ ಬಿದ್ದಿದೆ.

ಇದನ್ನೂ ಓದಿ: ಅಲ್ಲಿ ಕೋರ್ಟ್​ ಆದೇಶ ನೀಡಿತ್ತು.. ಇಲ್ಲಿ ತಾಯಿ ಅಂತ್ಯಕ್ರಿಯೆ ಮುಗಿದಿತ್ತು; ಅಮ್ಮನ ನೋಡೋ ಭಾಗ್ಯ ರಘುಗೆ ಇರಲಿಲ್ವಾ?

2024ರ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್​ ಆಗಿ ರಿಷಬ್ ಪಂತ್ ಅವರು ಸಖತ್ ಆಗಿ ಮಿಂಚಿದ್ದರು. ಟೂರ್ನಿಯಲ್ಲಿ ತಂಡದ ಪರ ಅಧಿಕ ರನ್​ಗಳನ್ನು ಗಳಿಸಿದ್ದರು. ಕಾರ್ ಆ್ಯಕ್ಸಿಡೆಂಟ್ ಬಳಿಕವೂ ಪಂತ್ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ಟೀಮ್ ಅನ್ನು ಪಂತ್ ಅವರು ತೊರೆಯುತ್ತಾರೆ ಎನ್ನಲಾಗುತ್ತಿದೆ. ಸದ್ಯ ಇದರ ಬೆನ್ನಲ್ಲೇ ರಿಷಬ್ ಪಂತ್ ಬಗ್ಗೆ ಹೊಸ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಇದನ್ನೂ ಓದಿ: ಬೆಂಕಿ, ಹಿಂಸಾಚಾರ, ಕರ್ಫ್ಯೂ.. ಬಾಂಗ್ಲಾದೇಶದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ದೊಡ್ಡ ಅಪಾಯ!

ಎಂಎಸ್​ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ ಟೀಮ್​​ನಲ್ಲಿದ್ರೂ ನಾಯಕ ಸ್ಥಾನವನ್ನು ರುತುರಾಜ್ ಗಾಯಕ್ವಾಡ್ ಮಾಡುತ್ತಿದ್ದಾರೆ. ಆದರೆ 2025ರ ಐಪಿಎಲ್​​ನಲ್ಲಿ ಚೆನ್ನೈ ತಂಡದ ನೂತನ ಕ್ಯಾಪ್ಟನ್​ ರಿಷಬ್ ಪಂತ್ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿದೆ. ಹೀಗಾಗಿ 2025ರ ಐಪಿಎಲ್​ ಟೂರ್ನಿ ವೇಳೆಗೆ ಡೆಲ್ಲಿ ನಾಯಕತ್ವ ತೊರೆದು ರಿಷಬ್ ಪಂತ್ ಕ್ಯಾಪ್ಟನ್ ಆಗಿ ಚೆನ್ನೈ ತಂಡಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಎರಡು ತಂಡಗಳ ಫ್ರಾಂಚೈಸಿಯಾಗಲಿ, ಪಂತ್ ಆಗಲಿ ಅಧಿಕೃತವಾಗಿ ಹೇಳಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಾಯಕ್ವಾಡ್​ಗೆ ಬಿಗ್​ ಶಾಕ್ ಕೊಟ್ಟ ರಿಷಬ್​ ಪಂತ್.. CSK ಕ್ಯಾಪ್ಟನ್ ಆಗ್ತಾರಾ ಯಂಗ್ ಪ್ಲೇಯರ್?

https://newsfirstlive.com/wp-content/uploads/2024/07/DHONI_RISHAB.jpg

Load More