Advertisment

ಪಂತ್​​ಗೆ ಒಂದು ಸೆಲ್ಯೂಟ್.. ಕ್ರಿಕೆಟ್ ಕಾಶಿಯಲ್ಲಿ ಲೆಜೆಂಡ್​​ಗಳು ಜೈಕಾರ ಹಾಕಿದ್ಯಾಕೆ..?

author-image
Ganesh
Updated On
ಪಂತ್​​ಗೆ ಒಂದು ಸೆಲ್ಯೂಟ್.. ಕ್ರಿಕೆಟ್ ಕಾಶಿಯಲ್ಲಿ ಲೆಜೆಂಡ್​​ಗಳು ಜೈಕಾರ ಹಾಕಿದ್ಯಾಕೆ..?
Advertisment
  • ಲಾರ್ಡ್ಸ್​​ ಸ್ಟೇಡಿಯಂನಲ್ಲಿ ಫೈಟರ್​ ಪಂತ್​ ಹೋರಾಟ
  • ನೋವಲ್ಲಿ ನರಳಾಡ್ತಿದ್ರೂ ಕೆಚ್ಚೆದೆಯ ಹೋರಾಟ
  • ಸಂಕಷ್ಟಕ್ಕೆ ಸಿಲುಕಿದ ತಂಡ, ರನ್​ಭೂಮಿಗಿಳಿದ ‘ಸೈನಿಕ’

ಟೀಮ್​ ಇಂಡಿಯಾದ ವೈಸ್​ ಕ್ಯಾಪ್ಟನ್​​ ರಿಷಭ್​ ಪಂತ್​ಗೆ ಲೆಜೆಂಡ್​​ಗಳ ಜೈಕಾರ ಜೋರಾಗಿದೆ. 74 ರನ್​ಗಳಿಗೆ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್​ ಪಂತ್​​ ಸೆಂಚುರಿ ಮಿಸ್​​ ಮಾಡ್ಕೊಂಡ್ರು. ತಾನೊಬ್ಬ​ ಟ್ರೂ ಫೈಟರ್​ ಅನ್ನೋದನ್ನ ವಿಶ್ವ ಕ್ರಿಕೆಟ್​ಗೆ ಮತ್ತೊಮ್ಮೆ ತೊರಿಸಿಕೊಟ್ಟಿದ್ದಾರೆ. ಅಸಾಧ್ಯ ನೋವಿನ ನಡುವೆ ಪಂತ್​ ಕಟ್ಟಿದ ಫೆಂಟಾಸ್ಟಿಕ್​ ಇನ್ನಿಂಗ್ಸ್​ಗೆ ಸೆಲ್ಯೂಟ್​​ ಹೊಡಿಲೇಬೇಕು.

Advertisment

ಕೈಗೆ ಬಡಿದ ಬಾಲ್​​, ನೋವಿನಲ್ಲಿ ನರಳಾಟ

ಆರಂಭದಲ್ಲಿ 107 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಫಸ್ಟ್​​ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 300ರ ಗಡಿಯನ್ನಾದರೂ ದಾಟುತ್ತಾ ಅನ್ನೋ ಪ್ರಶ್ನೆ ಕಾಡಿತ್ತು. 4ನೇ ವಿಕೆಟ್​​ಗೆ ಕ್ರಿಸ್​ನಲ್ಲಿ ಜೊತೆಯಾದ ಪಂತ್​-ಕೆಎಲ್​ ರಾಹುಲ್​ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ್ರು. ಇಂಗ್ಲೆಂಡ್​ ತಂಡಕ್ಕೆ ಕಾಟ ಕೊಟ್ಟ ಈ ಜೋಡಿ 141 ರನ್​ಗಳ ಸಾಲಿಡ್​ ಜೊತೆಯಾಟವಾಡಿದ್ರು. ರಾಹುಲ್​ ಕ್ಲಾಸ್​ ಆಟವಾಡಿದ್ರು ಬಿಡಿ. ಪಂತ್​ ಆಟವಿತ್ತಲ್ಲ. ಅದು ನೆಕ್ಸ್ಟ್​ ಲೆವೆಲ್​. ಅದೊಂದು ಇನ್ನಿಂಗ್ಸ್​ ಮಾತ್ರವಲ್ಲ.. ಕೆಚ್ಚೆದೆಯ ಹೋರಾಟದ ಪ್ರತಿಬಿಂಬ.

ಇದನ್ನೂ ಓದಿ: ಆಬಲವಾಡಿಯಲ್ಲಿ ಹರಿಸೇವೆ: ಕೊಪ್ಪರಿಕೆಗಳಲ್ಲಿ 12 ಟನ್ ಪ್ರಸಾದ.. 20,000 ಭಕ್ತರಿಗೆ ತಾವರೆ ಎಲೆಯಲ್ಲಿ ಊಟ..!

publive-image

ಲಾರ್ಡ್ಸ್​ ಟೆಸ್ಟ್​ನ ಮೊದಲ ದಿನದಾಟದಲ್ಲೇ ರಿಷಭ್​ ಪಂತ್​ ಇಂಜುರಿಗೆ ತುತ್ತಾಗಿದ್ರು. ಕೀಪಿಂಗ್​ ವೇಳೆ ಚೆಂಡು ಬೆರಳಿಗೆ ಬಡಿದ ಪರಿಣಾಮ ಅಸಾಧ್ಯ ನೋವಲ್ಲಿ ನರಳಾಡಿದ್ರು. ಇನ್​ಫ್ಯಾಕ್ಟ್​​ ಆ ಕ್ಷಣವೇ ಮೈದಾನ ತೊರೆದ ಪಂತ್​, ಕೀಪಿಂಗ್​ನಿಂದಲೇ ದೂರ ಉಳಿದರು.

Advertisment

ರನ್​ಭೂಮಿಗಿಳಿದ ಸೈನಿಕ!

ಇಂಗ್ಲೆಂಡ್​ ಆಲೌಟ್​​ ಬಳಿಕ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾ ಪರ ಬ್ಯಾಟ್ಸ್​ಮನ್​ಗಳು ಬಿಗ್​ ಸ್ಕೋರ್​ಗಳಿಸುವಲ್ಲಿ ವಿಫಲರಾದ್ರು. ಜೈಸ್ವಾಲ್​, ಕರುಣ್​ ನಾಯರ್​​, ಶುಭ್​ಮನ್​ ಗಿಲ್​ ಪೆವಿಲಿಯನ್​ಗೆ ವಾಪಾಸ್ಸಾದ ಪರಿಣಾಮ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಆ ಸಮಯದಲ್ಲಿ ವೀರ ಸೈನಿಕನಂತೆ ರನ್​​ಭೂಮಿಗೆ ಇಳಿದಿದ್ದು ಪಂತ್​.

ಇದನ್ನೂ ಓದಿ: ಜಾನಪದ ಗಾಯಕ ಮಾರುತಿ ಲಟ್ಟೆ ಅಪಘಾತ ಕೇಸ್​​ಗೆ ಬಿಗ್​ ಟ್ವಿಸ್ಟ್; 5 ಸಾವಿರ ರೂಗಾಗಿ ಜೀವವನ್ನೇ ತೆಗೆದರು..

publive-image

ಅಸಾಧ್ಯವಾದ ನೋವು

ನಿಮಗೆ ನೆನಪಿರಲಿ 2ನೇ ದಿನದಾಟದ ವೇಳೆ ಪಂತ್​ ಮೈದಾನಕ್ಕಿಳಿದಾಗ ಕೈಗೆ ಗ್ಲೌಸ್ ಹಾಕೋಕೆ ಕೂಡ ಆಗ್ತಿರಲಿಲ್ಲ. ಅಷ್ಟೊಂದು ನೋವಿತ್ತು. ಆ ನೋವಿನ ನಡುವೆಯೂ ಪಂತ್​ ಹೋರಾಟ ನಡೆಸಿದ್ರು. ಇದರ ಮಧ್ಯದಲ್ಲಿ ಕೆಲವು ಎಸೆತಗಳು ನೇರವಾಗಿ ಗಾಯವಾಗಿದ್ದ ಬೆರಳಿಗೆ ಬಡಿದಿದ್ದು ಇದೇ. ಆಗ ಪಂತ್​ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.

Advertisment

ಪಂತ್​​ ಫೆಂಟಾಸ್ಟಿಕ್​ ಆಟ, ಆಂಗ್ಲರಿಗೆ ಸಂಕಟ

ಅಸಾಧ್ಯ ನೋವಿನಿಂದ ಬಳಲುತ್ತಿದ್ದರೂ ಪಂತ್​ ಬ್ಯಾಟಿಂಗ್​ನ ಗತ್ತು ಮಾತ್ರ ಕಡಿಮೆಯಾಗಿರಲಿಲ್ಲ. 2ನೇ ದಿನದಾಟದಲ್ಲಿ ರಕ್ಷಣಾತ್ಮಕ ಆಟವಾಡಿದ ಪಂತ್​​, 3ನೇ ದಿನದಾಟದಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿ ಬಾರಿಸಿದ್ರು. ಫೆಂಟಾಸ್ಟಿಕ್​ ಬ್ಯಾಟಿಂಗ್​ ನಡೆಸಿದ ಪಂತ್ ಎದುರಿಸಿದ​ 86ನೇ ಎಸೆತವನ್ನ ಸಿಕ್ಸರ್​​ ಸಿಡಿಸಿ ತನ್ನದೇ ಸ್ಟೈಲ್​ನಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು.

ಹಾಫ್​ ಸೆಂಚುರಿ ಬಳಿಕ ಪಂತ್​ ಅಬ್ಬರ ಜೋರಾಯ್ತು. ಬಿಗ್​ ಶಾಟ್​​​ಗಳ ಬಾರಿಸಿ ರನ್​ ಕೊಳ್ಳೆ ಹೊಡೆದ್ರು. 8 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಪಂತ್​ ಆಂಗ್ಲರಿಗೆ ಸಖತ್​ ಕಾಟ ಕೊಟ್ರು. 112 ಎಸೆತ ಎದುರಿಸಿ 74 ರನ್​ಗಳಿಸಿದ್ದ ಪಂತ್​ ಶತಕ ಸಿಡಿಸೋ ನಿರೀಕ್ಷೆ ಮೂಡಿಸಿದ್ರು. ದುರಾದೃಷ್ಟವಶಾತ್​ ರನೌಟ್​ ಆಗಿ ನಿರ್ಗಮಿಸಿದ್ರು.

ಇದನ್ನೂ ಓದಿ: ಮಕ್ಕಳಿಗೆ ತಾಯಿ ಪ್ರೀತಿ ಕೊಟ್ಟಿಲ್ಲ; ಹೇಳ್ದೆ, ಕೇಳ್ದೆ 15 ದಿನ ಎಲ್ಲಿಗೋ ಹೋಗಿದ್ಲು.. ಚೂರಿ ಇರಿತ ಕೇಸ್​ಗೆ ಟ್ವಿಸ್ಟ್

Advertisment

publive-image

66ನೇ ಓವರ್​ನ 3ನೇ ಎಸೆತದಲ್ಲಿ ಪಂತ್​ ರನೌಟ್​ ಆಗ್ತಿದ್ದಂತೆ ಆಂಗ್ಲರ ಪಡೆ ಮೈದಾನದಲ್ಲಿ ರಣಕೇಕೆ ಹಾಕಿತು. ಆ ಸಂಭ್ರಮಾಚರಣೆಯೇ ಹೇಳುತ್ತಿತ್ತು ಪಂತ್​ ಯಾವ ಮಟ್ಟಕ್ಕೆ ಇಂಗ್ಲೆಂಡ್​ ಕಾಟ ಕೊಟ್ರು ಅಂತಾ. ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಇಂಜುರಿಯ ನೋವಿನ ನಡುವೆಯೂ ಬಂದು ಕೆಚ್ಚೆದೆಯ ಹೋರಾಟ ನಡೆಸಿದ ಪಂತ್ ಅವರನ್ನ​ ಮೆಚ್ಚಲೇಬೇಕು. ಫೈಟರ್​ ಪಂತ್​ಗೊಂದು ಸಲಾಂ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment