/newsfirstlive-kannada/media/post_attachments/wp-content/uploads/2024/08/PANT.jpg)
ಸದ್ಯ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳು ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್​ ಪ್ರವೇಶ ಮಾಡಿದ್ದು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಟಿಯಾದ ಯಂಗ್ ಪ್ಲೇಯರ್ ರಿಷಬ್ ಪಂತ್ ಮಾಡಿರುವ ಆ ಒಂದು ಎಕ್ಸ್​ ಪೋಸ್ಟ್ ಸಾಕಷ್ಟು ಚರ್ಚೆ ಸೃಷ್ಟಿಮಾಡಿದೆ.
ಇದನ್ನೂ ಓದಿ:ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್​ ಶೆಟ್ಟಿ ಭೇಟಿಯಾಗಿದ್ದೇಕೆ?
ಪ್ಯಾರಿಸ್​ ಒಲಿಂಪಿಕ್ಸ್​ನ ಜಾವೆಲಿನ್ ಸ್ಪರ್ಧೆಯಲ್ಲಿ ಒಂದೇ ಒಂದು ಎಸೆತದಿಂದ ನೀರಜ್ ಚೋಪ್ರಾ ನೇರವಾಗಿ ಫೈನಲ್​ಗೆ ಎಂಟ್ರಿಯಾಗಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಬೆನ್ನಲ್ಲೇ ಭಾರತದ ಕ್ರಿಕೆಟ್​ನ ಯುವ ಆಟಗಾರ ರಿಷಬ್​ ಪಂತ್, ಒಂದು ವೇಳೆ ನಾಳೆ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ ಅದೃಷ್ಟಶಾಲಿ ಲಕ್ಕಿ ವಿನ್ನರ್​​ಗೆ 1 ಲಕ್ಷ ರೂಪಾಯಿ ಕೊಡುವುದಾಗಿ ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೇ 10 ಜನರಿಗೆ ಫ್ಲೈಟ್​ ಟಿಕೆಟ್​ ಕೊಡುವುದಾಗಿಯೂ ಬರೆದುಕೊಂಡಿದ್ದಾರೆ. ಆದರೆ ಇದು ಫೇಕ್ ಎನ್ನಲಾಗುತ್ತಿದೆ. ಏಕೆಂದರೆ ರಿಷಬ್ ಪಂತ್ ಅವರ ಎಕ್ಸ್​ ಖಾತೆಯನ್ನು ಹ್ಯಾಕ್ ಮಾಡಿ ಈ ರೀತಿ ಫೇಕ್​ ಪೋಸ್ಟ್ ಶೇರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ.. 700ಕ್ಕೂ ಹೆಚ್ಚು ಮನೆಗಳು ಜಲಾವೃತ, 8 ಗ್ರಾಮಗಳಲ್ಲಿ ಆತಂಕ
If Neeraj chopra win a gold medal tomorrow. I will pay 100089 Rupees to lucky winner who likes the tweet and comment most . And for the rest top 10 people trying to get the atttention will get flight tickets . Let’s get support from india and outside the world for my brother
— Rishabh Pant (@RishabhPant17)
If Neeraj chopra win a gold medal tomorrow. I will pay 100089 Rupees to lucky winner who likes the tweet and comment most . And for the rest top 10 people trying to get the atttention will get flight tickets . Let’s get support from india and outside the world for my brother
— Rishabh Pant (@RishabhPant17) August 7, 2024
">August 7, 2024
ರಿಷಬ್ ಪಂತ್ ಪೋಸ್ಟ್​ನಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ನಾಳೆ ಚಿನ್ನದ ಪದಕ ಗೆದ್ದರೆ, ನನ್ನ ಎಕ್ಸ್​ ಅಕೌಂಟ್​ನ ಪೋಸ್ಟ್​ಗೆ ಯಾರು ಹೆಚ್ಚು ಲೈಕ್​, ಕಮೆಂಟ್ ಮಾಡ್ತಾರೋ ಅಂತಹ ಅದೃಷ್ಟಶಾಲಿ ವಿನ್ನರ್​ಗೆ 1,00,089 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು. ಪ್ರಮುಖ 10 ಜನರಿಗೆ ವಿಮಾನ ಟಿಕೆಟ್‌ಗಳನ್ನು ನೀಡಲಾಗುವುದು. ದೇಶ ಹಾಗೂ ವಿಶ್ವದ್ಯಾಂತ ಇರುವ ಎಲ್ಲರೂ ನನ್ನ ಸಹೋದರ (ನೀರಜ್ ಚೋಪ್ರಾ)ನಿಗೆ ಸಪೋರ್ಟ್​ ಮಾಡಿ ಎಂದು ಟ್ವೀಟ್ ಮಾಡಲಾಗಿದೆ. ಇದು ಸತ್ಯನೋ ಇಲ್ಲ, ಪಂತ್ ಅವರ ಎಕ್ಸ್ ಅಕೌಂಟ್ ಹ್ಯಾಕ್ ಮಾಡಲಾಗಿದೆಯೋ ಎಂಬುವುದು ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ