ವಿಕೆಟ್​ ಕೀಪಿಂಗ್ ಮಾಡೋಕೆ ರಿಷಭ್ ಪಂತ್​ ಹರಸಾಹಸ.. KL ರಾಹುಲ್​ಗೆ ಸಿಗುತ್ತಾ ಜವಾಬ್ದಾರಿ?

author-image
Bheemappa
ವಿಕೆಟ್​ ಕೀಪಿಂಗ್ ಮಾಡೋಕೆ ರಿಷಭ್ ಪಂತ್​ ಹರಸಾಹಸ.. KL ರಾಹುಲ್​ಗೆ ಸಿಗುತ್ತಾ ಜವಾಬ್ದಾರಿ?
Advertisment
  • ಭಾರತ- ಇಂಗ್ಲೆಂಡ್ ನಡುವಿನ 4ನೇ​ ಪಂದ್ಯಕ್ಕೆ ಕೌಂಟ್​ಡೌನ್
  • ಭಾರತ ತಂಡದಲ್ಲಿ ವಿಕೆಟ್​ ಕೀಪಿಂಗ್ ಮಾಡೋದು ಯಾರು..?
  • ಸರಣಿ ಸಮಬಲ ಮಾಡುವ ತವಕದಲ್ಲಿರುವ ಶುಭ್​ಮನ್ ಪಡೆ

ಸೋಲು, ಗೆಲುವು ಮತ್ತೆ ಸೋಲು. ಈಗ ಮಿಷನ್ ಮ್ಯಾಂಚೆಸ್ಟರ್. ಈ ಟಾರ್ಗೆಟ್ ಫಿಕ್ಸ್ ಮಾಡಿರುವ ಟೀಮ್ ಇಂಡಿಯಾಗೆ ಬಿಗ್ ಟೆನ್ಶನ್ ಶುರುವಾಗಿದೆ. ಇದಕ್ಕೆ ಮೂಲ ರಿಷಭ್ ಪಂತ್. ಅದ್ಯಾಕೆ?

ಇಂಡೋ ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಲಾರ್ಡ್ಸ್​ನಲ್ಲಿ ಸೋತ ಟೀಮ್ ಇಂಡಿಯಾ, ಈಗ ಮ್ಯಾಂಚೆಸ್ಟರ್‌ನಲ್ಲಿ ಕಮ್​ಬ್ಯಾಕ್​ ಮಾಡುವ ಉತ್ಸುಕದಲ್ಲಿದೆ. ಇದಕ್ಕಾಗಿ ನೆಟ್ಸ್​ನಲ್ಲಿ ಭಾರೀ ಬೆವರಿಳಿಸ್ತಿರುವ ಆಟಗಾರರು, ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ಲೆಕ್ಕಾಚಾರದಲ್ಲಿದೆ. ಆ ಮೂಲಕ ಸರಣಿ ಸಮಬಲ ಮಾಡಿಕೊಳ್ಳುವ ಕನಸು ಕಾಣ್ತಿದೆ. ಆದ್ರೆ, ಇದೇ ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಕಾರಣ ರಿಷಭ್ ಪಂತ್.

publive-image

ಮ್ಯಾಂಚೆಸ್ಟರ್ ಟೆಸ್ಟ್​ನಲ್ಲಿ​ ಆಡ್ತಾರಾ ರಿಷಭ್ ಪಂತ್..?

ಲಾರ್ಡ್ಸ್​ನಲ್ಲಿ ಫಿಂಗರ್ ​ಇಂಜುರಿಗೆ ತುತ್ತಾಗಿದ್ದ ರಿಷಭ್​​ ಪಂತ್, ಮ್ಯಾಂಚೆಸ್ಟರ್​​​ನ 4ನೇ ಟೆಸ್ಟ್​ನಲ್ಲಿ ಆಡ್ತಾರಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಮತ್ತಷ್ಟು ಪುಷ್ಠ ನೀಡುವಂತೆ ಮೊದಲ ದಿನ ಅಭ್ಯಾಸದಿಂದ ದೂರ ಉಳಿದ್ದಾರೆ. ಇದು ಇಂಡಿಯನ್ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮತ್ತಷ್ಟು ಆತಂಕವನ್ನೇ ಹುಟ್ಟು ಹಾಕಿದೆ. ಇದೀಗ ಪಂತ್, ಮ್ಯಾಂಚೆಸ್ಟರ್​ನ ಬಿಗ್ ಬ್ಯಾಟಲ್​ನಲ್ಲಿ ಕಣಕ್ಕಿಳಿಯುವುದು ಬಹುತೇಕ ಕನ್ಫರ್ಮ್ ಆಗಿದೆ. ಆದ್ರೆ, ಯಾವ ರೋಲ್​​ನಲ್ಲಿ ಆಡ್ತಾರೆ ಅನ್ನೋದೆ ಪ್ರಶ್ನೆಯಾಗಿದೆ. ಇದಕ್ಕೆ ಕಾರಣ ಸಹಾಯಕ ಕೋಚ್ ಹೇಳಿಕೆ.

ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್​ಗೂ ಮುನ್ನ ಬ್ಯಾಟಿಂಗ್ ಮಾಡಲು ಸಮರ್ಥರಾಗುತ್ತಾರೆ ಎಂಬ ನಂಬಿಕೆ ಇದೆ. ಟೆಸ್ಟ್‌ ಪಂದ್ಯದಿಂದ ಹೊರಗಿಡಲು ಸಾಧ್ಯವಿಲ್ಲ. 3ನೇ ಟೆಸ್ಟ್‌ನಲ್ಲಿ ನೋವಿನಿಂದ ಬ್ಯಾಟಿಂಗ್ ಮಾಡಿದರು. ಕೀಪಿಂಗ್ ಮಾಡಲು ಸಾಧ್ಯವಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇನ್ನಿಂಗ್ಸ್‌ ಮಧ್ಯೆ ಕೀಪರ್ ಬದಲಿಸಲು ನಾವು ಬಯಸಲ್ಲ.

ರಿಯಾನ್ ಟೆನ್ ಡೆಸ್ಕೋಟ್, ಸಹಾಯಕ ಕೋಚ್

ಮ್ಯಾಂಚೆಸ್ಟರ್ ಪಂದ್ಯದ ವೇಳೆಗೆ ಪಂತ್ ಫಿಟ್ ಆಗ್ತಾರೆ ಎಂದಿರುವ ರಿಯಾನ್ ಟೆನ್ ಡೆಸ್ಕೋಟ್, ಪಂತ್​ನ ಹೊರಗಿಡಲು ಬಯಸಲ್ಲ ಎಂದಿದ್ದಾರೆ. ಹಾಗಾದ್ರೆ, ರಿಷಭ್​ ಪಂತ್, 4ನೇ ಟೆಸ್ಟ್​ ವೇಳೆಗೆ ಫಿಟ್​ ಆಗಲಿಲ್ಲ ಅಂದ್ರೆ, ಸ್ಪೆಷಲಿಸ್ಟ್ ಬ್ಯಾಟರ್​ ಆಗಿ ಕಣಕ್ಕಿಳಿಯೋದು ಫಿಕ್ಸ್​.

ಸ್ಪೆಷಲಿಸ್ಟ್ ಬ್ಯಾಟ್ಸ್​​ಮನ್​​​ ರೋಲ್​ನಲ್ಲಿ ಯಾಕೆ..?

  • ಗೇಮ್ ಚೇಂಜರ್​​​ ಪಂತ್​​ಗೆ ಲಾರ್ಡ್ಸ್​ನಲ್ಲಿ ಫಿಂಗರ್​ ಇಂಜುರಿ
  • ಕೀಪಿಂಗ್​ನಿಂದ ದೂರ ಉಳಿದು ಬ್ಯಾಟಿಂಗ್ ಮಾಡಿದ್ದ ಪಂತ್
  • ಇಂಜುರಿ ಕಾಡುವ ಆತಂಕ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್ ಆಗಿ ಕಣಕ್ಕೆ
  • ಸ್ಪೆಷಲಿಸ್ಟ್ ಬ್ಯಾಟರ್ ಆಗುವುದರಿಂದ ತಂಡಕ್ಕೆ ಅಡ್ವಾಂಟೇಜ್
  • ಪಂತ್​ ಫಿಯರ್​ ಲೆಸ್​ ಬ್ಯಾಟಿಂಗ್​ ಎದುರಾಳಿ ಪ್ಲ್ಯಾನ್ಸ್​ ಉಲ್ಟಾ
  • ಮ್ಯಾಚ್ ವಿನ್ನರ್ ಪಂತ್ ಹೊರಗುಳಿದರೆ ತಂಡಕ್ಕೆ ಹಿನ್ನಡೆ ಹೆಚ್ಚು

ಇದನ್ನೂ ಓದಿ:ಕಿಂಗ್​ ಕೊಹ್ಲಿ ಬ್ರ್ಯಾಂಡ್ ಬಿಲ್ಡ್​ ಮಾಡಲು ಮುಂದಾದ ಗಿಲ್.. ಮ್ಯಾಚ್​ನಲ್ಲಿ ಏನೇನು ಮಾಡಿದ್ರು?

publive-image

ಜುರೇಲ್​​ಗೆ ನೀಡ್ತಾರಾ ಸ್ಥಾನ..? ಬ್ಯಾಟಿಂಗ್​ ಕ್ರಮಾಂಕದ್ದೇ ಚಿಂತೆ..!

ಪಂತ್ ಸ್ಪೆಷಲಿಸ್ಟ್​ ಬ್ಯಾಟರ್ ಆಗಿ ಕಣಕ್ಕಿಳಿದ್ರೆ, ವಿಕೆಟ್ ಕೀಪರ್ ಯಾರ್ ಆಗ್ತಾರೆ ಎಂಬ ಪ್ರಶ್ನೆ ಸಹಜವಾಗೇ ಕಾಡ್ತಿದೆ. ಪಂತ್, ವಿಕೆಟ್ ಕೀಪಿಂಗ್​ನಿಂದ ದೂರ ಉಳಿದ್ರೆ, ಕೆ.ಎಲ್.ರಾಹುಲ್ ಅಥವಾ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡೋ ಸಾಧ್ಯತೆ ಇದೆ. ಇನ್​ಫ್ಯಾಕ್ಟ್​_ ಸೌತ್ ಆಫ್ರಿಕನ್ ಕಂಡೀಷನ್ಸ್​ನಲ್ಲಿ ಟೆಸ್ಟ್​ನಲ್ಲಿ ಕೆ.ಎಲ್.ರಾಹುಲ್​​ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಆದ್ರೆ, ಪಂತ್ ಕಮ್​ಬ್ಯಾಕ್​ ಬಳಿಕ ರಾಹುಲ್, ವಿಕೆಟ್ ಕೀಪಿಂಗ್​ನಿಂದ ದೂರ ಉಳಿದಿದ್ದಾರೆ. ಹೀಗಾಗಿ ಧ್ರುವ್ ಜುರೇಲ್​ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.

ಆದ್ರೆ, ಲಾರ್ಡ್ಸ್​ ಟೆಸ್ಟ್​ನಲ್ಲಿ ಕಳಪೆ ಕೀಪಿಂಗ್​ ಮಾಡಿದ್ದ ಜುರೇಲ್​, ಅರ್ಧ ಟೆಸ್ಟ್​ ಸೋಲಿಗೆ ಕಾರಣವಾಗಿದ್ದಿದೆ. ಹೀಗಾಗಿ ಜುರೇಲ್​ಗೆ ಮತ್ತೊಂದು ನೀಡ್ತಾರಾ ಎಂಬ ಮತ್ತೊಂದು ಪ್ರಶ್ನೆಯೂ ಇದೆ. ಜುರೇಲ್​ಗೆ ಚಾನ್ಸ್ ನೀಡಿದ್ರೆ, ಯಾರನ್ನ ಡ್ರಾಪ್ ಮಾಡೋದು..? ಯಾರ ಬ್ಯಾಟಿಂಗ್ ಕ್ರಮಾಂಕ ಬದಲಿಸುವುದು ಎಂಬ ಮತ್ತೊಂದು ತಲೆನೋವು ಶುರುವಾಗುತ್ತೆ. ಈ ಕಾರಣಕ್ಕೆ ಮ್ಯಾನೇಜ್​ಮೆಂಟ್, ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೆ ಭಾರೀ ಕ್ಯುರಿಯಾಸಿಟಿ ಹುಟ್ಟುಹಾಕಿರುವುದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment