/newsfirstlive-kannada/media/post_attachments/wp-content/uploads/2025/07/PANT-5.jpg)
ಇಂಗ್ಲೆಂಡ್ ಎದುರಿನ ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ದಿನವೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ದೊಡ್ಡ ಇಂಜುರಿಗೆ ತುತ್ತಾಗಿದ್ದಾರೆ. ಕಾಲಲ್ಲಿ ರಕ್ತ ಬಸಿದಿದೆ, ನಡೆಯಲಾರದೆ ಪಂತ್ ನರಳಾಡಿದ್ದಾರೆ. ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು ಅನ್ನೋ ವಿವರ ಇಲ್ಲಿದೆ.
ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಯ್ತು. ಬೌಲಿಂಗ್ ಫ್ರೆಂಡ್ಲಿ ಪಿಚ್ ಟೀಮ್ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ ಉತ್ತಮ ಸ್ಕೋರ್ಗಳಿಸಿದೆ ನಿಜ. ರಿಷಭ್ ಪಂತ್ಗಾದ ಇಂಜುರಿ ಇಡೀ ತಂಡದಲ್ಲಿ ಆತಂಕ ಸೃಷ್ಟಿಸಿದೆ.
ನಾಯಕ ಶುಭ್ಮನ್ ಗಿಲ್ ನಿರ್ಗಮನದ ಬಳಿಕ ಕ್ರಿಸ್ನಲ್ಲಿ ಜೊತೆಯಾದ ಸಾಯಿ ಸುದರ್ಶನ್ - ರಿಷಭ್ ಪಂತ್ ಜೋಡಿ ಹೊಸ ಭರವಸೆ ಮೂಡಿಸಿದ್ರು. ಬೊಂಬಾಟ್ ಆಟದೊಂದಿಗೆ ಇಂಗ್ಲೆಂಡ್ ಬೌಲರ್ಗಳನ್ನ ಬೆಂಡೆತ್ತಿದ್ರು. ಸಾಯಿ ಸುದರ್ಶನ್ ಕೂಲ್ ಅಂಡ್ ಕಾಮ್ ಆಟ, ರಿಷಭ್ ಪಂತ್ ಅಬ್ಬರಕ್ಕೆ ಆಂಗ್ಲರು ಕಂಗಾಲ್ ಆದರು.
ಇದನ್ನೂ ಓದಿ: ಹಲಸಿನ ಹಣ್ಣು ತಿಂದು ವಾಹನ ಚಾಲನೆ ಮಾಡಿದ್ರೆ ಹುಷಾರ್.. ಡ್ರೈವರ್ಗಳಿಗೆ ಶಾಕಿಂಗ್ ನ್ಯೂಸ್..!
67.4ನೇ ಓವರ್ನಲ್ಲಿ ಕಾದಿತ್ತು ಆಘಾತ
ಸುದರ್ಶನ್, ಪಂತ್ ಜೋಡಿ ಫೆಂಟಾಸ್ಟಿಕ್ ಆಟದೊಂದಿಗೆ ಭರವಸೆ ಮೂಡಿಸಿದ ಬೆನ್ನಲ್ಲೇ ಆಘಾತ ಎದುರಾಯ್ತು. 67.4ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಎಸೆದ ಬಾಲು ಪಂತ್ ಪಾದಕ್ಕೆ ಬಂದು ಬಡಿಯಿತು. ಇಂಗ್ಲೆಂಡ್ ತಂಡ ಎಲ್ಬಿಗೆ ಮನವಿ ಮಾಡಿ ಡಿಆರ್ಎಸ್ ತೆಗೆದುಕೊಳ್ತು. ರಿವ್ಯೂನಲ್ಲಿ ಬಾಲ್ ಬ್ಯಾಟ್ಗೆ ತಾಗಿದ್ದು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ರು. ಥರ್ಡ್ ಅಂಪೈರ್ ನಾಟ್ಔಟ್ ಅನ್ನೋದನ್ನ ಕನ್ಫರ್ಮ್ ಮಾಡಿದ್ರೂ ಪಂತ್ ಪೆವಿಲಿಯನ್ಗೆ ವಾಪಾಸ್ಸಾಗುವಂತಾಯ್ತು.
ಬಾಲ್ ಬಡಿದ ರಭಸಕ್ಕೆ ಬಸಿದ ರಕ್ತ
ಕ್ರಿಸ್ ವೋಕ್ಸ್ ಎಸೆದ ಎಸೆತ ಬ್ಯಾಟ್ ತಾಗಿ ಪಂತ್ ಕಾಲಿಗೆ ತಾಗಿತ್ತು. ಬಾಲ್ ಬಡಿದ ರಭಸಕ್ಕೆ ಪಂತ್ ಕಾಲಿನಿಂದ ರಕ್ತ ಬಸಿಯಿತು. ಕ್ಷಣ ಮಾತ್ರದಲ್ಲೇ ಕಾಲು ಉದಿ ಬಿಡ್ತು.
ನಡೆಯಲಾಗದೇ ಪರದಾಡಿದ ಪಂತ್!
ಕಾಲು ಊತ ಬಂದ ಕಾರಣ ಪಂತ್ ಪರಿಣಾಮ ಪಂತ್ಗೆ ನಿಲ್ಲಲೂ ಆಗದೇ ಪರದಾಡಿದ್ರು. ಕಾಲು ಉರಲಾಗದೇ ನರಳಾಡಿದ ಪಂತ್, ಅಂತಿಮವಾಗಿ ಮೈದಾನದ ಆ್ಯಂಬುಲೆನ್ಸ್ ಅಂದ್ರೆ, ಗಾಲ್ಫ್ ಕಾರ್ಟ್ನಲ್ಲಿ ಪೆವಿಲಿಯನ್ಗೆ ವಾಪಾಸ್ಸಾದ್ರು.
ಮೈದಾನದಿಂದ ನೇರವಾಗಿ ಸ್ಕ್ಯಾನಿಂಗ್ಗೆ ಪಂತ್
ಮೈದಾನದಿಂದ ಪೆವಿಲಿಯನ್ಗೆ ವಾಪಾಸ್ಸಾದ ಪಂತ್ ನೇರವಾಗಿ ಸ್ಕ್ಯಾನಿಂಗ್ಗೆ ತೆರಳಿದ್ದಾರೆ. ಕ್ಯಾಪ್ಟನ್ ಶುಭ್ಮನ್ ಗಿಲ್, ಪಂತ್ ಬೆನ್ನಲ್ಲೇ ಆಸ್ಪತ್ರೆಗೆ ಧೌಡಾಯಿಸಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದ ಪೋಸ್ಟರ್ ವಿರುದ್ಧ ಕೆರಳಿದ ಕನ್ನಡಿಗರು.. ಬೆಂಗಳೂರಿನ ಥಿಯೇಟರ್ನಲ್ಲಿ ಫ್ಯಾನ್ಸ್ ಹುಚ್ಚಾಟ..!
ಇಂದಿನ ದಿನದಾಟದಲ್ಲಿ ಆಡ್ತಾರಾ? ಇಲ್ವಾ?
ಸ್ಕ್ಯಾನ್ ರಿಪೋರ್ಟ್ಗಾಗಿ ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಕಾಯ್ತಿದೆ. ರಿಪೋರ್ಟ್ನಲ್ಲಿ ಬರೋ ಇಂಜುರಿ ಪ್ರಮಾಣದ ಆಧಾರದಲ್ಲಿ ಪಂತ್ ಮೈದಾನಕ್ಕೆ ವಾಪಾಸ್ಸಾಗ್ತಾರಾ.? ಇಲ್ವಾ.? ಅನ್ನೋದು ನಿರ್ಧಾರವಾಗಲಿದೆ. ತಂಡದ ಮೂಲಗಳ ಪ್ರಕಾರ ಪಂತ್ ಇಂಜುರಿ ಮೇಜರ್ ಎನ್ನಲಾಗ್ತಿದೆ. 4ನೇ ಟೆಸ್ಟ್ನಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳೋದು ಅನುಮಾನವೇ. ಪಂತ್ ಬೇಕೆ ಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾದ್ರೆ, ಇಂಜೆಕ್ಷನ್ ತೆಗೆದುಕೊಂಡು 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಮಾತ್ರ ಬರೋ ಸಾಧ್ಯತೆಯಿದೆ.
ಇದನ್ನೂ ಓದಿ: ರಾಧಾ, ಕೃಷ್ಣನ ಗೆಟಪ್ನಲ್ಲಿ ಭವ್ಯಾ ಗೌಡ, ಕಿರಣ್ ರಾಜ್… ಕರ್ಣನ ಒಂದೊಂದು ಸೀನ್ಗೂ ವೀಕ್ಷಕರು ಫಿದಾ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ