/newsfirstlive-kannada/media/post_attachments/wp-content/uploads/2024/06/RISHABH_PANT_ROHIT.jpg)
17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ರ ಹಿಂದೆ ಹಲವರ ಶ್ರಮವಿದೆ. ಆದ್ರೆ, ಮುಖ್ಯವಾಗಿ ಈ ಗೆಲುವಿಗೆ ಕಾರಣವಾಗಿದ್ದು. ಒಂದು ನಾಟಕ. ರಿಷಭ್ ಪಂತ್ ಆಡಿದ ಒಂದು ಡ್ರಾಮಾ ಭಾರತಕ್ಕೆ ಕಪ್ ಗೆಲ್ಲಿಸಿದ ಇಂಟರೆಸ್ಟಿಂಗ್ ಕಥೆ ರೋಚಕವಾಗಿದೆ.
ಜೂನ್ 29, 2024.. ಇಂಡಿಯನ್ಸ್ ಫ್ಯಾನ್ಸ್ ಎಂದೆಂದೂ ಮರೆಯಲಾಗದ ದಿನ. ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಸೌತ್ ಆಫ್ರಿಕಾವನ್ನ ಮಣಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಿತ್ತು.
ಇದನ್ನೂ ಓದಿ: ‘ಡ್ರೆಸ್ಸಿಂಗ್ ರೂಮ್ನಿಂದ ಕ್ರೀಸ್ವರೆಗೆ ಎಮೋಷನ್ಸ್ ಇವೆ’.. ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ KL ರಾಹುಲ್ ಭಾವುಕ ಆದ್ರಾ?
ಒಂದು ಹಂತದಲ್ಲಿ ಸೋಲೇ ಬಿಡುವ ಹಂತದಲ್ಲಿದ್ದ ಭಾರತ ಬಳಿಕ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆದ್ದು ಸಂಭ್ರಮಿಸಿತ್ತು. ಈ ಗೆಲುವಿನ ಹಿಂದೆ ಇಡೀ ತಂಡದ ಶ್ರಮ, ಬೆವರಿನ ಫಲವಿದೆ. ಆಟಗಾರರು, ಸಪೋರ್ಟ್ ಸ್ಟಾಫ್ ಎಲ್ಲರೋ ಒಂದಲ್ಲ ಒಂದು ರೀತಿಯಲ್ಲಿ ಕಪ್ ಗೆಲುವಿಗೆ ಕಾರಣರಾದವರೇ. ಆದ್ರೆ, ಮೈಂಡ್ಗೇಮ್ನಿಂದಲೇ ವಿಶ್ವಕಪ್ ಗೆಲ್ಲಿಸಿದ್ದು ರಿಷಭ್ ಪಂತ್.
ಫೈನಲ್ ಪಂದ್ಯ ರಣರೋಚಕ ಘಟ್ಟ ತಲುಪಿದ್ದ ಸಂದರ್ಭ ಅದು. ಸೌತ್ ಆಫ್ರಿಕಾದ ಗೆಲುವಿಗೆ 30 ಎಸೆತಗಳಲ್ಲಿ 30 ರನ್ ಬೇಕಿತ್ತಷ್ಟೇ. ಆಗ ವಿಕೆಟ್ ಕೀಪರ್ ರಿಷಬ್ ಪಂತ್ ಇಂಜುರಿಗೆ ತುತ್ತಾದ್ರು. ಪರಿಣಾಮ ಕೆಲ ಸಮಯ ಪಂದ್ಯ ನಿಲ್ತು. ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳ ಮೊಮೆಂಟಮ್ ಕೂಡ ಕಟ್ಟಾಯ್ತು. ಬಳಿಕ ಭಾರತ ಗೆದ್ದಿದ್ದು ಇತಿಹಾಸ. ಅಸಲಿಗೆ ಪಂತ್ ಇಂಜುರಿಗೆ ತುತ್ತಾಗಿರಲಿಲ್ಲ. ಗೆಲುವಿನತ್ತ ಮುನ್ನುಗ್ಗುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಲಯವನ್ನು ಹಾಳು ಮಾಡಲು ಮಾಡಿದ ನಾಟಕ ಅದು ಎಂದು ಸ್ವತಃ ಪಂತ್ ಇದೀಗ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ