/newsfirstlive-kannada/media/post_attachments/wp-content/uploads/2025/06/RISHABH_PANT_KL_RAHUL.jpg)
ಪ್ರತಿಷ್ಠಿತ ಇಂಗ್ಲೆಂಡ್ ಟೆಸ್ಟ್ ಸಿರೀಸ್ ಆರಂಭಕ್ಕೆ ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿಯಿದೆ. ಈ ಟೂರ್ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಉತ್ತಮ ಆಟವಾಡಿದ್ರೆ ಮಾತ್ರ ಉಳಿಗಾಲ. ಇಲ್ಲದಿದ್ರೆ ಪಂತ್ ಭವಿಷ್ಯ ಅತಂತ್ರಕ್ಕೆ ಸಿಲುಕಲಿದೆ. ಟೀಮ್ ಇಂಡಿಯಾ ಗೆಲುವಿಗೂ ಅಷ್ಟೇ, ಪಂತ್ ಆಟವೇ ನಿರ್ಣಾಯಕ.
ಇಂಡೋ- ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಮದಗಜಗಳ ನಡುವಿನ ಕಾಳಗ ಇದೇ ಜೂನ್ 20ರಿಂದ ಆರಂಭವಾಗಲಿದ್ದು, ಈ ಪ್ರತಿಷ್ಠೆಯ ಸರಣಿ ಯಾರ ವಶವಾಗುತ್ತೆ ಎಂಬ ಕ್ಯೂರಿಯಾಸಿಟಿ ವಿಶ್ವ ಕ್ರಿಕೆಟ್ನಲ್ಲಿ ಮನೆ ಮಾಡಿದೆ. ಈ ಪ್ರತಿಷ್ಠಿತ ಸರಣಿ ಟೀಮ್ ಇಂಡಿಯಾ ಟೆಸ್ಟ್ ತಂಡದ ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಕಣ.
ಇಂಗ್ಲೆಂಡ್ನಲ್ಲಿ ವೈಸ್ ಕ್ಯಾಪ್ಟನ್ ಮೇಲಿದೆ ಎಲ್ಲರ ಕಣ್ಣು.!
ಅಗ್ರೆಸಿವ್ ಮತ್ತು ಡಾಮಿನೇಟಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಎಗರಿ ಬೀಳುತ್ತಿದ್ದ ಪಂತ್, ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಫುಲ್ ಸೈಲೆಂಟ್ ಆಗಿದ್ದರು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಗೇಮ್ ಚೇಂಜರ್ ಆಗ್ತಾರೆ ಎಂದು ಅನಿಸಿಕೊಂಡಿದ್ದ ಪಂತ್, ಟೂರ್ನಿಯಲ್ಲಿ ಫುಲ್ ಗಪ್ಚುಪ್ ಆಗಿದ್ದರು.
ಆಸಿಸ್ ಟೆಸ್ಟ್ ಸರಣಿಯಲ್ಲಿ ಪಂತ್
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 5 ಪಂದ್ಯಗಳ 9 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಪಂತ್ ಕೇವಲ 28.33 ಸರಾಸರಿಯಲ್ಲಿ 255 ರನ್ಗಳಿಸಿದ್ದರು. ಕೇವಲ 1 ಅರ್ಧಶತಕ ಸಿಡಿಸಿದ್ದರು.
ಸೀಸನ್ 18ರ ಐಪಿಎಲ್ ಟೂರ್ನಿಯಲ್ಲೂ ಅಷ್ಟೇ ಪಂತ್ ಅಟ್ಟರ್ಫ್ಲಾಪ್ ಪರ್ಫಾಮೆನ್ಸ್ ನೀಡಿದ್ದಾರೆ. ಕೇವಲ 24.45ರ ಸರಾಸರಿಯಲ್ಲಿ ರನ್ಗಳಿಸಿ ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿದ್ದಾರೆ. ಸತತವಾಗಿ ರನ್ ಬರ ಎದುರಿಸಿದುವ ಪಂತ್ ಸದ್ಯ ಅಗ್ನಿಪರೀಕ್ಷೆಯ ಕಣದಲ್ಲಿದ್ದಾರೆ.
ಕಮ್ಬ್ಯಾಕ್ ಮಾಡಬೇಕಿದೆ ರಿಷಭ್ ಪಂತ್..!
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಆಟ ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ. ಆ ವೈಫಲ್ಯದ ಹೊರತಾಗಿಯೂ ಪಂತ್ಗೀಗ ವೈಸ್ ಕ್ಯಾಪ್ಟನ್ ಆಗಿ ಪ್ರಮೋಷನ್ ಸಿಕ್ಕಿದೆ. ಹೀಗಾಗಿ ಇಂಗ್ಲೆಂಡ್ನಲ್ಲಿ ಪರ್ಫಾಮ್ ಮಾಡಿ ಸಾಮರ್ಥ್ಯ ನಿರೂಪಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇನ್ನೊಂದೆಡೆ ಪಂತ್ ಆಟ ಟೀಮ್ ಇಂಡಿಯಾ ಪಾಲಿಗೂ ಮೋಸ್ಟ್ ಕ್ರೂಶಿಯಲ್.
ಯಾಕಂದ್ರೆ, ಇಂಗ್ಲೆಂಡ್ನ ಚಾಲೆಂಜಿಂಗ್ ಕಂಡೀಷನ್ಸ್ನಲ್ಲಿ ಪಂತ್ ಒಬ್ಬನೇ ಟೀಮ್ ಇಂಡಿಯಾದ ಪಾಲಿನ ಬಿಗ್ ಗೇಮ್ ಚೇಂಜರ್ ಆಗಬಲ್ಲರು. ಸದ್ಯ ತಂಡದಲ್ಲಿ ಇರುವ ಅನುಭವಿ ಆಟಗಾರರ ಪೈಕಿ ಕೆ.ಎಲ್.ರಾಹುಲ್, ಜಡೇಜಾ ಬಿಟ್ರೆ, ಮತ್ಯಾವ ಆಟಗಾರನೂ ಇಂಗ್ಲೆಂಡ್ನಲ್ಲಿ ಪಂತ್ಗಳಿಸಿದಷ್ಟು ರನ್ ಗಳಿಸಿಲ್ಲ. ಇದೇ ಇಂಗ್ಲೆಂಡ್ನ ದಿ ಓವಲ್ ಹಾಗೂ ಬರ್ಮಿಂಗ್ಹ್ಯಾಮ್ನಲ್ಲಿ ಸೆನ್ಸೇಷನ್ಲ್ ಇನ್ನಿಂಗ್ಸ್ ಕಟ್ಟಿದ ಇತಿಹಾಸ ಪಂತ್ದ್ದು.
ಇದನ್ನೂ ಓದಿ: 500 ರೂಪಾಯಿ ನೋಟು ರದ್ದುಗೊಳಿಸಬೇಕು.. ಕಾರಣ ಕೊಟ್ಟ ಸಿಎಂ ಚಂದ್ರಬಾಬು ನಾಯ್ಡು!
2021ರಿಂದ ಇಂಗ್ಲೆಂಡ್ನಲ್ಲಿ ರಿಷಭ್ ಪಂತ್
2021ರಿಂದ ಇಂಗ್ಲೆಂಡ್ನಲ್ಲಿ 11 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರಿಷಭ್ ಪಂತ್, 394 ರನ್ ಗಳಿಸಿದ್ದಾರೆ. 35.82 ಬ್ಯಾಟಿಂಗ್ ಅವರೇಜ್ ಹೊಂದಿರುವ ಪಂತ್, 1 ಶತಕ, 2 ಅರ್ಧಶತಕ ದಾಖಲಿಸಿದ್ದಾರೆ.
ರಿಷಭ್ ಪಂತ್ ಪಾಲಿಗೆ ಇದು ಸ್ಪೆಷಲ್ ಸಿರೀಸ್..!
ಆಗಸ್ಟ್ 18, 2018.. ರಿಷಭ್ ಪಂತ್ ಟೆಸ್ಟ್ ಫಾರ್ಮೆಟ್ಗೆ ಡೆಬ್ಯೂ ಮಾಡಿದ ದಿನ. ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ನಲ್ಲಿ ಆಟಗಾರನಾಗಿ ಡೆಬ್ಯು ಮಾಡಿದ್ದ ಪಂತ್, ಈಗ ಇಂಗ್ಲೆಂಡ್ ಸರಣಿಯಲ್ಲೇ ಉಪ ನಾಯಕನಾಗಿ ಆಡಲಿದ್ದಾರೆ. ಹೀಗಾಗಿ ರಿಷಭ್ ಪಂತ್ ಪಾಲಿಗೆ ಇಂಗ್ಲೆಂಡ್ ಸರಣಿ ಸ್ಪೆಷಲ್ ಸಿರೀಸ್. ಇಷ್ಟು ದಿನ ಸೈಲೆಂಟ್ ಆಗಿದ್ದ ರಿಷಭ್ ಪಂತ್, ಇಂಗ್ಲೆಂಡ್ ಪ್ರವಾಸದಲ್ಲಿ ವೈಲೆಂಟ್ ಆಗಬೇಕಿದೆ. ಇಲ್ಲದಿದ್ರೆ, ಪಂತ್ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ