ಕಾಂತಾರ -2 ಬಗ್ಗೆ ಇಲ್ಲಿದೆ ಅಪ್ಡೇಟ್ಸ್
ಪ್ರೀಕ್ವೆಲ್ ಶೂಟಿಂಗ್ ಯಾವಾಗ?
ಶೂಟಿಂಗ್ ನಡೆಯೋದು ಎಲ್ಲಿ?
ಕಾಂತಾರ ಆದ್ಮೇಲೆ ಕಾಂತಾರ 2 ಯಾವಾಗ ಶುರುವಾಗುತ್ತೆ ಅಂತ ಕನ್ನಡ ಕಲಾಭಿಮಾನಿಗಳು ಮಾತ್ರವಲ್ಲ ಪ್ಯಾನ್ ಇಂಡಿಯಾ ಪ್ರೇಕ್ಷಕ ಪ್ರಭುಗಳು ಕೂಡ ಎದುರು ನೋಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತೆರೆಕಂಡಿದ್ದ ಕಾಂತಾರ ಭಾರತೀಯ ಸಿನಿಮಾ ಪ್ರಪಂಚದಲ್ಲಿ ದೊಡ್ಡ ಪವಾಡನೇ ಸೃಷ್ಟಿಸಿದ್ದನ್ನ ಎಲ್ಲರೂ ನೋಡಿದ್ದೇವೆ. ಭಾಷೆ, ಸಂಸ್ಕೃತಿಯ ಗಡಿದಾಟಿ ಕಾಂತಾರ ಸಿನಿಮಾ ಅತಿ ದೊಡ್ಡ ಸಕ್ಸಸ್ ಕಂಡಿದ್ದು ನಿಜಕ್ಕೂ ಅಚ್ಚರಿ ಅಂತಾನೇ ಹೇಳ್ಬಹುದು.
ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕಾಂತಾರ ಕಲರವ ಸೃಷ್ಟಸಿತ್ತು. ವಿಶ್ವದ ಪ್ರಧಾನಸಂಸ್ಥೆಯಾಗಿರುವ ವಿಶ್ವಸಂಸ್ಥೆಯ ಸದಸ್ಯರಿಗಾಗಿ ಸ್ಪೆಷಲ್ ಸ್ಕ್ರೀನಿಂಗ್ ಕಂಡಿದ್ದು ಕಾಂತಾರ ಅತಿ ದೊಡ್ಡ ಗೆಲುವು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಳೈಸಿದ ಕಾಂತಾರ ಸಿನಿಮಾದ ಪ್ರಿಕ್ವೆಲ್ ಮೇಲೆ ಈಗ ಸಿನಿ ಇಂಡಸ್ಟ್ರಿಯ ಕಣ್ಣು ಬಿದ್ದಿದೆ. ಕಾಂತಾರ ಪ್ರಿಕ್ವೆಲ್ ಯಾವಾಗ ಶುರುವಾಗುತ್ತೆ? ಯಾವಾಗ ಶೂಟಿಂಗ್ ಶುರು ಮಾಡ್ತಾರೆ? ಈ ಸಲ ಯಾವೆಲ್ಲ ಕಲಾವಿದರು ಭಾಗಿಯಾಗ್ತಾರೆ ಅನ್ನೋ ಕುತೂಹಲ ಕಾಡೋಕೆ ಶುರುವಾಗಿದೆ.
ಕಾಂತಾರ ಪ್ರೀಕ್ವೆಲ್ ಶೂಟಿಂಗ್ಗೂ ಅಖಾಡ ಸಜ್ಜು!
ಕಾಂತಾರ ಸಿನಿಮಾದ ಹಂಡ್ರೆಡ್ ಪಂಕ್ಷನ್ನಲ್ಲಿ ಖುದ್ದು ರಿಷಬ್ ಶೆಟ್ಟಿ ಇದು ಸೀಕ್ವೆಲ್ ಅಲ್ಲ, ಪ್ರಿಕ್ವೆಲ್ ಅಂತ ಘೋಷಿಸಿದರು. ನೀವು ನೋಡಿದ್ದು ಕಾಂತಾರ ಪಾರ್ಟ್ 2. ಈಗ ನಾನ್ ಮಾಡೋಕೆ ಹೊರಟಿರೋದು ಕಾಂತಾರ ಪಾರ್ಟ್ 1 ಅಂದಿದ್ರು. ಹಾಗಾಗಿ ಕಾಂತಾರ ಪ್ರೀಕ್ವೆಲ್ ಮೇಲೆ ಎಕ್ಸ್ಪೆಕ್ಟೇಶನ್ ಜಾಸ್ತಿ ಆಗಿತ್ತು. ಅಂದ್ಹಾಗೆ, ಕಳೆದ ನಾಲ್ಕೈದು ತಿಂಗಳಿಂದ ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೆಲ್ಗಾಗಿ ಕಥೆ ಮಾಡ್ತಿದ್ರು. ಒಂದಿಷ್ಟು ಟ್ಯಾಲೆಂಟೆಡ್ ಬರಹಗಾರರ ತಂಡ ಕಟ್ಕೊಂಡು ತನ್ನ ಹುಟ್ಟೂರಿನಲ್ಲಿ ಸೆಟಲ್ ಆಗಿದ್ದ ರಿಷಬ್ ಸ್ಕ್ರಿಪ್ಟ್ ಕೆಲಸದಲ್ಲಿ ಮಗ್ನರಾಗಿದ್ದರು.. ಅಂದುಕೊಂಡಂತೆ ಈಗ ಸ್ಕ್ರಿಪ್ಟ್ ಕೆಲಸ ಮುಗಿಸಿದೆ. ಜೊತೆ ಜೊತೆಗೆ ಲೋಕೇಶನ್ ಹಂಟಿಂಗ್ ಕೂಡ ಆಗಿದೆ. ಈಗೇನಿದ್ರು ಶೂಟಿಂಗ್ ಅಖಾಡಕ್ಕೆ ಧುಮುಕೊದೊಂದೆ ಬಾಕಿ ಎನ್ನಲಾಗಿದೆ.
ಕಾಂತಾರ ಪ್ರಿಕ್ವೆಲ್ಗೆ ಸ್ಕ್ರಿಪ್ಟ್ ಫೈನಲ್ ಮಾಡ್ಕೊಂಡಿರೋ ರಿಷಬ್ ಶೆಟ್ಟಿ, ಸಂಪ್ರದಾಯವಾಗಿ ಚಿತ್ರದ ಮುಹೂರ್ತ ಮಾಡೋಕೆ ಮುಂದಾಗಿದ್ದಾರೆ. ಕಳೆದ ಸಲದಂತೆ ಈ ಸಲವೂ ತನ್ನ ಅದೃಷ್ಟದ ಹಾಗೂ ನಂಬಿಕೆಯ ಆನೆಗುಡಿ ಗಣಪತಿ ದೇವಸ್ಥಾನದಲ್ಲಿಯೇ ಕಾಂತಾರ ಪ್ರಿಕ್ವೆಲ್ನ ಮುಹೂರ್ತ ಮಾಡೋಕೆ ಸಿದ್ಧತೆ ಮಾಡ್ಕೊಂಡಿದ್ದಾರೆ. ಹಾಗಾದ್ರೆ ಕಾಂತಾರ 2 ಮುಹೂರ್ತ ಯಾವಾಗ ಅನ್ನೋದಕ್ಕೆ ಉತ್ತರ ಆಗಸ್ಟ್.
ಆಗಸ್ಟ್ನಲ್ಲಿ ಕಾಂತಾರ-2
ಆಗಸ್ಟ್ ಮೂರನೇ ವಾರ ಅಂದ್ರೆ 27ನೇ ತಾರೀಖು ಕಾಂತಾರ ಪ್ರಿಕ್ವೆಲ್ಗೆ ಅಧಿಕೃತವಾಗಿ ಮುಹೂರ್ತ ಮಾಡ್ಬೇಕು ಅನ್ನೋದು ಸದ್ಯ ಶೆಟ್ರ ನಿರ್ಧಾರ. ವಿಶೇಷ ಅಂದ್ರೆ ಕಾಂತಾರ ಚಿತ್ರದ ಮುಹೂರ್ತವೂ ಆನೆಗುಡಿ ಗಣಪತಿ ದೇವಾಸ್ಥಾನದಲ್ಲೇ, ಅದು ಕೂಡ ಆಗಸ್ಟ್ ತಿಂಗಳಲ್ಲಿ ಆಗಿತ್ತು ಎನ್ನುವುದು ಗಮನಾರ್ಹ. ಹಾಗಾಗಿ ಇದು ಕಾಕತಾಳಿಯೋ ಅಥವಾ ನಂಬಿಕೆನೋ ಕಾಂತಾರ 2 ಚಿತ್ರದ ಪೂಜಾ ಕಾರ್ಯವೂ ಅದೇ ಸ್ಥಳದಲ್ಲಿ ಅದೇ ತಿಂಗಳು ಜರುಗುವ ಸಾಧ್ಯತೆ ಇದೆ.
ಕೆರಾಡಿ ಸುತ್ತಮುತ್ತವೇ ಶೂಟಿಂಗ್
ಇನ್ನು ಆಗಸ್ಟ್ನಲ್ಲಿ ಸಿನಿಮಾದ ಮುಹೂರ್ತ ಮಾಡುವ ಯೋಜನೆಯಲ್ಲಿರುವ ರಿಷಬ್ ಶೆಟ್ಟಿ ಮುಂದಿನ ತಿಂಗಳಿಂದಲೇ ಅಂದ್ರೆ ಸೆಪ್ಟೆಂಬರ್ ಎರಡನೇ ವಾರದಿಂದಲೇ ಚಿತ್ರೀಕರಣಕ್ಕೆ ಹೋಗ್ತಾರಂತೆ. ನಿರೀಕ್ಷೆಯಂತೆ ಕಾಂತಾರ ಪ್ರಿಕ್ವೆಲ್ ಕೂಡ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗುವ ಸಾಧ್ಯತೆ ಇದೆ. ಕರಾವಳಿ, ಕಾಡು, ಗುಳಿಗ, ಪಂಜುರ್ಲಿ ಧೈವದ ಸುತ್ತವೇ ಚಿತ್ರಕಥೆ ಇರಲಿದ್ದು, ಬಹುತೇಕ ಶೂಟಿಂಗ್ ಅಲ್ಲೇ ಆಗಲಿದೆಯಂತೆ.
ಕಾಂತಾರ ಚಿತ್ರದ ಮೇಲೆ ದೈವದ ಆಶೀರ್ವಾದ ಇತ್ತು, ದೈವ ಕೃಪತೆಯಿಂದಲೇ ಈ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಕಾಣೋಕೆ ಕಾರಣವಾಯ್ತು ಅನ್ನೋದು ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ನಂಬಿಕೆ. ಈಗ ಅದೇ ನಂಬಿಕೆಯಿಂದ ಸಿನಿಮಾನ ಶುರು ಮಾಡುವ ಹಾದಿಯಲ್ಲಿದ್ದಾರೆ ಶೆಟ್ರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ