ಕೆ.ಎಲ್​ ರಾಹುಲ್​​ಗೆ ಮಾಸ್ಟರ್​ ಸ್ಟ್ರೋಕ್​​; ರಿಷಬ್​ ಪಂತ್​​ಗೆ ಒಲಿದ ಜಾಕ್​ಪಾಟ್​​

author-image
Ganesh Nachikethu
Updated On
ಟಿ20 ವಿಶ್ವಕಪ್​ಗೆ ಮುನ್ನವೇ ಕೆ.ಎಲ್​ ರಾಹುಲ್​​, ಪಂತ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು!
  • ಬರೋಬ್ಬರಿ 27 ಕೋಟಿಗೆ ಪಂತ್​ ಖರೀದಿಸಿದ ಲಕ್ನೋ ಟೀಮ್​​
  • ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದ ರಿಷಬ್​ ಪಂತ್​ಗೆ ಭರ್ಜರಿ ಗುಡ್​ನ್ಯೂಸ್​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿನಲ್ಲಿ ಸ್ಟಾರ್​​ ವಿಕೆಟ್​ ಕೀಪರ್​ ಬ್ಯಾಟರ್​​​ ರಿಷಬ್​ ಪಂತ್​ ಅವರನ್ನು ಲಕ್ನೋ ಸೂಪರ್​​ ಜೈಂಟ್ಸ್​ ತಂಡ ಬರೋಬ್ಬರಿ 27 ಕೋಟಿ ನೀಡಿ ಖರೀದಿ ಮಾಡಿದ್ರು. ಈ ಮೂಲಕ 2025ರ ಐಪಿಎಲ್​​ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.

ಪಂತ್​ಗೆ ಲಕ್ನೋ ಕ್ಯಾಪ್ಟನ್ಸಿ

ಲಕ್ನೋ ಸೂಪರ್​ ಜೈಂಟ್ಸ್​ ಮುಂದಿನ ಕ್ಯಾಪ್ಟನ್​ ಯಾರು? ಅನ್ನೋದರ ಕುರಿತು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮಾತಾಡಿದ್ದರು. ನಮ್ಮ ತಂಡದಲ್ಲಿ ಕ್ಯಾಪ್ಟನ್​ ಆಗಬಲ್ಲ ಆಟಗಾರರು ನಾಲ್ವರು ಇದ್ದಾರೆ. ನಿಕೋಲಸ್ ಪೂರನ್, ಮಾರ್ಕ್ರಮ್‌, ಮಿಚೆಲ್ ಮಾರ್ಷ್ ಹಾಗೂ ರಿಷಬ್​​ ಪಂತ್​​ ಇದ್ದಾರೆ. ಆದರೆ, ನಾವು ಪಂತ್​ ಅವರಿಗೆ ಕ್ಯಾಪ್ಟನ್​ ಮಾಡಲು ನಿರ್ಧರಿಸಿದ್ದೇವೆ ಎಂದರು.

ಮೊದಲು ಯಾರು ಕ್ಯಾಪ್ಟನ್​ ಎಂದು ನಿರ್ಧಾರ ಮಾಡಿರಲಿಲ್ಲ. ಇದಕ್ಕಾಗಿ ನಾವು ಸ್ಟ್ರಾಟರ್ಜಿ ಮಾಡಬೇಕಾಯ್ತು. ನಾಲ್ವರು ಆಟಗಾರರಿಗೂ ತಂಡವನ್ನು ಗೆಲ್ಲಿಸೋ ಸಾಮರ್ಥ್ಯ ಇದೆ. ನಮಗೆ ಇಂಡಿಯನ್​ ಫೈಟರ್​ ಬೇಕಿತ್ತು. ಪಂತ್​ ಒಬ್ಬ ಫೈಟರ್​​. ಹೀಗಾಗಿ ಮೆಗಾ ಹರಾಜಿನಲ್ಲಿ ಪಂತ್​​ಗೆ ಮಣೆ ಹಾಕಿದ್ದೇವೆ. ಇವರನ್ನೇ ಈಗ ನಾಯಕನನ್ನಾಗಿ ಘೋಷಣೆ ಮಾಡಿದ್ದೇವೆ ಎಂದರು.

publive-image

ಪಂತ್​ ಕೈಗೆ ಸಿಕ್ಕಿದ್ದೆಷ್ಟು?

ಮೆಗಾ ಆಕ್ಷನ್​ಗೆ ಮುನ್ನ ಪಂತ್​ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಹೊರ ಹಾಕಲಾಗಿತ್ತು. ಈಗ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಪಂತ್​​​ ಅವರನ್ನು ಲಕ್ನೋ ಸೂಪರ್​ ಜೈಂಟ್ಸ್​​ ಖರೀದಿ ಮಾಡಿದೆ. ಇವರು 2025ರ ಮೆಗಾ ಹರಾಜಿನಲ್ಲೇ ಸೇಲಾದ ಅತ್ಯಂತ ದುಬಾರಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ಸೀಸನ್​ನಲ್ಲಿ ಲಕ್ನೋ ತಂಡವನ್ನು ಕೆ.ಎಲ್​ ರಾಹುಲ್​ ಮುನ್ನಡೆಸಿದ್ದರು. ಇವರು ಈ ಬಾರಿ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಸೇರಿದ್ರು. ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದ ಕೆ.ಎಲ್​ ರಾಹುಲ್​​ಗೆ ಡೆಲ್ಲಿ ನಿರಾಸೆ ಮೂಡಿಸಿದೆ. ಅತ್ತ ಕೆ.ಎಲ್​ ರಾಹುಲ್​ ಶಾಕ್​ ಆಗಿದ್ದರೆ, ಇತ್ತ ಪಂತ್​ಗೆ ಜಾಕ್​ಪಾಟ್​ ಸಿಕ್ಕಿದೆ.

ಇದನ್ನೂ ಓದಿ: ರೋಹಿತ್​ ಶರ್ಮಾಗೆ ಬಿಗ್​ ಶಾಕ್​​; ಸ್ಟಾರ್​ ಪ್ಲೇಯರ್​​ ಅಜಿಂಕ್ಯ ರಹಾನೆಗೆ ಕ್ಯಾಪ್ಟನ್ಸಿ ಪಟ್ಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment