ನೋವು ತಾಳಲಾರದೇ ಇಂಜೆಕ್ಷನ್ ಪಡೆದು ಬ್ಯಾಟ್ ಬೀಸಿದ ಪಂತ್.. ಇದೀಗ ಮತ್ತೊಂದು ಆಘಾತ..!

author-image
Ganesh
Updated On
ನೋವು ತಾಳಲಾರದೇ ಇಂಜೆಕ್ಷನ್ ಪಡೆದು ಬ್ಯಾಟ್ ಬೀಸಿದ ಪಂತ್.. ಇದೀಗ ಮತ್ತೊಂದು ಆಘಾತ..!
Advertisment
  • ಟೀಮ್ ಇಂಡಿಯಾಗೆ ಶಾಕ್ ಮೇಲೆ ಶಾಕ್..!
  • ಇಂಜುರಿ ರಿಷಭ್ ಪಂತ್ ಸರಣಿಯಿಂದ ಔಟ್​
  • ಕಾಲ್ಬೆರಳಿಗೆ ಗಂಭೀರ ಗಾಯ 6 ವಾರ ವಿಶ್ರಾಂತಿ

ಇಂಡೋ-ಇಂಗ್ಲೆಂಡ್​ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್​ ಮ್ಯಾಚ್ ಭರದಿಂದ ಸಾಗ್ತಿದೆ. ಪಂದ್ಯದ ನಡುವೆ ರಿಷಭ್ ಪಂತ್ ಇಂಜುರಿ ಟೀಮ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗಾಯದ ನೋವಿನ ನಡುವೆಯೂ ಪಂತ್​ ಬ್ಯಾಟಿಂಗ್ ನಡೆಸಿ ಎಲ್ಲರ ಮನ ಗೆದ್ದಿದ್ದಾರೆ. ತಂಡಕ್ಕಾಗಿ ಬ್ಯಾಟ್​ ಹಿಡಿದು ಹೋರಾಡಿದ ಪಂತ್​, ಗ್ಲೌಸ್​ ತೊಟ್ಟು ಕೀಪಿಂಗ್​ ಮಾಡಲಾರರು. ಮುಂದಿನ ಟೆಸ್ಟ್​​​ನಲ್ಲೂ ಆಡಲ್ಲ.

ಮ್ಯಾಂಚೆಸ್ಟರ್​ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನ 67ನೇ ಓವರ್​​​ನ 4ನೇ ಎಸೆತ. ಇದು ಒಂದು ಕೇವಲ ಎಸೆತವಲ್ಲ. ಇಡೀ ಟೀಮ್ ಇಂಡಿಯಾ ಪಾಲಿನ ವಿಲನ್. ರಿಷಭ್ ಪಂತ್ ಎಂಬ ಗೇಮ್ ಚೇಂಜರ್​​ನ ಗೇಮ್​ನಿಂದಲೇ ಹೊರ ಕಳಿಸಿದ ಡೆಡ್ಲಿ ಎಸೆತ. ಈ ಒಂದು ಎಸೆತದಿಂದ ​ಇಡೀ ಟೀಮ್ ಇಂಡಿಯಾ ಇದೀಗ ಆತಂಕದಲ್ಲಿದೆ.

ಇದನ್ನೂ ಓದಿ: WWE ದಿಗ್ಗಜ ಹಲ್ಕ್ ಹೋಗಾನ್ ಇನ್ನಿಲ್ಲ.. ಹಠಾತ್ ನಿಧನಕ್ಕೆ ಆಗಿದ್ದೇನು..?

publive-image

ಕ್ರಿಸ್ ವೋಕ್ಸ್​ ಎಸೆದ ಚೆಂಡು ಪಂತ್ ಬ್ಯಾಟ್​ಗೆ ಸವರಿ​​​ ಪಾದಕ್ಕೆ ಬಡಿದಿತ್ತು. ಬ್ಯಾಟ್​​ಗೆ​ ತಾಗಿದ್ರಿಂದ ನಾಟ್​​ ಔಟ್​ ಅನ್ನೋ ಖುಷಿ ಗ್ಯಾಲರಿಯಿಂದ ನೋಡ್ತಿದ್ದ ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿತ್ತು. ಅಭಿಮಾನಿಗಳಲ್ಲೂ ಇದೇ ಸಂಭ್ರಮವಿತ್ತು. ಮೈದಾನದಲ್ಲಿದ್ದ ಪಂತ್​ ಸಹಿಸಲಸಾಧ್ಯವಾದ ನೋವಿನಲ್ಲಿ ನರಳಾಡುತ್ತಿದ್ದರು. ಕಾಲಲ್ಲಿ ರಕ್ತ ಬಂತು. ಕ್ಷಣಾರ್ದದಲ್ಲಿ ಪಾದ ಉದಿಕೊಳ್ತು. ಗಂಭೀರ ಇಂಜುರಿಯ ಹೊರತಾಗಿಯೂ 2ನೇ ದಿನದಾಟದಲ್ಲಿ ನೋವಿನ ನಡುವೆ ಪಂತ್​ ಬ್ಯಾಟಿಂಗ್​ ನಡೆಸಿದ್ರು. ಅಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಯಾಕಂದ್ರೆ ಎಲ್ಲವೂ ಸರಿಯಿಲ್ಲ.

ಟೆಸ್ಟ್​ ಸರಣಿಯಿಂದ ರಿಷಭ್ ಪಂತ್ ಔಟ್​.!

ಮೊದಲ ದಿನ ಇಂಜುರಿಯಾಗಿದ್ದ ರಿಷಭ್ ಪಂತ್​ರನ್ನ ಸ್ಕ್ಯಾನಿಂಗ್​​ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಸ್ಕ್ಯಾನಿಂಗ್​ನಲ್ಲಿ ಇಂಜುರಿ ಪ್ರಮಾಣ ಗಂಭೀರವಾಗಿರೋದು ತಿಳಿದು ಬಂದಿದೆ. ಈ ಕಾರಣಕ್ಕೆ ವೈದ್ಯರ ತಂಡ 6 ವಾರಗಳ ವಿಶ್ರಾಂತಿಗೆ ಸೂಚಿಸಿದೆ. ಇದ್ರ ಹೊರತಾಗಿ ಇಂಜೆಕ್ಷೆನ್​ ತೆಗೆದುಕೊಂಡು ಪಂತ್​, ಫಸ್ಟ್​ ಇನ್ನಿಂಗ್ಸ್​​​ನಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ. ಕೀಪಿಂಗ್​ ಮಾಡಲ್ಲ.. ಇನ್ನು ಮುಖ್ಯವಾದ ವಿಚಾರ ಏನಂದ್ರೆ ಈ ಸರಣಿಯಿಂದ ಪಂತ್​​ ರೋಲ್ಡ್​ ಔಟ್​​ ಆಗಿದ್ದಾರೆ.

ಆಪದ್ಬಾಂಧವ​ ಇಲ್ದೇ ಟೀಮ್ ಇಂಡಿಯಾಗೆ ಸಂಕಷ್ಟ

ಈ ಪ್ರವಾಸದಲ್ಲಿ ಇಂಗ್ಲೆಂಡ್​ ಅಟ್ಯಾಕ್​ಗೆ ಕೌಂಟರ್ ಅಟ್ಯಾಕ್ ಮಾಡ್ತಿದ್ದ ಪಂತ್​, ಎದುರಾಳಿಯ ಪ್ಲಾನ್ಸ್​ಗಳನ್ನು ಉಲ್ಟಾ ಮಾಡ್ತಿದ್ದರು. ಆದ್ರೀಗ ರಿಷಭ್ ಪಂತ್ ಸರಣಿಯಿಂದ ಹೊರಬಿದ್ದಿದ್ದಾರೆ. ಅಗತ್ಯ ಬಿದ್ರೆ ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಪಂತ್​, ಬ್ಯಾಟಿಂಗ್​ ನಡೆಸಲಿದ್ದಾರೆ. ಮುಂದಿನ ಪಂದ್ಯದಲ್ಲಿ ಆಡಲ್ಲ. ಫೈಟರ್​ ಪಂತ್​​ ಅಲಭ್ಯತೆ ಟೀಮ್​ ಇಂಡಿಯಾಗೆ ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ: ಪ್ರೇಮಿಗಳಿಗೆ ಶುಭದಿನ, ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಎದುರಾಗುತ್ತೆ.. ಇಲ್ಲಿದೆ ಇಂದಿನ ಭವಿಷ್ಯ

ಬ್ಯಾಟಿಂಗ್​ಗೆ ಪಂತ್​ ಸೀಮಿತ, ಜುರೇಲ್ ಕೀಪಿಂಗ್.!

ಗಂಭೀರ ಇಂಜುರಿಗೆ ತುತ್ತಾಗಿರುವ ರಿಷಭ್ ಪಂತ್​ಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಬ್ಯಾಟಿಂಗ್​ ನಡೆಸಿರೋ ಪಂತ್​​, ಕೀಪಿಂಗ್​ ಮಾಡಲ್ಲ. ಈ ಪಂದ್ಯದಲ್ಲಿ ದೃವ್​ ಜುರೇಲ್​​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸ್ತಾರೆ ಅನ್ನೋದನ್ನ ಬಿಸಿಸಿಐ ಈಗಾಗಲೇ ಕನ್​ಫರ್ಮ್​ ಮಾಡಿದೆ. ಇದೀಗ ಪಂತ್​ ಹೊರ ಬಿದ್ದಿರೋದ್ರಿಂದ ಬದಲಿ ಆಟಗಾರರ ಆಯ್ಕೆಯ ಸರ್ಕಸ್​ ಈಗ ಶುರುವಾಗಿದೆ.

ಅಂತಿಮ ಟೆಸ್ಟ್​ಗೆ ಪಂತ್​ ಅಲಭ್ಯ.. ಯಾರಿಗೆ ಬುಲಾವ್..?

ರಿಷಭ್ ಪಂತ್ ಅಲಭ್ಯತೆಯಲ್ಲಿ ಯಾರಿಗೆ ಮಣೆಹಾಕಬೇಕು ಅನ್ನೋ ಟೆನ್ಶನ್​ ಮ್ಯಾನೇಜ್​ಮೆಂಟ್​​​ ಹಾಗೂ ಸೆಲೆಕ್ಷನ್​ ಕಮಿಟಿಯದ್ದಾಗಿದೆ. ದೃವ್​ ಜುರೇಲ್​ ಬ್ಯಾಕ್​ಅಪ್​ ವಿಕೆಟ್​ ಕೀಪರ್​ ಆಯ್ಕೆಗೆ ಹುಡುಕಾಟ ಸದ್ಯ ನಡೀತಾ ಇದೆ. ತಂಡದಲ್ಲಿರೋ ಕೆ.ಎಲ್​ ರಾಹುಲ್​ಗೆ ಕೀಪಿಂಗ್​ ಮಾಡೋ ಸಾಮರ್ಥ್ಯವಿದೆ. ​ರಾಹುಲ್​ ಹೊರತಾಗಿ ಬೇರೆ ಆಟಗಾರರ ಆಯ್ಕೆಯತ್ತಲೂ ಮ್ಯಾನೇಜ್​ಮೆಂಟ್​ ಚಿಂತಿಸಿದೆ.

ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​ ಇಶಾನ್​ ಕಿಶನ್​​ ಸದ್ಯ ಇಂಗ್ಲೆಂಡ್​ನಲ್ಲೇ ಇದ್ದಾರೆ. ಬ್ಯಾಕ್​ ಅಪ್​ ಕೀಪರ್​​ ಆಗಿ ಕಿಶನ್​ ಕರೆಸುವ ಬಗ್ಗೆ ಮ್ಯಾನೇಜ್​ಮೆಂಟ್​ ವಲಯದಲ್ಲಿ ಚಿಂತನೆ ನಡೆದಿದೆ. ಮೂಲಗಳ ಪ್ರಕಾರ ಕಿಶನ್​ ಕೂಡ ಇಂಜುರಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆ್ಯಂಕಲ್​ ಇಂಜುರಿಯಿಂದ ಕಿಶನ್​ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬ ಮಾಹಿತಿಯಿದೆ. ಹೀಗಾಗಿ ಬ್ಯಾಕ್​ ಅಪ್​ ಆಯ್ಕೆಗೆ ಇನ್ನೆರಡು ಆಟಗಾರರ ಬಗ್ಗೆಯೂ ಚರ್ಚೆ ನಡೆದಿದೆ.

ಇದನ್ನೂ ಓದಿ: ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!

ತಮಿಳು ನಾಡಿನ ವಿಕೆಟ್​ ಕೀಪರ್​​ ಎನ್​,ಜಗದೀಶನ್​, ಬೆಂಗಾಲ್​ ತಂಡದ ಅಭಿಷೇಕ್​ ಪೊರೆಲ್​ಗೆ ಬುಲಾವ್​ ನೀಡೋ ಬಗ್ಗೆ ಚರ್ಚೆ ನಡೆದಿದೆ. ಇಶಾನ್​ ಕಿಶನ್​ ಇಂಜುರಿಯಾಗಿರೋದ್ರಿಂದ ಈ ಇಬ್ಬರಲ್ಲಿ ಒಬ್ಬರಿಗೆ ಇಂಗ್ಲೆಂಡ್​ ಫ್ಲೈಟ್ ಟಿಕೆಟ್​ ಸಿಗೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ​ರಿಷಭ್ ಪಂತ್ ಇಂಜುರಿ ಯಾವ ಆಟಗಾರನ ಪಾಲಿಗೆ ಅದೃಷ್ಟ ಬಾಗಿಲನ್ನ ತೆರೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment