/newsfirstlive-kannada/media/post_attachments/wp-content/uploads/2025/07/Rishabh_pant-2.jpg)
ಪ್ರತಿ ಕ್ರಿಕೆಟರ್ಗೂ ಒಂದು ನಿಕ್ ನೇಮ್ ಇರುತ್ತೆ. ಸಚಿನ್ ತೆಂಡುಲ್ಕರ್ರಿಂದ ಹಿಡಿದು ಈಗಿನ ಶುಭ್ಮನ್ ಗಿಲ್ ತನಕ ಒಂದಿಲ್ಲೊಂದು ಅಡ್ಡ ಹೆಸರು ಇದ್ದೇ ಇರುತ್ತೆ. ಇದೇ ರೀತಿ ರಿಷಭ್ ಪಂತ್ಗೂ ಒಂದು ಸ್ಪೆಷಲ್ ಅಡ್ಡ ಹೆಸರಿದೆ. ಅದೇನು?. ಅಸಲಿಗೆ ಆ ಅಡ್ಡ ಹೆಸರು ಬಂದಿದ್ದೇಗೆ?.
ಸಚಿನ್ ತೆಂಡುಲ್ಕರ್, ಮಾಸ್ಟರ್ ಬ್ಲಾಸ್ಟರ್, ಗಾಡ್ ಆಫ್ ಕ್ರಿಕೆಟ್. ರಾಹುಲ್ ದ್ರಾವಿಡ್, ದಿ ವಾಲ್. ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಕೂಲ್. ವಿರಾಟ್ ಕೊಹ್ಲಿ ಕಿಂಗ್ ಕೊಹ್ಲಿ. ರೋಹಿತ್ ಶರ್ಮಾ ಹಿಟ್ಮ್ಯಾನ್, ಶಿಖರ್ ಧವನ್ ಗಬ್ಬರ್. ಶುಭ್ಮನ್ ಗಿಲ್ ದಿ ಪ್ರಿನ್ಸ್. ಇದು ಟೀಮ್ ಇಂಡಿಯಾ ಆಟಗಾರರ ನಿಕ್ ನೇಮ್ಸ್. ಈ ನಿಕ್ ನೇಮ್ಸ್ ಹಿಂದೆ ಒಂದು ಕಥೆ ಇರುತ್ತೆ. ಆಟಗಾರರ ಬ್ಯಾಟಿಂಗ್ ಸ್ಟೈಲ್, ಬೌಲಿಂಗ್ ಸ್ಟೈಲ್, ಪರ್ಸನಾಲಿಟಿ ಅನುಗುಣವಾಗಿ ಈ ನಿಕ್ ನೇಮ್ಸ್ ಬರುತ್ತೆ. ಅದೇ ರೀತಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ರಿಷಭ್ ಪಂತ್ಗೂ ಒಂದು ಅಡ್ಡ ಹೆಸರಿದೆ. ಆ ಹೆಸರೇ ಸ್ಪೈಡರ್.
ರಿಷಭ್ ಪಂತ್ ಅಲ್ಲ..! ‘ಸ್ಪೈಡರ್ ಪಂತ್’..!
ರಿಷಭ್ ಪಂತ್ ಟೀಮ್ ಇಂಡಿಯಾದ ಸೂಪರ್ ಸ್ಟಾರ್, ರೋರಿಂಗ್ ಸ್ಟಾರ್. ವಿಭಿನ್ನ ಶಾಟ್ಸ್ಗಳು. ಮ್ಯಾಚ್ ವಿನ್ನಿಂಗ್ ನಾಕ್ಸ್ಗಳು, ವಿಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಪಂತ್ನ ಅಭಿಮಾನಿಗಳು ಪಾಲಿಗೆ ಫೈರಿ ಪಂತ್ ಅಂತಾನೇ ಕರೀತಾರೆ. ಇನ್ನು ಕೆಲವರು ಡೇರ್ ಡೆವಿಲ್ ಪಂತ್ ಅಂತಾರೆ. ಇವೆಲ್ಲವೂ ಈಗ ಬಂದಿರೋ ಹೆಸರುಗಳು. ಆದ್ರೆ, ರಿಷಭ್ ಪಂತ್ರ ಮೊದಲ ನಿಕ್ ನೇಮ್ ಸ್ಪೆಡರ್ ಪಂತ್.
ವಿಕೆಟ್ ಕೀಪಿಂಗ್ ಗ್ಲೌಸ್, ಬ್ಯಾಟ್ ಮೇಲೆ ‘ಸ್ಪೈಡರ್’..!
ನೀವ್ ವಿಕೆಟ್ ಕೀಪರ್ ರಿಷಭ್ ಪಂತ್, ಗ್ಲೌಸ್ ನೋಡಿದ್ರೆ. ಖಂಡಿತ, ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಸ್ಪೈಡರ್ ಚಿತ್ರ ಕಾಣುತ್ತೆ. ರಿಷಭ್, ಬಳಸುವ ಬ್ಯಾಟ್ ಮೇಲೆಯೂ ಸ್ಪೈಡರ್ ಹೆಸರು ಇರುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ, ಪಂತ್ ರಾಯಭಾರಿಯಾಗಿರುವ ಎಸ್ಜಿ ಬ್ಯಾಟ್ ಕಂಪನಿ, RP ಸ್ಪೈಡರ್ ಅಂತನೇ ಸ್ಪೆಷಲ್ ಅಡಿಷನ್ನ ಬ್ಯಾಟ್ ಅನ್ನೇ ಮಾರುಕಟ್ಟೆಗೆ ಬಿಟ್ಟಿದೆ.
‘ಸ್ಪೈಡಿ’ ಎಂದೇ ನಂಬರ್ ಸೇವ್ ಮಾಡಿದ್ದಾರೆ ಶುಭ್ಮನ್..!
ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ಶುಭ್ಮನ್ ಗಿಲ್ ಸಹ ರಿಷಭ್ ಪಂತ್ನ ಪ್ರೀತಿಯಿಂದ ಕರಿಯುವುದು ಸ್ಪೈಡಿ ಅಂತಾಲೇ. ತಮ್ಮ ಮೊಬೈಲ್ನಲ್ಲೂ ಅಷ್ಟೇ, ಪಂತ್ ಹೆಸರನ್ನ ಸ್ಪೈಡಿ ಅಂತಾನೇ ಸೇವ್ ಮಾಡಿಕೊಂಡಿದ್ದಾರೆ. ಸದ್ಯ ತಂಡದಲ್ಲಿರುವ ಸಹ ಆಟಗಾರರಿಗೂ ಪಂತ್, ಸ್ಪೈಡಿಯೇ ಆಗಿದ್ದಾರೆ. ರಿಷಭ್ ಪಂತ್ ಫ್ರೆಂಡ್ಸ್ ಸರ್ಕಲ್ ಕೂಡ ಇದೇ ಹೆಸರಿನಿಂದಲೇ ಕರೀತಾರೆ.
‘ಸ್ಪೈಡರ್ ಪಂತ್’ ಹೆಸರು ನಾಮಕರಣ ಮಾಡಿದ್ದೇ ಐಸಿಸಿ!
ಅಂದ್ಹಾಗೆ ಪಂತ್ಗೆ ಸ್ಪೈಡರ್ ಪಂತ್ ಎಂದು ನಾಮಕರಣ ಮಾಡಿದ್ದು ಐಸಿಸಿ. ಅರೇ ಐಸಿಸಿ, ಯಾಕೆ ಸ್ಪೈಡರ್ ಪಂತ್ ಎಂದು ಕರೀತು ಎಂಬ ಡೌಟ್ ನಿಮ್ಮಲ್ಲಿ ಮೂಡಿರಬಹುದು. 2021ರ ಆಸ್ಟ್ರೇಲಿಯಾ ಟೂರ್ ಇದಕ್ಕೆ ಉತ್ತರ ಕೊಡ್ತಿದೆ. ಈ ಪ್ರವಾಸದ ಗಾಬಾ ಟೆಸ್ಟ್ನಲ್ಲಿ ಪಂತ್, ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ನ ಸ್ಪೈಡರ್ ಮ್ಯಾನ್, ಸ್ಪೈಡರ್ ಮ್ಯಾನ್ ಎಂದು ಹಾಡು ಹಾಡಿ ಕಾಲು ಎಳೆದಿದ್ದರು.
ಇದನ್ನೂ ಓದಿ: ಶಿವಣ್ಣ ಬರ್ತ್ಡೇಗೆ ಗುಡ್ನ್ಯೂಸ್.. ಶಿವರಾಜ್ ಕುಮಾರ್ಗೆ ಮತ್ತೆ ದುನಿಯಾ ಸೂರಿ ಡೈರೆಕ್ಷನ್
ವಿಕೆಟ್ ಹಿಂದೆಯೂ ಸ್ಪೈಡರ್ ಮ್ಯಾನ್ನಂತೆಯೇ ಪಂತ್ ಕ್ಯಾಚ್ ಹೀಡಿತಾ ಇದ್ರು. ಸಿಕ್ಸ್ ಹಿಟ್ಟಿಂಗ್ ಸ್ಟೈಲ್ ಕೂಡ ಸ್ಪೈಡರ್ ಮ್ಯಾನ್ರನ್ನೇ ಹೋಲುತ್ತೆ. ಇದೇ ಕಾರಣಕ್ಕೆ ಐಸಿಸಿ ಸ್ಪೈಡರ್ ಪಂತ್ ಎಂದು ಕರೆದು ಟ್ವೀಟ್ ಮಾಡಿತ್ತು. ಈ ಬೆನ್ನಲ್ಲೇ ಸಹ ಆಟಗಾರ ವಾಷಿಂಗ್ಟನ್ ಸುಂದರ್, ರಿಷಭ್ ಪಂತ್ರ ಸೂಪರ್ ಮ್ಯಾನ್ ವಾಕ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
ಅವತ್ತಿನಿಂದ ಸ್ಪೈಡರ್ ಪಂತ್ ಆಗಿಬಿಟ್ರು. ಮೀಮ್ಸ್, ಕಾರ್ಟೂನ್ಸ್ನಲ್ಲಿ ಪಂತ್, ಸ್ಪೈಡರ್ ಪಂತ್ ಆಗಿ ಕಾಣಿಸಿಕೊಂಡರು. ಐಪಿಎಲ್ನಲ್ಲಿ ಫ್ರಾಂಚೈಸಿಗಳು ಸಹ ಸ್ಪೈಡರ್ ಮ್ಯಾನ್ ಪಂತ್ ಆಗಿಯೇ ಪ್ರೀತಿಯಿಂದ ಕರೆದ್ವು. ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಇದ್ದಾರೋ ಇಲ್ವೋ. ಆದ್ರೆ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಪರದೆ ಮೇಲೆ ರಕ್ಷಿಸುವ ಸೂಪರ್ ಮ್ಯಾನ್ನಂತೆ. ಆನ್ಫೀಲ್ಡ್ನಲ್ಲಿ ಸ್ಪೈಡರ್ ಪಂತ್ ರಕ್ಷಿಸುವುದಂತು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ