/newsfirstlive-kannada/media/post_attachments/wp-content/uploads/2025/03/Rishabh_Pant.jpg)
ಐಪಿಎಲ್ 2025ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ವರ್ಷದ ಟೂರ್ನಿಯಲ್ಲಿ ರಿಷಭ್ ಪಂತ್ ಪಡೆ ಮೊದಲ ಗೆಲುವು ಪಡೆದು ಖುಷಿಯಲ್ಲಿದೆ. ಆದರೆ ಪಂದ್ಯದಲ್ಲಿ ರಿಷಭ್ ಪಂತ್ ಸರಿಯಾಗಿ ಬ್ಯಾಟಿಂಗ್ ಮಾಡಿಲ್ಲವೆಂದು ನಿರೂಪಕನೊಬ್ಬ ಲೈವ್ನಲ್ಲೇ ಟಿವಿಯನ್ನ ಒಡೆದಿದ್ದಾನೆ.
ಹೈದರಾಬಾದ್ ಹಾಗೂ ಲಕ್ನೋ ನಡುವಿನ ಐಪಿಎಲ್ ಪಂದ್ಯ ಪಡೆಯುವಾಗ ಯೂಟ್ಯೂಬ್ ಚಾಲನೆವೊಂದರಲ್ಲಿ ಲೈವ್ ಸೆಷನ್ ನಡೆಯುತ್ತಿತ್ತು. ಇದರಲ್ಲಿ ಯುವತಿ ಸೇರಿ ನಾಲ್ಕು ಕ್ರೀಡಾ ವಿಶ್ಲೇಷಕರು ಚರ್ಚೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 15 ರನ್ಗೆ ಔಟ್ ಆದರು. ಇದರಿಂದ ಕೋಪಗೊಂಡ ನಾಲ್ವರಲ್ಲಿ ಒಬ್ಬ ಕ್ರೀಡಾ ವಿಶ್ಲೇಷಕ, ಅಲ್ಲಿದ್ದ ಟಿವಿಯನ್ನು ಲೈವ್ ಸೆಷನ್ನಲ್ಲಿ ಒಡೆದು ಹಾಕಿದ್ದಾನೆ.
ಇದನ್ನೂ ಓದಿ: RCBಗೆ ಬಿಗ್ ಟಾಸ್ಕ್; ರಾಯಲ್ ಚಾಲೆಂಜರ್ಸ್, ಸೂಪರ್ ಕಿಂಗ್ಸ್ ಫೈಟ್.. ಯಾರಿಗೆ ಶುಭ ಶುಕ್ರವಾರ?
ಐಪಿಎಲ್ ನಡೆಯುತ್ತಿದ್ದು ಇದರಲ್ಲಿ ರಿಷಭ್ ಪಂತ್ಗೆ ಅತ್ಯುತ್ತಮ ಅವಕಾಶ ಸಿಕ್ಕಿದೆ. ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಅವರು ಯಾವ ರೀತಿಯ ನಾಯಕ?. ಅವರಂತಹ ನಾಯಕ ಅಗತ್ಯವೇ ಇಲ್ಲ. ಪಂತ್ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ. ಇಂತಹ ಆಟಗಾರ ನಮಗೆ ಬೇಕಿಲ್ಲ ಎಂದು ಕೋಪದಲ್ಲೇ ಎದ್ದು ಟಿವಿಯನ್ನು ಒಡೆದಿದ್ದಾನೆ. ಅದೇ ಕೋಪದಲ್ಲೇ ಮುಂದೆ ಇದ್ದ ಟೀ ಪಾಯ್ ಅನ್ನು ತಳ್ಳಿ ಕ್ರೀಡಾ ವಿಶ್ಲೇಷಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎಸ್ಆರ್ಹೆಚ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ರಿಷಭ್ ಪಂತ್ ಕೇವಲ 15 ರನ್ಗೆ ಔಟ್ ಆಗಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ಪಂತ್, ಬ್ಯಾಟಿಂಗ್ ಹಾಗೇ ಮುಂದುವರೆಸಿದ್ರೆ, ತಂಡ ಸುಲಭವಾಗಿ ಗೆಲ್ಲುತ್ತಿತ್ತು. ಪಂದ್ಯದಲ್ಲಿ ಅವಸರ ಪಡಬೇಕಾದ ಅಗತ್ಯ ಇರಲಿಲ್ಲ. ಪಂತ್ ಬಿಗ್ ಶಾಟ್ಗೆ ಪ್ರಯತ್ನಿಸಿ ಥರ್ಡ್ ಮ್ಯಾನ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಪಂತ್ 2ನೇ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರಿಂದ ಕೋಪಗೊಂಡ ನಿರೂಪಕ ಟಿವಿಯನ್ನ ಒಡೆದಿದ್ದಾನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ