ಕ್ಯಾಪ್ಟನ್ ಆದ ಮೇಲೆ ರಿಷಭ್ ಪಂತ್ ಬ್ಯಾಟಿಂಗ್ ಖದರ್ ಮಾಯ.. ಫ್ರಾಂಚೈಸಿಯಲ್ಲಿ ಏನಾಗ್ತಿದೆ?

author-image
Bheemappa
Updated On
ಪಾಂಡ್ಯಗೆ ಅದೃಷ್ಟ ಕೈ ಹಿಡಿಯಿತಾ..? LSG ವಿರುದ್ಧ ಗೆಲ್ತಿದ್ದಂತೆ ಪಾಯಿಂಟ್​ ಟೇಬಲ್​ನಲ್ಲಿ ಮುಂಬೈ ಭಾರೀ ಜಿಗಿತ
Advertisment
  • 10 ಬಾಲ್​ಗಳನ್ನು ಆಡುವಷ್ಟರಲ್ಲಿ ಪೆವಿಲಿಯನ್ ಸೇರುತ್ತಿರೋ ಪಂತ್
  • ಈ ಐಪಿಎಲ್ ಸೀಸನ್​ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್​ಗೆ ಏನಾಗಿದೆ?
  • ‘ಡೇರ್ ​​ಡೆವಿಲ್’​ ರಿಷಭ್​ ಪಂತ್ ಹಳೇ ಖದರ್​, ಅಗ್ರೆಸ್ಸಿವ್​ ಆಟ ಇಲ್ಲ

ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ 18ರಲ್ಲಿ ರನ್​​ ಹೊಳೆ ಜೋರಾಗಿ ಹರೀತಾ ಇದೆ. ಬ್ಯಾಟ್ಸ್​ಮನ್​ಗಳ ಆರ್ಭಟದ ಮುಂದೆ ಬೌಲರ್​ಗಳು ಕಕ್ಕಾಬಿಕ್ಕಿಯಾಗಿ ಹೋಗಿದ್ದಾರೆ. ಬೌಂಡರಿ-ಸಿಕ್ಸರ್​​ಗಳ ಮೇಳ ಫ್ಯಾನ್ಸ್​​ಗೆ ಸಖತ್​ ಎಂಟರ್​​​ಟೈನ್​ಮೆಂಟ್​ ನೀಡ್ತಿದೆ. ಒಂದೆಡೆ ಅಬ್ಬರದ ಆಟ ನಡೀತಿದ್ರೆ, ಇನ್ನೊಂದೆಡೆ ಡೇರ್​ಡೆವಿಲ್​ ರಿಷಭ್​ ಪಂತ್​ ಸೈಲೆಂಟ್​ ಆಗಿದ್ದಾರೆ. ತನ್ನ ಅಸಲಿ ಆಟವನ್ನೇ ಮರೆತು ಬಿಟ್ಟಿದ್ದಾರೆ.

ಎಲ್ಲಾ ಒಕೆ.. ಐಪಿಎಲ್​​​ ಆರಂಭಕ್ಕೂ ಮುನ್ನ ಕ್ರಿಕೆಟ್​ ವಲಯ ಏನೆಲ್ಲಾ ನಿರೀಕ್ಷೆ ಮಾಡಿತ್ತೋ ಅದೆಲ್ಲವೂ ಬಹುತೇಕ ಅಂದುಕೊಂಡಂತೆ ಆಗ್ತಿದೆ. ಆದ್ರೆ, ಒಂದನ್ನ ಬಿಟ್ಟು, ಈ ಸೀಸನ್​ ಐಪಿಎಲ್​ ಆರಂಭಕ್ಕೂ ಲಕ್ನೋ ಸೂಪರ್​ ಜೈಂಟ್ಸ್​​ ಕ್ಯಾಪ್ಟನ್​​ ರಿಷಭ್​ ಪಂತ್​ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಪಂತ್​ ಫೆಂಟಾಸ್ಟಿಕ್​ ಬ್ಯಾಟಿಂಗ್​ ಕಣ್ತುಂಬಿಕೊಳ್ಳೋ ಕಾತುರತೆ ಅಭಿಮಾನಿಗಳಲ್ಲಿತ್ತು. ಆದ್ರೆ, ಆಗಿರೋದು ನಿರಾಸೆ..

publive-image

ಡೆಲ್ಲಿ ಬ್ಯಾಟಲ್ ವಿರುದ್ಧ ಪಂತ್​​​​​ ಡಕೌಟ್

ಲಕ್ನೋ ತಂಡ ಸೀಸನ್​​ನ ಮೊದಲ ಪಂದ್ಯದಲ್ಲೇ ಡೆಲ್ಲಿ ಸವಾಲು ಎದುರಿಸಿತು. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್​ ಅಕೌಂಟ್​ ಓಪನ್​ ಮಾಡದೇ ನಿರಾಸೆ ಮೂಡಿಸಿದ್ರು. ಇನ್ನು, ಹೈದ್ರಾಬಾದ್​ ಎದುರಿನ 2ನೇ ಪಂದ್ಯದಲ್ಲೂ ಪಂತ್​ ಫ್ಲಾಪ್​ ಆದ್ರು. ಜಸ್ಟ್ 15 ರನ್​ಗೆ ಆಟ ಮುಗಿಸಿದರು.

ಫಸ್ಟ್​​ ಮ್ಯಾಚ್​ನಲ್ಲಿ 6 ಎಸೆತ​ ಎದುರಿಸಿ ಡಕೌಟ್​ ಆದ ಪಂತ್​​ಗೆ ಹೈದ್ರಾಬಾದ್​ ಎದುರು ಉತ್ತಮ ಅಟವಾಡೋ ಅವಕಾಶ ಇತ್ತು. ಮಿಚೆಲ್​ ಮಾರ್ಷ್​-ನಿಕೋಲಸ್​ ಪೂರನ್​ ತಂಡವನ್ನ ಅದಾಗಲೇ ಅರ್ಧ ಗೆಲ್ಲಿಸಿದ್ದರು. ಆಗ ಕಣಕ್ಕಿಳಿದ ಪಂತ್​ ಆರಾಮವಾಗಿ ಆಡಿದ್ರು ತಂಡವನ್ನ ಗೆಲ್ಲಿಸಬಹುದಿತ್ತು. ಆದ್ರೆ, ಪಂತ್​ ಮತ್ತೆ ಫ್ಲಾಪ್​ ಆದ್ರು.

ಮಾನಸಿಕ ಒತ್ತಡ.. ಪಂತ್​ ಖದರ್​ ಮಾಯ.!

ಈ 2 ಇನ್ನಿಂಗ್ಸ್​​ಗಳ​ ವೈಫಲ್ಯ ಅಭಿಮಾನಿಗಳಲ್ಲಿ ತೀವ್ರ ನಿರಾಸೆಗೆ ದೂಡಿದೆ. ಯಾಕಂದ್ರೆ, ಈ ಹಿಂದಿದ್ದ ರಿಷಭ್​ ಪಂತ್​ ಈಗ ಕಾಣಿಸ್ತಿಲ್ಲ. ನಿಜ ಹೇಳಬೇಕಂದ್ರೆ ಪಂತ್​ನ ಯಾವತ್ತೂ ಹೀಗೆ ನೋಡೇ ಇರಲಿಲ್ಲ. ಹಿಂದಿದ್ದ ಆ ಅಗ್ರೆಸ್ಸಿವ್​ ಇಂಟೆಂಟ್​, ಆ ಫಿಯರ್​​ಲೆಸ್​ ಆ್ಯಟಿಟ್ಯೂಡ್​, ಆ ಕಾನ್ಫಿಡೆನ್ಸ್​ ಎಲ್ಲವೂ ಮಾಯವಾಗಿದೆ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ.? MENTAL PRESSURE..!

27 ಕೋಟಿ ಹಣ.. ನ್ಯಾಯ ಒದಗಿಸೋ ಸವಾಲ್​..!

ಈ ಬಾರಿಯ ಮೆಗಾ ಆಕ್ಷನ್​ನಲ್ಲಿ ಪಂತ್​ ಪಡೆದುಕೊಂಡಿದ್ದು ಬರೋಬ್ಬರಿ 27 ಕೋಟಿ ಹಣ. ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಪ್ಲೇಯರ್​​ ರಿಷಭ್​ ಪಂತ್​. ಇಷ್ಟು ಬಿಗ್​ ಅಮೌಂಟ್​​ಗೆ ಸೇಲ್​ ಆದ ಪಂತ್ ಇದೀಗ ಆ ಹಣಕ್ಕೆ ಪರ್ಫಾಮೆನ್ಸ್​ ಮೂಲಕ ನ್ಯಾಯ ಒದಗಿಸಬೇಕಿದೆ. ಮೌಲ್ಯಕ್ಕೆ ತಕ್ಕಂತೆ ಪರ್ಫಾಮ್​​ ಮಾಡಬೇಕಿರೋದೆ ಪಂತ್​​ನ ಒತ್ತಡದಲ್ಲಿ ಸಿಲುಕಿಸಿದೆ.

ಓನರ್​​ ನಿರೀಕ್ಷೆಯೇ ಪಂತ್​ಗೆ ಭಾರ.. ಭಾರ..!

ಫ್ಯಾನ್ಸ್​ ನಿರೀಕ್ಷೆ ಬಿಡಿ.. ಈ ಲಕ್ನೋ ಸೂಪರ್​ ಜೈಂಟ್ಸ್​​ ಓನರ್​ ನಿರೀಕ್ಷೆ ಇದ್ಯಲ್ಲ ಅದು ನೆಕ್ಸ್ಟ್​ ಲೆವೆಲ್. ತನ್ನ ಎಕ್ಸ್​ಪೆಕ್ಟೇಷನ್​​ ರೀಚ್​ ಆಗಲಿಲ್ಲ ಅನ್ನೋ ಕಾರಣಕ್ಕೆ ಜಗಮೆಚ್ಚಿದ ನಾಯಕ ಧೋನಿಯನ್ನೇ ರಾತ್ರೋ ರಾತ್ರಿ ಗದ್ದುಗೆಯಿಂದ ಕೆಳಗಿಳಿಸಿದವರು ಈ ಸಂಜೀವ್​ ಗೋಯೆಂಕಾ. ಕಳೆದ ಸೀಸನ್​ನಲ್ಲಿ ನಮ್ಮ ಕನ್ನಡಿಗ ರಾಹುಲ್​ಗೂ ಗ್ರೌಂಡ್​ನಲ್ಲೇ ಅಪಮಾನ ಮಾಡಿದ್ರು. ಈಗ 27 ಕೋಟಿ ಸುರಿದು ಪಂತ್​ನ ನಾಯಕನನ್ನ ಮಾಡಿದ್ದಾರೆ ಅಂದು ಮೇಲೆ ಆ ನಿರೀಕ್ಷೆ ಎಷ್ಟಿರಬೇಕು ಅಂತಾ ನೀವೇ ಅಂದಾಜು ಮಾಡಿ. ಆ ನಿರೀಕ್ಷೆಯನ್ನ ತಲುಪೋದೆ ಸವಾಲಾಗಿದೆ.

ಇದನ್ನೂ ಓದಿ:ಟ್ರಾಫಿಕ್​ ಸಿಗ್ನಲ್​ನಲ್ಲಿ ಹೆಂಡತಿ ಮಾಡಿದ ರೀಲ್ಸ್​ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!

publive-image

ಸಂಕಷ್ಟದಲ್ಲಿದೆ ವೈಟ್​ಬಾಲ್​ ಕರಿಯರ್.!

ಟೀಮ್​​ ಇಂಡಿಯಾದ 3 ಫಾರ್ಮೆಟ್​ ಪ್ಲೇಯರ್​ ಆಗಿದ್ದ ಪಂತ್​, ವೈಟ್​ಬಾಲ್​ ಕರಿಯರ್​ ಸದ್ಯ ಸಂಕಷ್ಟದಲ್ಲಿದೆ. ಆ್ಯಕ್ಸಿಡೆಂಟ್​​ನಿಂದ ಚೇತರಿಸಿಕೊಂಡು ಫಿಟ್​ ಆಗಿ ಕಮ್​ಬ್ಯಾಕ್​ ಮಾಡಿದ ಬಳಿಕ ಪಂತ್​ ಹಳೆ ಖದರ್ ಮಾಯವಾಗಿದೆ. ಏಕದಿನ ಫಾರ್ಮೆಟ್​ನಲ್ಲಿ ಪಂತ್​ ಬೆಂಚ್​​ಗೆ ಸೀಮಿತವಾಗಿದ್ದಾರೆ. ಟಿ20 ಫಾರ್ಮೆಟ್​ನಲ್ಲೂ ಸ್ಥಾನಕ್ಕೆ ಕುತ್ತು ಬಂದಿದೆ. ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಅಬ್ಬರ ಮುಂದುವರೆಸಿದ್ರೆ, ಪಂತ್​ಗೆ ಗೇಟ್​ಪಾಸ್​ ಪಕ್ಕಾ. ವೈಟ್​ಬಾಲ್​ ಕರಿಯರ್​ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಪರ್ಫಾಮ್​ ಮಾಡಲೇಬೇಕಾದ ಒತ್ತಡವಿದೆ. ಆ ಒತ್ತಡ ಆಟಕ್ಕೆ ಅಡ್ಡಿಯಾಗ್ತಿದೆ.

ಒತ್ತಡಕ್ಕೆ ಸಿಲುಕಿರೋ ಪಂತ್​ ತನ್ನ ರಿಯಲ್​ ಖದರ್​ ಅನ್ನೇ ಮರೆತು ಬಿಟ್ಟಿದ್ದಾರೆ. ಸದ್ಯ 2 ಪಂದ್ಯಗಳಲ್ಲಿ ಫ್ಲಾಫ್​ ಆಗಿದ್ದರು ಕಮ್​ಬ್ಯಾಕ್​ ಮಾಡೋಕೆ ಇನ್ನೂ 12 ಪಂದ್ಯಗಳಲ್ಲಿ ಅವಕಾಶವಿದೆ. ಸಾವನ್ನ ಗೆದ್ದು ಮಿರಾಕಲ್​ ರೀತಿ ಕ್ರಿಕೆಟ್​ ಫೀಲ್ಡ್​ಗೆ ವಾಪಾಸ್ಸಾದ ಬಂದ ವೀರ ಪಂತ್​ಗೆ​​ ಒತ್ತಡವನ್ನ ಹಿಮ್ಮೆಟ್ಟಿಸೋದು ದೊಡ್ಡ ವಿಚಾರವೇನಲ್ಲ. ಪಂತ್​ ತನ್ನ ಅಸಲಿ ಸಾಮರ್ಥ್ಯವನ್ನ ನೆನೆಪು ಮಾಡಿಕೊಳ್ಳಬೇಕಿದೆ ಅಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment