/newsfirstlive-kannada/media/post_attachments/wp-content/uploads/2025/04/Rishabh_Pant-4.jpg)
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ಬ್ಯಾಟಿಂಗ್ನಲ್ಲಿ ಮತ್ತೆ ವಿಫಲವಾಗಿದ್ದು ಕೇವಲ 2 ರನ್ಗೆ ಔಟ್ ಆಗಿದ್ದಾರೆ.
ಲಕ್ನೋದ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು, ಲಕ್ನೋ ಟೀಮ್ ಅನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ್ದ ಮಿಚೆಲ್ ಮಾರ್ಷ್ ಕೇವಲ 31 ಎಸೆತಗಳಲ್ಲಿ 60 ರನ್ ಗಳಿಸಿ ಔಟ್ ಆದರು. ಇವರ ನಂತರ ಬಂದ ನಿಕೋಲಸ್ ಪೂರನ್ ಕೇವಲ 12 ರನ್ಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ರೋಹಿತ್ ಶರ್ಮಾಗೆ ಬಿಗ್ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ.. ಮುಂಬೈ ತಂಡದಿಂದ ಹಿಟ್ಮ್ಯಾನ್ ಹೊರಕ್ಕೆ!
ನಿಕೋಲಸ್ ಪೂರನ್ ಬಳಿಕ ಬ್ಯಾಟ್ ಬೀಸಲು ಬಂದ ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಉತ್ತಮ ಪರ್ಫಾಮೆನ್ಸ್ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಈ ಪಂದ್ಯದಲ್ಲಿ ಪಂತ್ ಒಂದಷ್ಟು ರನ್ ಬಾರಿಸಲಿದ್ದಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ರಿಷಭ್ ಪಂತ್ ಕೇವಲ 6 ಬಾಲ್ಗಳಲ್ಲಿ 2 ರನ್ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ. ಪಾಂಡ್ಯ ಹಾಕಿದ ಬಾಲ್ ಅನ್ನು ಆಡಲು ಹೋದ ಪಂತ್ ಅದನ್ನು ಕ್ಯಾಚ್ ಕೊಟ್ಟಿದ್ದಾರೆ.
ಇನ್ನು ಈ ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿರುವ ಲಕ್ನೋ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಈಗ 4ನೇ ಪಂದ್ಯ ಆಡುತ್ತಿದೆ. ಆದರೆ 4 ಮ್ಯಾಚ್ಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ರಿಷಭ್ ಪಂತ್ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ರೆ, 2ನೇ ಪಂದ್ಯದಲ್ಲಿ ಕೇವಲ 15 ರನ್ಗೆ ಔಟ್ ಆಗಿದ್ದರು. ಇದಾದ ಮೇಲೆ 3ನೇ ಪಂದ್ಯದಲ್ಲಿ ಕೇವಲ 2 ರನ್, ಈಗ ಮುಂಬೈ ವಿರುದ್ಧವೂ ಕೇವಲ 2 ರನ್ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ