/newsfirstlive-kannada/media/post_attachments/wp-content/uploads/2025/06/ISHA_NEGI_RISHABH_PANTH.jpg)
ಟೀಮ್ ಇಂಡಿಯಾದ ವಿಕೆಟರ್ ಕೀಪರ್ ಹಾಗೂ ಟೆಸ್ಟ್ ಕ್ರಿಕೆಟ್ನ ಉಪನಾಯಕ ರಿಷಭ್ ಪಂತ್ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ರಿಷಭ್ ಪಂತ್ ಅವರ ರೂಮರ್ ಗರ್ಲ್ಫ್ರೆಂಡ್ ಇಶಾ ನೇಗಿ ಹೆಸರು ಕೇಳಿ ಬಂದಿದ್ದು ಇವರ ಆಸ್ತಿ ಮೌಲ್ಯ ಎಷ್ಟು ಇದೆ ಎಂದರೆ..?
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಷಭ್ ಪಂತ್ ಕಳೆದ ಕೆಲ ವರ್ಷಗಳಿಂದ ಎಂಟ್ರೆಪ್ರೆನರ್ ಹಾಗೂ ಇಂಟೆರಿಯರ್ ಡಿಸೈನರ್ ಆಗಿರುವ ಇಶಾ ನೇಗಿ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಇದೆ. ಆದರೆ ಈ ಬಗ್ಗೆ ಯಾರಿಗೂ ನಿಖರವಾಗಿ ತಿಳಿದಿಲ್ಲ. ಲಕ್ಸುರಿ ಲೈಫ್ಸ್ಟೈಲ್ ಹೊಂದಿರುವ ಇಶಾ ನೇಗಿ ವರ್ಷಕ್ಕೆ ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಲಕ್ಸುರಿ ಇಂಟೆರಿಯರ್ ಡಿಸೈನರ್ ವಿಭಾಗದಲ್ಲಿ ಇಶಾ ನೇಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ಸ್ಟಾದಲ್ಲೂ ಸಖತ್ ಫೇಮಸ್ ಆಗಿರುವ ಅವರು ಒಟ್ಟು 490ಕೆ ಫಾಲೋವರ್ಸ್ ಹೊಂದಿದ್ದಾರೆ. ಡೆಹರಾಡೂನ್ನಲ್ಲಿರುವ ಕಾನ್ವೆಂಟ್ ಆಫ್ ಜೇಸಸ್ ಮೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡಿ ಬಳಿಕ ಅಮಿಟಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಉತ್ತರಪ್ರದೇಶದ ನೋಯ್ಡಾದಲ್ಲಿ ತನ್ನದೇ ಕಂಪನಿ ಆರಂಭಿಸಿ ಬ್ಯುಸಿನೆಸ್ ಫಿಲ್ಡ್ಗೆ ಇಳಿದಿದ್ದಾರೆ.
ಇದನ್ನೂ ಓದಿ:ಒಂದೇ ಇನ್ನಿಂಗ್ಸ್ನಲ್ಲಿ ಜೈಸ್ವಾಲ್, ಗಿಲ್, ಪಂತ್ ಶತಕ.. ಬೃಹತ್ ರನ್ ಕಲೆ ಹಾಕಿದ ಟೀಮ್ ಇಂಡಿಯಾ, ಆಲೌಟ್!
ಇಶಾ ನೇಗಿ ಜಸ್ಟ್ ಸೋಶಿಯಲ್ ಮೀಡಿಯಾ ಸ್ಟಾರ್ ಅಷ್ಟೇ. ರಿಷಭ್ ಪಂತ್ ಜೊತೆ ಹೆಸರು ತಳಕು ಹಾಕಿಕೊಂಡ ಮೇಲೆ ಅವರ ಹೆಸರು ಎಲ್ಲಾ ಕಡೆ ಹಬ್ಬುತ್ತಿದೆ. ಆದರೆ ಐಷಾರಾಮಿ ಮನೆಗಳಿಗೆ ಅಲಂಕಾರ ಮಾಡುವಲ್ಲಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡುವಾಗ ಇಶಾ ಸಾಕಷ್ಟು ಬಾರಿ ಗ್ಯಾಲರಿಯಲ್ಲಿ ಕುಳಿತು ಸಖತ್ ಎಂಜಾಯ್ ಮಾಡುತ್ತಿದ್ದರು. ಇದೆಲ್ಲಾ ಗಮನಿಸಿದರೆ ಕ್ರಿಕೆಟ್ನಲ್ಲಿ ಪಂತ್ಗೆ ಸ್ಟ್ರಾಂಗ್ ಆಗಿ ಸಪೋರ್ಟ್ ಮಾಡುತ್ತಿದ್ದಾರೆ ಎನ್ನುವಂತೆ ಕಾಣಿಸುತ್ತಿದೆ.
ರಿಷಭ್ ಪಂತ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾದ ಇಶಾ ನೇಗಿ ಸದ್ಯ ತನ್ನ ಪ್ರೊಫೆಷನಲ್ ಕಡೆಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಪ್ರಚಾರದ ಗೀಳಿನಿಂದ ದೂರ ಉಳಿಯಲು ಪ್ರಯತ್ನಿಸುವ ಅವರು ಬ್ಯುಸಿನೆಸ್ ಅನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುತ್ತಾರೆ. ಸದ್ಯ ಅವರ ಆಸ್ತಿ ಮೌಲ್ಯ 10 ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಅಂದಾಜಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ