Advertisment

VIDEO: ಪಂತ್ ಕೈಜಾರಿದ ಬ್ಯಾಟ್, ಹೋಗಿದ್ದೆಲ್ಲಿಗೆ..? ಆಗ ಬೂಮ್ರಾ, ಸಿರಾಜ್ ಮಾಡಿದ್ದೇನು..?

author-image
Ganesh
Updated On
VIDEO: ಪಂತ್ ಕೈಜಾರಿದ ಬ್ಯಾಟ್, ಹೋಗಿದ್ದೆಲ್ಲಿಗೆ..? ಆಗ ಬೂಮ್ರಾ, ಸಿರಾಜ್ ಮಾಡಿದ್ದೇನು..?
Advertisment
  • ಇಂಗ್ಲೆಂಡ್ ವಿರುದ್ಧ ಭಾರತ ಎರಡನೇ ಟೆಸ್ಟ್
  • 2ನೇ ಇನ್ನಿಂಗ್ಸ್​ನಲ್ಲಿ ಪಂತ್ ಅಮೂಲ್ಯ ಕೊಡುಗೆ
  • ಮೂರು ಸಿಕ್ಸರ್​, ಐದು ಬೌಂಡರಿ ಬಾರಿಸಿ ಮಿಂಚಿಂಗು

ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಬ್ಯಾಟ್ ಕೈಜಾರಿದೆ. ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್​ 4ನೇ ದಿನದಾಟ ಬ್ಯಾಟಿಂಗ್ ನಡೆಸ್ತಿದ್ದ ರಿಷಭ್​ ಪಂತ್, 33ನೇ ಓವರ್​​ನ 3ನೇ ಎಸೆತವನ್ನು ಬಲವಾಗಿ ಬೀಸಿದರು.

Advertisment

ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಬ್ಯಾಟ್ ಕೈಜಾರಿತ್ತು. ಇದನ್ನ ಗ್ಯಾಲರಿಯಿಂದ ನೋಡ್ತಿದ್ದ ಸಿರಾಜ್, ಬೂಮ್ರಾ ನಕ್ಕು ನಲಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಡಿಯಾದಲ್ಲಿ ವೈರಲ್ ಆಗ್ತಿದೆ.

ಅಂದ್ಹಾಗೆ ಪಂತ್ ಕೈಯಿಂದ ಬ್ಯಾಟ್ ಜಾರೋದು ಇದೇ ಮೊದಲಲ್ಲ. ಇನ್ನು, ಎರಡನೇ ಟೆಸ್ಟ್​ನಲ್ಲೂ ಪಂತ್ ಅಮೋಘ ಆಟವನ್ನು ಆಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 25 ರನ್​ ಬಾರಿಸಿದರೆ, 2ನೇ ಇನ್ನಿಂಗ್ಸ್​ನಲ್ಲಿ 58 ಬಾಲ್​ನಲ್ಲಿ 65 ರನ್​​ಗಳಿಸಿದ್ದಾರೆ. ಅದರಲ್ಲಿ ಮೂರು ಸಿಕ್ಸರ್, ಐದು ಬೌಂಡರಿ ಸೇರಿವೆ.

Advertisment

ಎರಡನೇ ಟೆಸ್ಟ್​ನ ಕೊನೆಯ ದಿನದ ಆಟ ಮಧ್ಯಾಹ್ನದಿಂದ ಮ್ಯಾಚ್ ಆರಂಭವಾಗಲಿದೆ. ಭಾರತದ ಗೆಲುವಿಗೆ 7 ವಿಕೆಟ್​ಗಳ ಅಗತ್ಯವಿದ್ದರೆ, ಇಂಗ್ಲೆಂಡ್​ ಗೆಲುವಿಗೆ 536 ರನ್​ಗಳ ಅಗತ್ಯ ಇದೆ. ಮೊದಲ ಟೆಸ್ಟ್ ಇಂಗ್ಲೆಂಡ್ ಗೆದ್ದುಕೊಂಡಿದೆ. ಹೀಗಾಗಿ ಎರಡನೇ ಟೆಸ್ಟ್​ ಗೆಲುವು ಭಾರತಕ್ಕೆ ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment