/newsfirstlive-kannada/media/post_attachments/wp-content/uploads/2024/05/Team-India_m.jpg)
ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಟೀಮ್​ ಇಂಡಿಯಾಗೆ ಭರ್ಜರಿ ಕಮ್​ಬ್ಯಾಕ್​ ಮಾಡಿರೋ ರಿಷಭ್​​ ಪಂತ್​​​ ಈ ಬಗ್ಗೆ ಮಾತಾಡಿದ್ದಾರೆ. ಟೀಮ್ ಇಂಡಿಯಾ ಜೆರ್ಸಿ ಧರಿಸಿ ಮೈದಾನದಲ್ಲಿ ಆಡುವುದು ಒಂದು ವಿಭಿನ್ನ ಅನುಭವ. ಈ ಸುಂದರ ಕ್ಷಣವನ್ನು ನಾನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಟಿ20 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು.
ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದು, ಎಲ್ಲರೊಂದಿಗೂ ಕಾಲ ಕಳೆಯುತ್ತಿರುವುದು ಬಹಳ ಖುಷಿ ತಂದಿದೆ. ನಾವು ಹಲವು ದೇಶಗಳಲ್ಲಿ ಆಡಿದ್ದೇನೆ. ಟಿ20 ವಿಶ್ವಕಪ್​​ನಲ್ಲಿ ಆಡೋದು ಮಾತ್ರ ವಿಭಿನ್ನ ಅನುಭವ ಎಂದರು ಪಂತ್​.
/newsfirstlive-kannada/media/post_attachments/wp-content/uploads/2024/04/Pant_Batting.jpg)
ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​ಗಾಗಿ 14 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಪಂತ್ ಮರಳಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕ್ಯಾಪ್ಟನ್​ ಆಗಿ ಪಂತ್​ 446 ರನ್ ಹೊಡೆದಿದ್ದರು. ಈಗ ಜೂನ್ 1ಕ್ಕೆ ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಪಂತ್ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೀಮ್​ ಇಂಡಿಯಾ ಪರ ಪಂತ್​ ತಾನು ಆಡಿರೋ 56 ಟಿ20 ಪಂದ್ಯಗಳಲ್ಲಿ 3 ಅರ್ಧಶತಕಗಳ ನೆರವಿನಿಂದ 987 ರನ್ ಚಚ್ಚಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವಿಕೆಟ್ ಕೀಪರ್ ಆಗಿ 27 ಕ್ಯಾಚ್, 2 ರನ್ ಔಟ್ ಹಾಗೂ 9 ಸ್ಟಂಪ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us