/newsfirstlive-kannada/media/post_attachments/wp-content/uploads/2025/05/rishabh_pant-3.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ನಡೆದ ಐಪಿಎಲ್ ಲೀಗ್ನ ಕೊನೆ ಪಂದ್ಯದಲ್ಲಿ ಕ್ಯಾಪ್ಟನ್ ರಿಷಭ್ ಪಂತ್ ಅವರು ಭರ್ಜರಿಯಾದ ಶತಕ ಸಿಡಿಸಿದ್ದಾರೆ. ಕಳೆದ ಪಂದ್ಯಗಳಲ್ಲಿ ಸತತ ವೈಫಲ್ಯಕ್ಕೆ ಒಳಗಾಗಿದ್ದ ರಿಷಭ್ ಪಂತ್ ಆರ್ಸಿಬಿ ವಿರುದ್ಧದ ಪಂದ್ಯದಿಂದ ಬ್ಯಾಟಿಂಗ್ ಟ್ರ್ಯಾಕ್ಗೆ ಮರಳಿದ್ದಾರೆ. ಅಲ್ಲದೇ ಸೆಂಚುರಿ ಸಿಡಿಸಿದ ಖುಷಿಯಲ್ಲಿ ಪಂತ್, ಅದ್ಭುತವಾದ ಫ್ರಂಟ್ಫ್ಲಿಪ್ ಹೊಡೆದು ಸಂಭ್ರಮಿಸಿದರು.
ರಿಷಭ್ ಪಂತ್ ಅವರಿಗೆ 27 ಕೋಟಿ ರೂಪಾಯಿಗಳನ್ನು ಕೊಟ್ಟು ಲಕ್ನೋ ತಂಡದ ಫ್ರಾಂಚೈಸಿ ಖರೀದಿ ಮಾಡಿತ್ತು. ಐಪಿಎಲ್ ಆರಂಭವಾದ ಮೇಲೆ ಸತತ 12 ಪಂದ್ಯಗಳಲ್ಲಿ ವೈಫಲ್ಯದ ಬ್ಯಾಟಿಂಗ್ ಮಾಡಿದ್ದರು. 12 ಇನ್ನಿಂಗ್ಸ್ಗಳಲ್ಲಿ 107.09 ಸ್ಟ್ರೈಕ್ರೇಟ್ನಲ್ಲಿ 141 ಬಾಲ್ಗೆ 151 ರನ್ಗಳನ್ನು ಗಳಿಸಿ ಕೆಟ್ಟ ದಾಖಲೆ ಬರೆದಿದ್ದರು. ಇದರಿಂದ ಸಾಕಷ್ಟು ಟೀಕೆಗಳನ್ನು ಪಂತ್ ಎದುರಿಸಿದ್ದರು.
ಆದರೆ ಈ ಎಲ್ಲ ನೋವುಗಳನ್ನು ಉಂಡಿದ್ದ ರಿಷಭ್ ಪಂತ್ ಕೊನೆಗೂ ಐಪಿಎಲ್ನ ಕೊನೆ ಪಂದ್ಯದಲ್ಲಿ ಸಿಡಿದು ನಿಂತಿದ್ದಾರೆ. ಈ ಒಂದು ಸೆಂಚುರಿಯಿಂದ ಲಕ್ನೋ ತಂಡಕ್ಕೆ ಯಾವುದೇ ಉಪಯೋಗ ಇಲ್ಲದಿದ್ದರೂ ಪಂತ್ ಬ್ಯಾಟಿಂಗ್ ಟ್ರ್ಯಾಕ್ಗೆ ಮರಳಿದಂತೆ ಆಗಿದೆ. ಪಂದ್ಯದಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಔಟ್ ಆದ ಬಳಿಕ 3ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಕ್ರೀಸ್ಗೆ ಆಗಮಿಸಿದರು.
ಇದನ್ನೂ ಓದಿ: ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಟೀಮ್ ಯಾವುದು.. RCBನಾ?
ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವೇಗ ಪಡೆದ ರಿಷಭ್ ಪಂತ್, ಆರ್ಸಿಬಿ ಬೌಲರ್ಗಳನ್ನು ದಂಡಿಸಲು ಪ್ರಾರಂಭಿಸಿದರು. ಕಳೆದ 12 ಪಂದ್ಯಗಳಲ್ಲಿ ವಿಫಲವಾಗಿದ್ದ ರಿಷಭ್ ಪಂತ್ ಕೊನೆ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವೈಭವ ತೋರಿಸಿದರು. ಪಂದ್ಯದಲ್ಲಿ 96 ರನ್ ಗಳಿಸಿದ್ದಾಗ ಆಫ್ಸೈಡ್ನಲ್ಲಿ ಬಿಗ್ ಶಾಟ್ ಬಾರಿಸಿ ಬೌಂಡರಿ ಬಾರಿಸಿದ ಪಂತ್, ಸೆಂಚುರಿ ಗಳಿಸಿದರು. ಶತಕ ಸಿಡಿಸಿದ್ದೇ ತಡ ರಿಷಭ್ ಪಂತ್ ಬ್ಯಾಟ್ ಮೇಲಕ್ಕೆ ಎತ್ತಿ ಸೆಲೆಬ್ರೆಷನ್ ಮಾಡಿದರು.
ಮೈದಾನದಲ್ಲಿ ಸೆಂಚುರಿ ಸಂಭ್ರಮಿಸುವಾಗ ಹೆಲ್ಮೆಟ್ ಹಾಗೂ ಕೈಗಳಿಗಿದ್ದ ಗ್ಲೌಸ್ಗಳನ್ನು ಬಿಚ್ಚಿದ ರಿಷಭ್ ಪಂತ್, ಅದ್ಭುತವಾದ ಫ್ರಂಟ್ಫ್ಲಿಪ್ ಹೊಡೆದು ಖುಷಿ ಪಟ್ಟರು. ಮನಸಲ್ಲಿದ್ದ ಎಲ್ಲ ನೋವುಗಳು ಮಾಯವಾದಂತೆ ಎರಡು ಕೈಗಳನ್ನು ಅಗಲ ಮಾಡಿ ಆಕಾಶದೆಡೆಗೆ ಮುಖ ಮಾಡಿದರು. ಆಗಸದೆಡೆಗೆ ಫೈಯಿಂಗ್ ಕಿಸ್ ಮಾಡಿ, ಕೈತೋರಿಸಿದರು. ಸದ್ಯ ರಿಷಭ್ ಪಂತ್ ಅವರ ಶತಕದ ಸಂಭ್ರಮ, ಫ್ರಂಟ್ಫ್ಲಿಪ್ ಹೊಡೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
COLDEST IPL CENTURY CELEBRATION.
- This is Rishabh Pant special. 😍❤️pic.twitter.com/0RWA1B2BYi
— Mufaddal Vohra (@mufaddal_vohra)
COLDEST IPL CENTURY CELEBRATION.
- This is Rishabh Pant special. 😍❤️pic.twitter.com/0RWA1B2BYi— Mufaddal Vohra (@mufaddal_vohra) May 27, 2025
">May 27, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ