/newsfirstlive-kannada/media/post_attachments/wp-content/uploads/2025/07/PANT-4.jpg)
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ (Lord's test) ಆಡುತ್ತಿರುವ ಟೀಂ ಇಂಡಿಯಾಗೆ (Team India) ದೊಡ್ಡ ಆಘಾತವಾಗಿದೆ. ಉಪನಾಯಕ ರಿಷಬ್ ಪಂತ್, ಗಾಯಗೊಂಡಿದ್ದು (Rishabh Pant injured) ತಂಡದ ಮ್ಯಾನೇಜ್ಮೆಂಟ್, ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆತಂಕ ಎದುರಾಗಿದೆ.
ಗಾಯಗೊಂಡ ಬೆನ್ನಲ್ಲೇ ಅವರಿಗೆ ಮೈದಾನದಲ್ಲೇ ಚಿಕಿತ್ಸೆ ನೀಡಲಾಯಿತು. ನಂತರ ಅವರು ಮೈದಾನ ತೊರೆಯಬೇಕಾಯಿತು. ಪಂತ್ ಬದಲಿಗೆ ಧ್ರುವ್ ಜುರೆಲ್ (Dhruv Jurel) ಕೀಪಿಂಗ್ ಮಾಡಿದ್ದಾರೆ. ಪಂತ್ ಅವರ ಎಡಗೈ ತೋರು ಬೆರಳಿಗೆ ಗಾಯವಾಗಿದೆ ಎಂದು ಬಿಸಿಸಿಐ (BCCI) ತಿಳಿಸಿದೆ. ಉಪನಾಯಕ ರಿಷಭ್ ಪಂತ್ ಎಡಗೈ ತೋರು ಬೆರಳಿಗೆ ಗಾಯವಾಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ ಎಂದು ಬಿಸಿಸಿಐ ಹೇಳಿದೆ.
Update: #TeamIndia vice-captain Rishabh Pant got hit on his left index finger.
He is receiving treatment at the moment and under the supervision of the medical team.
Dhruv Jurel is currently keeping wickets in Rishabh's absence.
Updates ▶️ https://t.co/X4xIDiSmBg#ENGvINDpic.twitter.com/MeLIgZ4MrU— BCCI (@BCCI) July 10, 2025
ಪಂತ್ ಗಾಯಗೊಂಡಿದ್ದು ಹೇಗೆ?
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 34ನೇ ಓವರ್ ಮಾಡುತ್ತಿದ್ದರು. ಈ ವೇಳೆ ಬುಮ್ರಾ ಎಸೆದ ಬಾಲ್, ಲೆಗ್ಸೈಡ್ಗೆ ಹೋಗುತ್ತಿತ್ತು. ಆಗ ಅದನ್ನು ತಡೆಯಲು ಪಂತ್ ಹಾರಿದರು. ಈ ವೇಳೆ ಗಾಯವಾಗಿದೆ.
ಮೂರನೇ ಟೆಸ್ಟ್ನಿಂದ ಪಂತ್ ಔಟ್?
ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ (Nasser Hussain) ಪಂತ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಎಡಗೈ ತೋರು ಬೆರಳಿನಲ್ಲಿ ಗಾಯವಾಗಿದೆ, ಉಗುರು ಮುರಿದಿದೆ. ಇದು ತುಂಬಾ ನೋವು ಉಂಟುಮಾಡುತ್ತದೆ. ಆದರೆ ಬೆರಳಿನಲ್ಲಿ ಯಾವುದೇ ಮುರಿತವಿಲ್ಲ, ಡ್ರೆಸ್ಸಿಂಗ್ ಕೋಣೆಯಲ್ಲಿ ಐಸ್ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ರಿಷಭ್ ಪಂತ್ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಬಹಳ ಕಡಿಮೆ. ಅವರು ಬ್ಯಾಟಿಂಗ್‌ಗೆ ಬರಬಹುದು ಎಂದಿದ್ದಾರೆ.
ಇದನ್ನೂ ಓದಿ: ಆಂಗ್ಲರಿಗೆ ನಿತೀಶ್ ರೆಡ್ಡಿ ಡಬಲ್ ಶಾಕ್.. 3ನೇ ಟೆಸ್ಟ್ನ ಮೊದಲ ದಿನದ ಅಂತ್ಯಕ್ಕೆ ಆಗಿದ್ದೇ ಬೇರೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ