IPL Auction; ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆದ ಭಾರತದ ಮೂವರು ಸ್ಟಾರ್ ಪ್ಲೇಯರ್ಸ್?

author-image
Bheemappa
Updated On
IPL Auction; ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆದ ಭಾರತದ ಮೂವರು ಸ್ಟಾರ್ ಪ್ಲೇಯರ್ಸ್?
Advertisment
  • ಅತ್ಯಂತ ಹೆಚ್ಚು ಹಣಕ್ಕೆ ಸೇಲ್ ಆಗಿರುವ ಪ್ಲೇಯರ್ ಯಾರು?
  • ಸೌದಿ ಅರೇಬಿಯಾದಲ್ಲಿ ಆಟಗಾರರ ವ್ಯಾಪಾರ ಹೇಗೆ ಇದೆ?
  • ಮಹತ್ವದ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಭಾಗಿ

ಐಪಿಎಲ್ ಮೆಗಾ ಹರಾಜು ಮೊದಲ ದಿನ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲಾ 10 ಫ್ರಾಂಚೈಸಿಗಳು ಬಿಡ್ ಮಾಡುತ್ತಿದ್ದು ಆಟಗಾರರನ್ನ ಖರೀದಿ ಮಾಡಲು ನಾ ಮುಂದು, ನೀ ಮುಂದು ಎನ್ನುತ್ತಿವೆ. ಅಳೆದು ತೂಗಿ ಪ್ಲೇಯರ್ಸ್ ಅನ್ನು ತಂಡಕ್ಕೆ ಬರಮಾಡಿಕೊಳ್ಳುತ್ತಿವೆ. ಈ ವ್ಯಾಪಾರವು ಕೋಟಿ ಲೆಕ್ಕದಲ್ಲಿದ್ದು ಆಟಗಾರರ ಅದೃಷ್ಟ ಬದಲಾಯಿಸಿದೆ. ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ದಾಖಲೆ ಮೊತ್ತಕ್ಕೆ ಸೇಲ್ ಆಗಿ ಇತಿಹಾಸ ಬರೆದಿದ್ದಾರೆ.

publive-image

ಇದನ್ನೂ ಓದಿ:IPL Auction; ಇಶನ್ ಕಿಶನ್​ಗೆ ಜಾಕ್​ಪಾಟ್​.. ವಿಕೆಟ್ ಕೀಪರ್ ಮೇಲೆ ದುಡ್ಡು ಸುರಿದ ಟೀಮ್ ಯಾವುದು?

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ರಿಷಬ್ ಪಂತ್​ರನ್ನ ಖರೀದಿಸಲು ಮೊದಲು ಆರ್​ಸಿಬಿ ಹಾಗೂ ಲಕ್ನೋ ಪೈಪೋಟಿ ನಡೆಸಿದ್ದವು. ಇವರ ಜೊತೆ ಸನ್​ರೈಸರ್ಸ್ ಹೈದರಾಬಾದ್ ಕೂಡ ಬಿಡ್ ಮಾಡಿತು. ರಿಷಬ್ ಪಂತ್ 17.5 ಕೋಟಿ ರೂ. ಆಗಿದ್ದಾಗ ಆರ್​ಸಿಬಿ ಬಿಡ್​ನಿಂದ ಹಿಂದಕ್ಕೆ ಸರಿಯಿತು. ಹೀಗಾಗಿ ಲಕ್ನೋ ಮತ್ತು ಹೈದ್ರಾಬಾದ್ ನಡುವೆ ಭರ್ಜರಿ​ ಪೈಪೋಟಿ ನಡೆಯಿತು. 20.75 ಕೋಟಿ ರೂ.ಗೆ ಹೈದ್ರಾಬಾದ್ ಹಿಂದಕ್ಕೆ ಬಂದಿತು.

ಹೀಗಾಗಿ ರಿಷಬ್​ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಪ್ಲೇಯರ್ ಎಂದು ಖ್ಯಾತಿ ಪಡೆದರು. ಆರಂಭದ ದಿನವೇ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿತು. ಐಪಿಎಲ್ ಇತಿಹಾಸದಲ್ಲೇ ರಿಷಬ್ ಪಂತ್ ಅತ್ಯಂತ ದುಬಾರಿ ಪ್ಲೇಯರ್ ಆಗಿದ್ದಾರೆ.

ಇನ್ನು ಶ್ರೇಯಸ್​ ಅಯ್ಯರ್​ಗೆ ಹರಾಜಿನಲ್ಲಿ 26.75 ಕೋಟಿ ರೂಪಾಯಿ ನೀಡಿ ಪಂಜಾಬ್ ಫ್ರಾಂಚೈಸಿ ಖರೀದಿ ಮಾಡಿದೆ. ಈ ಮೂಲಕ ಚಾಂಪಿಯನ್ ತಂಡದ ನಾಯಕನನ್ನು ಪಂಜಾಬ್ ಪಡೆದುಕೊಂಡಿದೆ. ಇದರಿಂದ ಪಂಜಾಬ್​​ನಲ್ಲಿ ಕಪ್ ಗೆಲ್ಲುವ ನಿರೀಕ್ಷೆ ದುಪ್ಪಟ್ಟು ಆಗಿದೆ. ಅಲ್ಲದೇ ಪಂತ್​ಗಿಂತ ಕೇವಲ 25 ಲಕ್ಷ ರೂಪಾಯಿಗಳನ್ನು ಕಡಿಮೆ ಪಡೆದಿರುವ ಶ್ರೇಯಸ್ ಅಯ್ಯರ್ ಅವರು ಈ ಐಪಿಎಲ್ ಸೀಸನ್​​ನಲ್ಲಿ ಅತಿ ಹೆಚ್ಚು ಹಣ ಪಡೆದ 2ನೇ ಪ್ಲೇಯರ್ ಆಗಿದ್ದಾರೆ.

publive-image

ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತಮ್ಮದೇ ತಂಡದ ಆಟಗಾರ ಆಗಿರುವ ವೆಂಕಟೇಶ್ ಅಯ್ಯರ್ ಮೇಲೆ ಒಟ್ಟು 23.75 ಕೋಟಿ ಬಿಡ್ ಮಾಡಿದೆ. ವೆಂಕಟೇಶ್ ಅಯ್ಯರ್ ಹೆಸರು ಹರಾಜಿಗೆ ಕರೆದಾಗ ಆರ್​ಸಿಬಿ ಫ್ರಾಂಚೈಸಿಯು ಸಖತ್ ಪೈಪೋಟಿ ನೀಡಿತು. ಬರೋಬ್ಬರಿ 23.50 ಕೋಟಿ ರೂಪಾಯಿಗಳವರೆಗೆ ಆರ್​ಸಿಬಿ ಹರಾಜು ಕರೆದಿತ್ತು. ಈ ಹರಾಜಿನಲ್ಲಿ ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವೆ ಭಾರೀ ಬಿಡ್​ ನಡೆದಿತ್ತು. ಆದರೆ ಕೊನೆಗೆ ಈ ಬಿಡ್​ನಲ್ಲಿ ಕೋಲ್ಕತ್ತಾವೇ ಗೆಲುವು ಪಡೆಯಿತು. ಹೀಗಾಗಿ ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಹಣ ಪಡೆದ 3ನೇ ಆಟಗಾರ ವೆಂಕಟೇಶ್ ಅಯ್ಯರ್ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment