newsfirstkannada.com

ಡೆಲ್ಲಿ ಡೇರ್​ ಡೆವಿಲ್ ಬ್ಯಾಟರ್​ ಆಟಕ್ಕೆ ಸಲಾಂ.. ರಿಷಬ್ ಪಂತ್ ಬಾರಿಸಿದ ಸಿಕ್ಸರ್​ಗೆ ಕ್ರಿಕೆಟ್ ಫ್ಯಾನ್ಸ್​ ಫಿದಾ

Share :

Published June 6, 2024 at 1:17pm

  ವಿಕೆಟ್ ಕೀಪರ್​ ಮೇಲೆ ಸಿಕ್ಸ್​ ಬಾರಿಸಿ ಭಾರತವನ್ನ ಗೆಲ್ಲಿಸಿದ ರಿಷಬ್

  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ

  ಐರ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ಸಖತ್ ಸಿಕ್ಸ್ ಬಾರಿಸಿದ ಪಂತ್

ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರೋಹಿತ್ ಬಾಯ್ಸ್​ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸದ್ಯ ಇಡೀ ತಂಡದ ಆಕರ್ಷಣೆಯಾಗಿ ಕಂಡು ಬಂದಿರುವುದು ಡೆಲ್ಲಿಯ ಡೇರ್​ ಡೆವಿಲ್ ಪ್ಲೇಯರ್​ ರಿಷಬ್​ ಪಂತ್ ಬ್ಯಾಟಿಂಗ್ ವೈಖರಿ.

ಐರ್ಲೆಂಡ್​​ ವಿರುದ್ಧ ಸೆಕೆಂಡ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 22 ರನ್​ಗೆ ವಿರಾಟ್​ ಕೊಹ್ಲಿಯ ವಿಕೆಟ್​ ಕಳೆದು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್​​ಗೆ ಮುಂದಾದರು. ಐರ್ಲೆಂಡ್​ನ ಬೌಲರ್ ಮೆಕಾರ್ಥಿ ಅವರ 13ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್​ ಕೀಪರ್ ಮೇಲೆ ರಿಷಬ್ ಪಂತ್ ಬಾರಿಸಿದ ಸಿಕ್ಸ್​ ಎಲ್ಲರ ಮನ ಗೆದ್ದಿದೆ. ಕಾಮೆಂಟ್ರಿ ಮಾಡುತ್ತಿದ್ದ ರಿಕಿ ಪಾಟಿಂಗ್, ಶ್ರೀನಾಥ್ ಅವರು ವಾಟೇ ಫಿನೀಶಿಂಗ್ ಎಂದು ಕೊಂಡಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿಕ್ಸರ್ ಕುರಿತೇ ಗುಣಗಾನ ಮಾಡಲಾಗುತ್ತಿದೆ.

ಇದನ್ನೂ ಓದಿ: ಸ್ನೇಹಿತನ ಬರ್ತ್ ​​​ಡೇ ಪಾರ್ಟಿಯಲ್ಲಿ ಹರಿಯಿತು ನೆತ್ತರು; ಗೆಳೆಯರಿಂದಲೇ ಯುವಕನ ಬರ್ಬರ ಹತ್ಯೆ; ಕಾರಣವೇನು?

ಟೀಮ್ ಇಂಡಿಯಾಕ್ಕೆ ಗೆಲ್ಲಲು 47 ಎಸೆತದಲ್ಲಿ 6 ರನ್​ ಬೇಕಿತ್ತು. ಈ ವೇಳೆ ಕ್ರೀಸ್​ನಲ್ಲಿ ರಿಷಬ್ ಪಂತ್ 30 ರನ್​ಗಳಿಸಿ ಆಡುತ್ತಿದ್ದರು. ಶಿವಂ ದುಬೆ ಆಗ ತಾನೆ ಬಂದಿದ್ದರು. ಮೆಕಾರ್ಥಿ ಅವರ 13ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್​ ಕೀಪರ್ ಮೇಲೆ ರಿವರ್ಸ್​​ ಸ್ವಿಪ್​ನಲ್ಲಿ ರಿಷಬ್ ಪಂತ್ ಹೊಡೆದರು. ಬಾಲ್ ನೇರವಾಗಿ ಬೌಂಡರಿ ಗೆರೆ ದಾಟಿ ಬಿತ್ತು. ಆಗ ಬೌಲರ್ ಏನು ಶಾಟ್ ಇದು ಎನ್ನುವಂತೆ ಆಶ್ಚರ್ಯವಾಗಿ ನಿಂತು ನೋಡಿದ್ದಾರೆ. ಪಂತ್ ಆಕರ್ಷಕ ಸಿಕ್ಸ್​ನೊಂದಿಗೆ ಭಾರತವನ್ನು ಗೆಲ್ಲಿಸಿ ಸಂಭ್ರಮಿಸಿದರು. ಐರ್ಲೆಂಡ್​ ನೀಡಿದ್ದ 96 ರನ್​ಗಳ ಸಾಧರಣ ಗುರಿಯನ್ನು ಭಾರತ 2 ವಿಕೆಟ್​ ಕಳೆದುಕೊಂಡು ಟಾರ್ಗೆಟ್ ಮುಟ್ಟಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೆಲ್ಲಿ ಡೇರ್​ ಡೆವಿಲ್ ಬ್ಯಾಟರ್​ ಆಟಕ್ಕೆ ಸಲಾಂ.. ರಿಷಬ್ ಪಂತ್ ಬಾರಿಸಿದ ಸಿಕ್ಸರ್​ಗೆ ಕ್ರಿಕೆಟ್ ಫ್ಯಾನ್ಸ್​ ಫಿದಾ

https://newsfirstlive.com/wp-content/uploads/2024/06/RISHAB_PANT.jpg

Load More