LSGಗೆ ಬಿಗ್​ ಶಾಕ್ ಕೊಟ್ಟ ಕ್ಯಾಪ್ಟನ್ ರಿಷಭ್ ಪಂತ್​.. ಭಾರೀ ಅವಮಾನ, ಯಾಕೆ?

author-image
Bheemappa
Updated On
LSGಗೆ ಬಿಗ್​ ಶಾಕ್ ಕೊಟ್ಟ ಕ್ಯಾಪ್ಟನ್ ರಿಷಭ್ ಪಂತ್​.. ಭಾರೀ ಅವಮಾನ, ಯಾಕೆ?
Advertisment
  • ಸಂಜೀವ್ ಗೋಯೆಂಕಾ ಕೆಂಗಣ್ಣಿಗೆ ಗುರಿಯಾದ್ರಾ ರಿಷಬ್ ಪಂತ್?
  • ಐಪಿಎಲ್​ ಪಂದ್ಯದಲ್ಲಿ ಪಂತ್ ಅವರ ಮೊದಲ ಖದರ್ ಇಲ್ಲ
  • ತವರಿನಲ್ಲಿ ನಡೆಯುತ್ತಿರುವ​ ಪಂದ್ಯದಲ್ಲಿ ಭಾರೀ ಮುಖಭಂಗ

ತವರಿನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್​ನಲ್ಲಿ ಮತ್ತೆ ಮುಖಭಂಗ ಅನುಭವಿಸಿದ್ದಾರೆ. ಮೊದಲ ಬ್ಯಾಟಿಂಗ್ ಮಾಡುತ್ತಿರುವ ಲಕ್ನೋ ಸೂಪರ್ ಜೇಂಟ್ಸ್ ತಂಡದ​ ಪ್ರಮುಖ ವಿಕೆಟ್​ಗಳು ಆರಂಭದಲ್ಲೇ ಉರುಳಿದ್ದರಿಂದ ಸಂಕಷ್ಟಕ್ಕೆ ಸಿಲುಕಿದೆ.

ಉತ್ತರ ಪ್ರದೇಶದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಲಕ್ನೋ ತಂಡದ ಓಪನರ್ ಆಗಿ ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್​ ಕ್ರೀಸ್​ಗೆ ಆಗಮಿಸಿದ್ದರು. ಆದರೆ ಮಾರ್ಷ್​ ಡಕೌಟ್ ಆಗಿ ಹೊರ ನಡೆದರು. ಇದಾದ ಮೇಲೆ ನಿಕೋಲಸ್​ ಪೂರನ್ ಕ್ರೀಸ್​ಗೆ ಆಗಮಿಸ್ತಾರೆ.

ಇದನ್ನೂ ಓದಿ: ಬಿಗ್​ಬ್ಯಾಷ್​ ಕ್ರಿಕೆಟ್​ ಲೀಗ್​ಗೆ ಕಿಂಗ್​ ಕೊಹ್ಲಿ ಎಂಟ್ರಿ.. ಅಧಿಕೃತ ಘೋಷಣೆ, ವಿರಾಟ್​ಗೆ ಸಿಕ್ಸರ್ಸ್ ಸ್ವಾಗತ​!

publive-image

ಮಾರ್ಷ್ ಔಟ್ ಆದರು ಕ್ರೀಸ್ ಕಾಯ್ದುಕೊಂಡಿದ್ದ ಓಪನರ್ ಮಾರ್ಕ್ರಾಮ್ 28 ರನ್​ಗೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕುತ್ತಾರೆ. ಬಳಿಕ ಲಕ್ನೋ ಕ್ಯಾಪ್ಟನ್​ ರಿಷಭ್ ಪಂತ್ ಹಾಗೇ ಬಂದು ಹೀಗೆ ಹೋಗಿದ್ದಾರೆ. ಕೇವಲ 5 ಬಾಲ್ ಎದುರಿಸಿದ ಪಂತ್ 2 ರನ್​ ಗಳಿಸಿ ಆಡುವಾಗ ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ ಚಹಾಲ್​ಗೆ ಕ್ಯಾಚ್ ಕೊಟ್ಟು ಬೇಸರದಿಂದ ಹೊರ ಹೋದರು. ಈ ವೇಳೆ ಪಂತ್ ಸ್ಟ್ರೈಕ್ ರೇಟ್​ ಕೇವಲ 40 ಮಾತ್ರ ಇದ್ದಿರುವುದು ಕಂಡು ಬಂತು.

ಮೊದಲ ಪಂದ್ಯವನ್ನು ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟ್ ಬೀಸಿದ್ದರು. ಆದರೆ ಈ ಪಂದ್ಯದಲ್ಲಿ ಡಕೌಟ್ ಆಗಿದ್ದರು. ಇದಾದ ಮೇಲೆ ಹೈದ್ರಾಬಾದ್​ ಎದುರಿನ 2ನೇ ಪಂದ್ಯದಲ್ಲೂ ಪಂತ್​ ಫ್ಲಾಪ್​ ಆಗಿ ಜಸ್ಟ್ 15 ರನ್​ಗೆ ಆಟ ಮುಗಿಸಿದ್ದರಿಂದ ಟೀಕೆಗಳು ಸಾಕಷ್ಟು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಇದೀಗ ಪಂಜಾಬ್ ಜೊತೆ ರಿಷಭ್ ಪಂತ್ ಕೇವಲ 5 ಎಸೆತಗಳಲ್ಲಿ 2 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇದರಿಂದ ಫ್ಯಾನ್ಸ್​ ಬೇಸರ ವ್ಯಕ್ತಪಡಿಸಿದ್ದು ಆಕ್ರೋಶದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment