/newsfirstlive-kannada/media/post_attachments/wp-content/uploads/2025/07/Rishabh_Pant_INJURY-1.jpg)
ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾದ ನಡುವೆ 3ನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು ವಿಕೆಟ್ ಕೀಪರ್​ ರಿಷಭ್ ಪಂತ್ ಅವರು ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದ ಶುಭ್​ಮನ್​ ಗಿಲ್ ಪಡೆಗೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಸದ್ಯ ಪಂತ್ ಬದಲಿಗೆ ಧೃವ್ ಜುರೆಲ್ ಅವರು ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
ಟೀಮ್ ಇಂಡಿಯಾ ಪರ ವಿಕೆಟ್​ ಕೀಪರ್​ ಮಾಡುತ್ತಿದ್ದ ರಿಷಭ್ ಪಂತ್ ಅವರು ಗಾಯಕ್ಕೆ ತುತ್ತಾಗಿದ್ದಾರೆ. ತಂಡದ 34ನೇ ಓವರ್​ನಲ್ಲಿ ಜಸ್​ಪ್ರಿತ್ ಬೂಮ್ರಾ ಅವರು ಮಾಡಿದ ಬೌಲ್ ಅನ್ನು ಬ್ಯಾಟ್ಸ್​ಮನ್​ ಆಲಿ ಪೋಪ್ ಹೊಡೆಯಲು ವಿಫಲರಾದರು. ಬಾಲ್ ಲೆಗ್​ಸೈಡ್​ನಲ್ಲಿ ವೈಡ್ ಆಗಿದ್ದು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಡೈವ್ ಮಾಡಿ ಬಾಲ್ ಅನ್ನು ಹಿಡಿದರು. ಈ ವೇಳೆ ಬಾಲ್ ಪಂತ್ ಅವರ ಎಡಗೈನ ತೋರುಬೆರಳಿಗೆ ಪ್ರಬಲವಾಗಿ ತಾಗಿದೆ.
ಇದನ್ನೂ ಓದಿ: ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಹೊಸ ಕೆಫೆ ಮೇಲೆ ಗುಂಡಿನ ದಾಳಿ.. ಸ್ಥಳದಲ್ಲಿ ಆತಂಕ!
ಇದರಿಂದ ತಕ್ಷಣ ರಿಷಭ್ ಪಂತ್ ಅವರು ನೋವಿನಿಂದ ಬಳಲುತ್ತಿದ್ದರು. ಕೂಡಲೇ ವೈದ್ಯಕೀಯ ತಂಡದವರು ಆಗಮಿಸಿ ಬೆರಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆಡಲು ಆಗದ ಕಾರಣ ಮೈದಾನದಿಂದ ರಿಷಭ್ ಪಂತ್ ಹೊರ ನಡೆದಿದ್ದಾರೆ. ವೈಡ್ ಬಾಲ್​ ಅನ್ನು ಡೈವ್ ಮಾಡಿ ತಡೆದ ರಿಷಭ್ ಪಂತ್ ಅವರು ಎರಡು ರನ್​ಗಳನ್ನ ಸೇವ್ ಮಾಡಿದ್ದರು. ಸದ್ಯ ಪಂತ್ ಬದಲಿಗೆ ಮೈದಾನಕ್ಕೆ ಯಂಗ್ ವಿಕೆಟ್ ಕೀಪರ್ ಧೃವ್ ಜುರೆಲ್ ಅವರು ಆಗಮಿಸಿದ್ದಾರೆ.
ಲಂಡನ್​ನ ಲಾರ್ಡ್ಸ್​ನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್​ ಸ್ಟೋಕ್ಸ್​ ಅವರು ಬ್ಯಾಟಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಆಟಗಾರರು ಬೌಲಿಂಗ್ ಮಾಡುತ್ತಿದ್ದಾರೆ. ಸದ್ಯ ಎರಡು ವಿಕೆಟ್​ ಕಳೆದುಕೊಂಡಿರುವ ಇಂಗ್ಲೆಂಡ್ ಟೀಮ್ ಬ್ಯಾಟಿಂಗ್ ಮಾಡುತ್ತಿದ್ದು ನಿತೀಶ್ ಕುಮಾರ್ ರೆಡ್ಡಿ ಅವರು ಎರಡೂ ವಿಕೆಟ್​ಗಳನ್ನು ಉರುಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ