/newsfirstlive-kannada/media/post_attachments/wp-content/uploads/2025/05/Rishabh_pant.jpg)
ಕೊನೆಯ ಲೀಗ್ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ನಲ್ಲಿ ಅಕ್ಷರಶಃ ಚಿತ್ತಾರ ಮೂಡಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳ ವಿರುದ್ಧ ಸಿಡಿದು ನಿಂತ ಕ್ಯಾಪ್ಟನ್ ಪಂತ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಸದ್ಯ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಕಾರಣದಿಂದ ದೊಡ್ಡ ಮೊತ್ತದಲ್ಲಿ ನಾಯಕ ರಿಷಭ್ ಪಂತ್ ಅವರಿಗೆ ಬಿಸಿಸಿಐ ದಂಡ ವಿಧಿಸಿದೆ. ಲಕ್ನೋದ 11 ಆಟಗಾರರೂ ಶೇಕಡಾ 50 ರಷ್ಟು ದಂಡ ಕಟ್ಟಬೇಕಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂರ್ ಜೈಂಟ್ಸ್ ನಡುವಿನ 70ನೇ ಪಂದ್ಯದಲ್ಲಿ ಸ್ಲೋಓವರ್ ರೇಟ್ (ನಿಧಾನಗತಿಯ ಓವರ್ ದರ) ಕಾರಣದಿಂದ ನಾಯಕ ಪಂತ್‌ಗೆ ದಂಡ ಹಾಕಲಾಗಿದೆ. ತಂಡವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅಂದರೆ ನಿಗದಿತ ಸಮಯದೊಳಗೆ ಇನ್ನಿಂಗ್ಸ್ ಅನ್ನು ಮುಗಿಸದಿದ್ದಕ್ಕೆ ಪಂತ್‌ಗೆ ಫೈನ್ ಹಾಕಲಾಗಿದೆ.
30 ಲಕ್ಷ ರೂಪಾಯಿಗಳ ದಂಡ
ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ರಿಷಭ್ ಪಂತ್ ನೇತೃತ್ವದ ತಂಡ ಮೂರನೇ ಬಾರಿಗೆ ಹೀಗೆ ಮಾಡಿದೆ. ಹೀಗಾಗಿ ರಿಷಭ್ ಪಂತ್‌ಗೆ ಒಟ್ಟು 30 ಲಕ್ಷ ರೂಪಾಯಿಗಳ ದಂಡ ಜೊತೆಗೆ ತಂಡದಲ್ಲಿದ್ದ 11 ಆಟಗಾರರಿಗೆ 12 ಲಕ್ಷ ರೂಪಾಯಿ ದಂಡ ಅಥವಾ ಪಂದ್ಯದ ಶೇಕಡಾ 50 ರಷ್ಟು ದಂಡ ವಿಧಿಸಲಾಯಿತು ಎಂದು ಐಪಿಎಲ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಪ್ಲೇಯಿಂಗ್-11ರ ಆಟಗಾರರಿಗೆ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.
ಆರ್ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯದ ಮೇ 27ರ ರಾತ್ರಿ 11:30ರ ಒಳಗೆ ಮುಗಿಯಬೇಕಿತ್ತು. ಆದರೆ ರಾತ್ರಿ 12 ಗಂಟೆವರೆಗೆ ಪಂದ್ಯ ನಡೆದಿದ್ದರಿಂದ ಐಪಿಎಲ್‌ನ ನೀತಿ ಸಂಹಿತೆಯ ಅಡಿ ಫೈನ್ ಹಾಕಲಾಗಿದೆ. ಇನ್ನು ಈ ಪಂದ್ಯದಲ್ಲಿ ಒಟ್ಟು 61 ಎಸೆತಗಳನ್ನು ಎದುರಿಸಿದ್ದ ತಿಷಭ್ ಪಂತ್ 11 ಅದ್ಭುತವಾದ ಬೌಂಡರಿ ಹಾಗೂ 8 ಸಿಕ್ಸರ್ಗಳಿಂದ 118 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ