newsfirstkannada.com

‘ಆ ನೋವು ಅಷ್ಟಿಷ್ಟಲ್ಲ, ದೊಡ್ಡ ಯಾತನೆ’- IPLಗೆ ರೆಡಿಯಾದ ರಿಷಬ್ ಪಂತ್ ಮನದಾಳದ ಮಾತು

Share :

Published March 17, 2024 at 3:21pm

    ಪಂತ್​​​​​​​ಗೆ ವೈದ್ಯರು ದೇವರಾದ್ರೆ, ಪುನರ್ಜನ್ಮ ನೀಡಿದ್ದು ಬಿಸಿಸಿಐ

    IPL​​ನಲ್ಲಿ ಪಂತ್ ಬ್ಯಾಟಿಂಗ್ ಮಿಸ್​ ಮಾಡಿಕೊಂಡಿದ್ದ ಫ್ಯಾನ್ಸ್

    NCAನಲ್ಲಿ ಪ್ರತಿಯೊಬ್ಬರು ಸ್ವಾಗತ ಮಾಡಿದ್ದಕ್ಕೆ ಧನ್ಯವಾದಗಳು

ಟೀಮ್ ಇಂಡಿಯಾದ ಪ್ಲೇಯರ್​ ರಿಷಬ್​ ಪಂತ್​​​​​​​ ಪಾಲಿಗೆ ವೈದ್ಯರು ದೇವರಾದ್ರೆ, ಬಿಸಿಸಿಐ ಅತೀವ ಕಾಳಜಿ ವಹಿಸಿ ಪುನರ್ಜನ್ಮ ನೀಡಿದೆ. ಎಂಟರ್​ಟೈನ್​​ಮೆಂಟ್ ಅಂದರೆ ಈ ಡೇರಿಂಗ್ ಬ್ಯಾಟರ್​​ ಮೊದಲ ಸಾಲಿನಲ್ಲಿ ನಿಲ್ತಾರೆ. ಪವರ್​​ ಹಿಟ್ಟಿಂಗ್ ಶಾಟ್ಸ್​​​​, ಬೌಲರ್​ಗಳ ಭಯ ಬೀಳಿಸೋ ರೀತಿ, ಎನಿಟೈಮ್ ಗೇಮ್​ ಮೂಮೆಂಟ್​ ಬದಲಿಸುವ ಡಿಸ್ಟ್ರಾಕ್ಟಿಬ್ ಬ್ಯಾಟಿಂಗ್​​, ನಿಜಕ್ಕೂ ಎಲ್ಲವೂ ಕಣ್ಣಿಗೆ ಹಬ್ಬ. ಇಂತಹ ಪಂತ್​​ ರಣಾರ್ಭಟವನ್ನ ಫ್ಯಾನ್ಸ್ ಕಳೆದ ಐಪಿಎಲ್​ನಲ್ಲಿ ತುಂಬಾನೇ ಮಿಸ್ ಮಾಡಿಕೊಂಡಿದ್ರು.

ಆದ್ರೆ ಈ ಬಾರಿ ಪಂತ್ ಐಪಿಎಲ್​​ ವೈಭವ ಮತ್ತೆ ಮರುಕಳಿಸಲಿದೆ. ಡೆಡ್ಲಿ ಕಾರ್​ ಆ್ಯಕ್ಸಿಡೆಂಟ್ ಬಳಿಕ ರಿಷಬ್​​​​ ಕಂಪ್ಲೀಟ್​​​​ ರಿಕವರಿ ಆಗಿದ್ದಾರೆ. ಫುಲ್ ಫಿಟ್​​​ ಆ್ಯಂಡ್ ಫೈನ್ ಆಗಿದ್ದು ನೆಟ್ಸ್​ನಲ್ಲಿ ಸಾಕಷ್ಟು ಬೆವರು ಹರಿಸ್ತಿದ್ದಾರೆ. ಪಂತ್​​​​​, ಮುಂಬರೋ ಐಪಿಎಲ್​ನಲ್ಲಿ ಅಬ್ಬರಿಸುವುದು ನಿಜ. ಆದರೆ ಅವರು ರಿಕವರಿ ಸಮಯದಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದೊಂದು ದೊಡ್ಡ ಯಾತನೆಯ ಪ್ರಯಾಣ.

ಪುನಶ್ಚೇತನ ಶಿಬಿರ ನನಗೆ ತುಂಬಾ ಕಿರಿಕಿರಿ ಅನ್ನಿಸಿತ್ತು. ಯಾಕಂದ್ರೆ ಮಾಡುವುದನ್ನೆ ಮತ್ತೆ ಮತ್ತೆ ಮಾಡಬೇಕು. ಬೇರೆ ಆಯ್ಕೇನೆ ಇರ್ಲಿಲ್ಲ. ಅದೇ ಸ್ಟಾಫ್​​​, ಅದೇ ಜನರನ್ನ ನೋಡಿ ಬೋರಿಂಗ್ ಆಗ್ತಿತ್ತು. ಆದರೆ ಬೋರಿಂಗ್ ಅನ್ನಿಸಿದ್ರೂ ಚೇತರಿಕೆ ಕಾಣಲು ಸಹಾಯವಾಯ್ತು.

ರಿಷಬ್​ ಪಂತ್​​, ಭಾರತದ ಕ್ರಿಕೆಟಿಗ

ಪಂತ್ ಕ್ಷಿಪ್ರ ಸ್ಪಂದನೆ ಕಂಡು ಡಾಕ್ಟರ್ಸ್​ ಶಾಕ್​​​​..!

ಪಂತ್​ ಪುನಶ್ಚೇತನ ಶಿಬಿರದಲ್ಲಿ ಏಕಕಾಲಕ್ಕೆ ಅನೇಕ ಕೆಲಸಗಳನ್ನ ಮಾಡಬೇಕಿತ್ತು. ಇದ್ಯಾವುದಕ್ಕೂ ಪಂತ್ ಬೇಸರಗೊಳ್ಳಲಿಲ್ಲ. ವೈದ್ಯರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸಿ ಬೇಗನೆ ಗುಣಮುಖರಾದ್ರು.

ಬೆಳಗ್ಗೆ ಪುನಶ್ಚೇತನ. ಅದನ್ನ ಯಾವುದೇ ಕಾರಣಕ್ಕೂ ತಪ್ಪಿಸುವಂತಿರಲಿಲ್ಲ. ಬಳಿಕ ಮಸಾಜ್​​​, ಜಿಮ್ ಸೆಷನ್​​​​​​​ ಎಲ್ಲವೂ ಇತ್ತು. ಜೊತೆಗೆ ನ್ಯೂಟ್ರಿಷಿಯನ್​ ಕೂಡ ಸೇವನೆ ಮಾಡಬೇಕಿತ್ತು. ಅದನ್ನ ಪಾಲನೆ ಮಾಡೋದನ್ನ ಪಂತ್ ನೋಡಿ ಕಲಿಬೇಕು. ಅವರ ಸತತ ಪರಿಶ್ರಮದಿಂದ ಅವರಿಂದ ಇಲ್ಲಿದ್ದಾರೆ.

ಧನಂಜಯ್ ಕೌಶಿಕ್​​, ಎನ್​ಸಿಎ ವೈದ್ಯ

ಎನ್​ಸಿಎ ವೈದ್ಯರ ಆರೈಕೆ, ಬೆಂಬಲಕ್ಕೆ ಪಂತ್ ಬಿಗ್ ಸಲಾಂ

ಪಂತ್​ ಚೇತರಿಕೆಯಲ್ಲಿ ಡಾಕ್ಟರ್ಸ್​ ಪಾತ್ರ ದೊಡ್ಡದಿದೆ. ಅದ್ರಲ್ಲೂ ವಿಶೇಷವಾಗಿ ಬೆಂಗಳೂರಿನ ಎನ್​ಸಿಎ ವೈದ್ಯರ ಪಾತ್ರವನ್ನ ಮರೆಯಲು ಸಾಧ್ಯವೇ ಇಲ್ಲ.

ಎನ್​​​​​​​​​​​​ಸಿಎಯಲ್ಲಿ ಪ್ರತಿಯೊಬ್ಬರು ನನ್ನ ಸ್ವಾಗತಿಸುತ್ತಿದ್ದರು. ನಿತೀನ್, ಜೊತೆಗೆ ತುಳಸಿ ಭಾಯ್​​, ರಚ್ಚು ಹಾಗೂ ಧನಂಜಯ್​​ ಭಾಯ್​​ ಚೆನ್ನಾಗಿ ನೋಡಿಕೊಂಡ್ರು. ಅಲ್ಲಿದ್ದರು. ಪ್ರತಿಯೊಬ್ಬರು ನಾನು ಬೇಗನೆ ಗುಣಮುರಾಲೆಂದು ಪ್ರಯತ್ನಿಸಿದ್ರು. ದೊಡ್ಡ ಗಾಯದ ವೇಳೆ ಬಹಳಷ್ಟು ಹತಾಶೆ ಆಗುತ್ತೆ. ಆದ್ರೆ ಆ ವೇಳೆ ವೈದ್ಯರು ನನ್ನ ಜತೆಗಿದ್ರು. ತುಂಬಾ ಸಪೊರ್ಟ್​ ಮಾಡಿದ್ರು. ನಾನು ಹೋಟೆಲ್ ಹಾಗೂ ಮನೆಯಲ್ಲಿ ಇರ್ತಿದ್ದೆ. ತಡವಾಗಿ ಏಳುತ್ತಿದ್ದೆ. ಸರಿಯಾದ ಸಮಯಕ್ಕೆ ಬರಲು ಆಗ್ತಿರ್ಲಿಲ್ಲ. ಆಗ ಅವರು ಸ್ವಲ್ಪವೂ ಕೋಪಿಸಿಕೊಳ್ಳದೇ ನನಗೆ ಸಹಕರಿಸಿದ್ರು.

ರಿಷಬ್​ ಪಂತ್​​, ಕ್ರಿಕೆಟಿಗ

ಇನ್ನು ಬರೀ ಡಾಕ್ಟರ್ಸ್​ ಅಷ್ಟೆ ಅಲ್ಲ, ಬಿಸಿಸಿಐನ ಸಹಾಯವನ್ನ ರಿಷಬ್ ಪಂತ್ ನೆನೆದಿದ್ದಾರೆ. ಇಂದು ಪಂತ್​​​​​​​ ಭೀಕರ ಅಪಘಾತದಿಂದ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ ಅಂದ್ರೆ ಅದಕ್ಕೆ ಬಿಸಿಸಿಐನ ವಿಶೇಷ ಕಾಳಜಿನೇ ಕಾರಣ. ಮತ್ತೆ ಮೊದಲಿನಂತೆ ಫುಲ್​​ ಫಿಟ್​​​​ & ಫೈನ್​ ಆಗಿರೋ ಪಂತ್​ ಐಪಿಎಲ್​ ರಣರಂಗದಲ್ಲಿ ರಣಧೀರನಾಗಿ ಮೆರೆದು, ಫ್ಯಾನ್ಸ್​ಗೆ ಫುಲ್​​​​​​​ ಎಂಟರ್​ಟೈನ್​ಮೆಂಟ್​​​​ ಟ್ರೀಟ್​​ ಕೊಡುವಂತಾಗಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಆ ನೋವು ಅಷ್ಟಿಷ್ಟಲ್ಲ, ದೊಡ್ಡ ಯಾತನೆ’- IPLಗೆ ರೆಡಿಯಾದ ರಿಷಬ್ ಪಂತ್ ಮನದಾಳದ ಮಾತು

https://newsfirstlive.com/wp-content/uploads/2024/03/RISHABH_PANT.jpg

Load More