/newsfirstlive-kannada/media/post_attachments/wp-content/uploads/2025/04/pakistan.jpg)
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್‌ಲೈನ್ ಆಪರೇಟರ್‌ವೊಬ್ಬ ಅಲ್ಲಾಹು ಅಕ್ಬರ್’ ಎಂದು ಮೂರು ಬಾರಿ ಕೂಗಿರುವುದು ಕಂಡುಬಂದಿದೆ. ಈ ದೃಶ್ಯ ಪ್ರವಾಸಿಗರೊಬ್ಬರ ಸೆಲ್ಫಿ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್ ಟ್ವಿಸ್ಟ್..!
ಇನ್ನೂ, ಗುಂಡಿನ ದಾಳಿ ಆಗುತ್ತಿದ್ದಾಗ ಕಣ್ಮುಂದೆಯೇ ನಡೆದ ಭೀಕರ ದಾಳಿ ಬಗ್ಗೆ ರಿಷಿ ಭಟ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಾನು, ನನ್ನ ಪತ್ನಿ ಮತ್ತು ಮಗ ಮೂವರೇ ಹೋಗಿದ್ವಿ. ಯಾವುದೇ ಟೂರ್ ಪ್ಯಾಕೇಜ್ನಲ್ಲಿ ಹೋಗಿರಲಿಲ್ಲ. ಪ್ರತ್ಯೇಕವಾಗಿಯೇ ಹೋಗಿದ್ವಿ. ನಾವು ಅಹ್ಮದಾಬಾದ್ನಿಂದ 16ನೇ ತಾರೀಕು ಹೋಗಿದ್ವಿ. 22ರಂದು ಪಹಲ್ಗಾಮ್ನಲ್ಲಿದ್ವಿ, ಆಗ ಈ ಘಟನೆ ನಡೆದಿದ್ದು. ನಾವು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಹಲ್ಗಾಮ್ಗೆ ಹೋಗಿದ್ವಿ. ಆಮೇಲೆ ಕುದುರೆಯ ಮೇಲೆ ಕುಳಿತು ಮೇಲೆ ಹೋದ್ವಿ, ಸ್ವಲ್ಪ ಎಂಜಾಯ್ ಮಾಡಿದ್ವಿ. ಫೋಟೋಗಳನ್ನ ತಗೊಂಡ್ವಿ, ವಿಡಿಯೋಗಳನ್ನ ಮಾಡಿಕೊಂಡ್ವಿ. ಆಮೇಲೆ ಅಡ್ವೆಂಚರ್ ಮಾಡೋಣ ಅಂತ ಹೋದ್ವಿ, ಝಿಪ್ ಲೈನ್ ಮಾಡ್ತಾ ಇದ್ವಿ. ಮೊದಲು ಜನ ಝಿಪ್ ಲೈನ್ನಲ್ಲಿ ಹೋದ್ರು. ಆಮೇಲೆ ನನ್ನ ಮಗ ಕೂಡ ಝಿಪ್ ಲೈನ್ನಲ್ಲಿ ಹೋದ. ನನ್ನ ಸರದಿ ಬಂದಾಗ, ಫೈರಿಂಗ್ ಶುರುವಾಗಿತ್ತು. ಸುಮಾರು ನಾಲ್ಕೈದು ರೌಂಡ್ ಗುಂಡಿನ ದಾಳಿ ಆಗಿತ್ತು.
ಮೊದಲ ಸುಮಾರು 20 ಸೆಕೆಂಡ್ಗಳವರೆಗೆ ನನಗೆ ಗೊತ್ತೂ ಆಗಲಿಲ್ಲ. ನಾನು ಝಿಪ್ಲೈನ್ನಲ್ಲಿ ಮಸ್ತಿ ಮಾಡ್ತಿದ್ದೆ. ಆಮೇಲೆ ನನಗೆ ಇಲ್ಲಿ ಗುಂಡಿನ ದಾಳಿ ಆಗ್ತಿದೆ, ಕೆಳಗೆ ಜನ ಸಾಯುತ್ತಿದ್ದಾರೆ ಅಂತ ಗೊತ್ತಾಯ್ತು. ಐದಾರು ಜನರಿಗೆ ಗುಂಡು ಬಿದ್ದಿದ್ದು ಕಾಣಿಸಿತು. ಸುಮಾರು 20 ಸೆಕೆಂಡ್ ಆದ್ಮೇಲೆ ಇಲ್ಲಿ ಉಗ್ರರ ದಾಳಿ ಆಗಿದೆ ಅನ್ನೋದು ತಿಳಿಯಿತು. ಅವ್ನು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಅಂತ ಮೂರು ಬಾರಿ ಹೇಳಿದ. ಆಮೇಲೆ ಫೈರಿಂಗ್ ಶುರುವಾಯ್ತು. ನಾನು ಕೆಳಗಡೆ ಹೋಗಿದ್ದೆ, ಅಲ್ಲಿ ನಮಗಿಂತ ಮೊದಲು ಹೋಗಿದ್ದ ಎರಡು ಕುಟುಂಬಗಳಲ್ಲಿ ಧರ್ಮವನ್ನ ಕೇಳಿ ಅವರ ಗಂಡಸರನ್ನ ನನ್ನ ಹೆಂಡತಿ ಮತ್ತು ಮಗನ ಎದುರಲ್ಲೇ ಕೊಂದಿದ್ದರು. ನಿಮ್ಮ ಧರ್ಮ ಯಾವುದು ಅಂತ ಕೇಳಿದ್ದಾರೆ, ಹಿಂದೂ ಅಂತ ಹೇಳುತ್ತಿದ್ದಂತೆ ಗುಂಡು ಹೊಡೆದಿದ್ದಾರೆ. ನನ್ನ ಹೆಂಡತಿ ಮತ್ತು ಮಗ ಕೆಳಗಡೆ ಕೂಗುತ್ತಿದ್ರು. ನಾನು ಸ್ವಲ್ಪ ಹತ್ತಿರ ಹೋಗ್ತಿದ್ದಂತೆ, ಬೆಲ್ಟ್ ತೆಗೆದು, ಜಿಗಿದೆ. ನನ್ನ ಹೆಂಡತಿ ಮತ್ತು ಮಗನನ್ನ ಕರೆದುಕೊಂಡು ಕೂಡಲೇ ಅಲ್ಲಿಂದ ಓಡೋಕೆ ಶುರು ಮಾಡಿದೆ. ಅಲ್ಲಿ ಕೆಲವರು ಬಚ್ಚಿಟ್ಟುಕೊಳ್ಳುತ್ತಿದ್ದ ಜಾಗವನ್ನ ನೋಡಿ, ಅಲ್ಲಿ ಗುಂಡಿ ಇತ್ತು, ಅದರಲ್ಲಿರೋರು ಕೂಡಲೇ ಕಾಣಿಸುತ್ತಿರಲಿಲ್ಲ. ಅಲ್ಲಿ ಆಗಲೇ ಇಬ್ಬರು ಮೂವರು ಬಚ್ಚಿಟ್ಟುಕೊಂಡಿದ್ರು. ನಾವೂ ಅಲ್ಲಿಗೇ ಹೋಗಿ ಬಚ್ಚಿಟ್ಟುಕೊಂಡ್ವಿ. ಎಂಟು, ಹತ್ತು ನಿಮಿಷಗಳ ಬಳಿಕ ಫೈರಿಂಗ್ ಕಡಿಮೆ ಆದ್ಮೇಲೆ ಮತ್ತೆ ನಾವು ಮೇನ್ ಗೇಟ್ ಕಡೆಗೆ ಓಡೋದಕ್ಕೆ ಶುರು ಮಾಡಿದ್ವಿ.
ಸಾಕಷ್ಟು ಜನರೂ ಆ ಕಡೆಗೆ ಓಡುತ್ತಿದ್ದರು. ಎಲ್ಲರೂ ಓಡುತ್ತಿದ್ರು, ಆಗ ಮತ್ತೆ ಫೈರಿಂಗ್ ಶುರುವಾಯ್ತು. ಅಲ್ಲೂ ನಾಲ್ಕೈದು ಜನರಿಗೆ ಗುಂಡುಗಳು ತಗುಲಿದ್ವು. ಟೋಟಲ್ ಆಗಿ ನಮ್ಮ ಎದುರಲ್ಲೇ ಹದಿನೈದರಿಂದ ಹದಿನಾರು ಟೂರಿಸ್ಟ್ಗಳಿಗೆ ಗುಂಡು ತಗುಲಿದ್ವು. ನಾವು ಮೇನ್ ಗೇಟ್ ತಲುಪಿದಾಗ, ಅಲ್ಲಿಂದ ಸ್ಥಳೀಯ ಜನರು ಮೊದಲೇ ಹೋಗಿಬಿಟ್ಟಿದ್ದನ್ನ ನೋಡಿದ್ವಿ. ಕುದುರೆ ಓಡಿಸುವ ಸೋದರನೊಬ್ಬ ನಮ್ಮ ಜೊತೆಯಲ್ಲಿದ್ದ, ಆತ ನಮ್ಮನ್ನ ಕರೆದುಕೊಂಡು ಹೋದ. ನಮಗೆ ಭಾರತೀಯ ಸೇನೆ ಕೂಡ ಎದುರಾಯ್ತು. ಭಾರತೀಯ ಸೇನೆ ಎಲ್ಲಾ ಪ್ರವಾಸಿಗರನ್ನ ಕವರ್ ಮಾಡಿಕೊಳ್ತು. ಭಾರತೀಯ ಸೇನೆ ಬಗ್ಗೆ ಹೇಳ್ಬೇಕು ಅಂದ್ರೆ ಸುಮಾರು 20 ರಿಂದ 25 ನಿಮಿಷಗಳಲ್ಲಿ ಇಡೀ ಪಹಲ್ಗಾಮ್ನ ಸುತ್ತುವರಿದಿತ್ತು. ನಾವು ಎಲ್ಲಿಗೆ ಹೋಗ್ತಿದ್ವೋ ಅಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ ಸೇನೆಯಲ್ಲಿ ಸುಮಾರು 150 ಜನರಿದ್ದರು. ಅವ್ರು ಎಲ್ಲಾ ಪ್ರವಾಸಿಗರನ್ನ 18 ರಿಂದ 20 ನಿಮಿಷಗಳೊಳಗೆ ಸುತ್ತುವರಿದಿದ್ರು. ಯಾಕಂದ್ರೆ ಸತತವಾಗಿ ನಾನು ಗುಜರಾತ್ನಲ್ಲಿ ನನ್ನ ಸೋದರನ ಜೊತೆ ಮಾತಾಡ್ತಿದ್ದೆ. ಮೊದಲ ಕರೆಯನ್ನ ನಾನು ಸೋದರನಿಗೆ ಮಾಡಿದ್ದೆ. ಆಮೇಲೆ ಎರಡನೇ ಬಾರಿ ಸೇನೆ ಬಂದಿದೆ, ನಮ್ಮನ್ನ ಸುತ್ತುವರಿದಿದೆ ಅಂತ ಕರೆ ಮಾಡಿದ್ದೆ. ಈ ಎರಡು ಕರೆಗಳ ನಡುವಿನ ಸಮಯದ ಅಂತರ 18 ನಿಮಿಷಗಳದ್ದಿದೆ. ಮೊದಲಿಗೆ ನಾವೆಲ್ಲಾ ಭಯಭೀತರಾಗಿದ್ವಿ. ಆಮೇಲೆ ಸೇನೆ ಬಂದು, ಅವ್ರು ನಮ್ಮನ್ನ ಸುತ್ತುವರಿದ ನಂತರ ಸ್ವಲ್ಪ ಸುರಕ್ಷಿತವಾಗಿದ್ದೇವೆ ಅಂತ ಅನಿಸೋಕೆ ಶುರುವಾಯ್ತು. ಯಾಕಂದ್ರೆ ನಾವು ಎಷ್ಟು ಭಯಗೊಂಡಿದ್ವೋ ಅದಕ್ಕಿಂತ ಹೆಚ್ಚಾಗಿ ಅವ್ರು ನಮ್ಮನ್ನ ಸಮಾಧಾನಪಡಿಸಿದ್ರು. ನಾವು ನಿಮಗೇನೂ ಮಾಡಲ್ಲ ಅಂತ ಧೈರ್ಯ ತುಂಬಿದ್ರು. ಯಾಕಂದ್ರೆ ಗುಂಡಿನ ದಾಳಿ ಮಾಡ್ತಿದ್ದೋರೂ ಸೇನೆಯವರಂತೆ ಇದ್ರು, ಹೀಗಾಗಿ ಮಹಿಳೆಯರನ್ನ ಸೇನೆಯನ್ನೂ ನೋಡಿ ಭಯಗೊಂಡಿದ್ರು. ಆಮೇಲೆ ಅವ್ರು ನಾವು ನಿಜವಾಗಿಯೂ ಸೇನೆಯವರು, ನಿಮಗೆ ಏನೂ ಆಗೋದಕ್ಕೆ ಬಿಡಲ್ಲ ಅಂತ ಕನ್ವಿನ್ಸ್ ಮಾಡಿದ್ರು. ಆಮೇಲೆ ನಿಧಾನವಾಗಿ ನಮ್ಮನ್ನೆಲ್ಲಾ ಕೆಳಗೆಡೆಗೆ ಕರೆದುಕೊಂಡು ಹೋದ್ರು. ಬಾಕಿ ಬೆಟಾಲಿಯನ್ ಘಟನೆ ನಡೆದ ಮುಖ್ಯ ಸ್ಥಳಕ್ಕೆ ಹೋದ್ರು. ಆಗ ನಾನು ಎಕ್ಸಾಕ್ಟ್ ಆಗಿ ಯಾವ ಪರಿಸ್ಥಿತಿಯಲ್ಲಿದ್ದೆ ಅನ್ನೋದನ್ನ ಹೇಳೋದಕ್ಕೂ ಆಗಲ್ಲ. ನನ್ನ ಜೊತೆ ನನ್ನ ಪತ್ನಿ, ಮಗ ಕೂಡ ಇದ್ರು.
ನನ್ನ ಮೊದಲ ಆದ್ಯತೆ ಅವರನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗೋದಾಗಿತ್ತು, ಹಾಗಾಗಿ ಅವರನ್ನು ಕರೆದುಕೊಂಡು ಓಡಲು ಶುರು ಮಾಡಿದ್ದೆ. ನೆಟ್ವರ್ಕ್ ಸಿಗ್ತಿದ್ದಂತೆ ಸೇನೆಯಲ್ಲಿರುವ ನನ್ನ ಸ್ನೇಹಿತನ ಜೊತೆ ಮಾತಾಡಿದೆ. ಅವ್ರೂ ಒಂದೆರಡು ಇನ್ಸ್ಟ್ರಕ್ಷನ್ ಕೊಟ್ರು. ಯಾವುದೇ ಸ್ಥಳೀಯ ಕಾಶ್ಮೀರಿಯನ್ನ ನಂಬೋಕೆ ಹೋಗಬೇಡ, ಕಾಡಿನಲ್ಲಿ ಎಲ್ಲೂ ಕಾಶ್ಮೀರಿಯ ಮನೆಯೊಳಗೆ ನುಗ್ಗೋಕೆ ಹೋಗಬೇಡ. ನೇರ ಪಾರ್ಕಿಂಗ್ ಕಡೆಗೆ ಓಡಬೇಕು ನೀವು ಅಷ್ಟೇ ಅಂತ ಹೇಳಿದ್ರು. ನಾನು ಅವ್ರ ಗೈಡ್ಲೈನ್ಸ್ನ ಫಾಲೋ ಮಾಡ್ಕೊಂಡು, ನಾವು ಪಾರ್ಕಿಂಗ್ ಕಡೆಗೇ ಓಡ್ತಿದ್ವಿ, ನೇರವಾಗಿ ಪಾರ್ಕಿಂಗ್ಗೇ ತಲುಪಿದ್ವಿ. ಇಂಡಿಯನ್ ಆರ್ಮಿಗೆ ನಾನು ಧನ್ಯವಾದ ಹೇಳ್ತೇನೆ. ಯಾಕಂದ್ರೆ, ಅವ್ರು ಕೂಡಲೇ ಪ್ರವಾಸಿಗರ ರಕ್ಷಣೆಗೆ ಬಂದಿದ್ರು. ಅರ್ಧ ಗಂಟೆಯಲ್ಲೇ ವಾಹನಗಳು, ಌಂಬುಲೆನ್ಸ್ ಎಲ್ಲಾ ವ್ಯವಸ್ಥೆಯನ್ನ ಮಾಡ್ಕೊಂಡು, 30 ನಿಮಿಷಗಳಲ್ಲೇ ಎಲ್ಲವನ್ನೂ ಕವರ್ ಮಾಡಿಕೊಂಡಿದ್ರು. ಮೇಲೂ ಮೇನ್ ಸ್ಪಾಟ್ನೂ ಸಹ ಅವರು ಸುತ್ತುವರಿದಿದ್ರು. ಹಾ, ಅದನ್ನ ನಾನು ವಿವರಿಸೋದಕ್ಕೂ ಆಗಲ್ಲ. ಆಗ ನಾನು ಯಾವ ಪರಿಸ್ಥಿತಿಯಲ್ಲಿದ್ದೆ ಅಂದ್ರೆ, ಎಲ್ಲ ಕಡೆಗಳಲ್ಲೂ ಗುಂಡಿನ ಸದ್ದು ಕೇಳಿಸ್ತಿತ್ತು. ಕಿರುಚಾಟ, ಓಡೋದು, ಭಯದಲ್ಲಿ ಮೈಂಡ್ ಬ್ಲಾಕ್ ಆಗಿತ್ತು. ಆ ಝಿಪ್ಲೈನ್ನಲ್ಲಿ ನಾನು ಮಸ್ತಿ ಮಾಡ್ತಿದ್ದೆ. ಗೊತ್ತಾದ್ಮೇಲೆ ಭಯ ಆಗೋಯ್ತು, ಇಲ್ಲಿ ಏನೋ ಆಗ್ತಿದೆ ಅಂತ. ಮೊದಲ 20 ಸೆಕೆಂಡ್ ನಾನು ಮಸ್ತಿ ಮಾಡ್ತಿದ್ದೆ. ನನಗಿಂತ ಮೊದಲು 9 ಜನ ಝಿಪ್ ಲೈನ್ ಸ್ಲೈಡ್ ಮಾಡಿದ್ರು. ನನ್ನ ಮಗ, ನನ್ನ ಹೆಂಡತಿ ಸಹ ಸ್ಲೈಡ್ ಮಾಡಿದ್ರು, ಆಗ ಅವ್ನು ಏನೂ ಹೇಳಿರಲಿಲ್ಲ. ನಾನು ಸ್ಲೈಡ್ ಮಾಡುವಾಗ ಅವ್ನು ಕೂಗಿದ. ಆಮೇಲೆ ಫೈರಿಂಗ್ ಶುರು ಮಾಡಿದ್ದ. ಹೀಗಾಗಿ ಆತನ ಮೇಲೆ ನನಗೆ ಸ್ವಲ್ಪ ಅನುಮಾನ ಶುರುವಾಗಿತ್ತು. ಅವ್ನು ಅಲ್ಲಾಹು ಅಕ್ಬರ್ ಅಂತ ಮೂರು ಬಾರಿ ಹೇಳಿದ, ಆಮೇಲೆ ಫೈರಿಂಗ್ ಶುರುವಾಯ್ತು. ಆಗ ನನಗೆ ಗೊತ್ತೂ ಇರಲಿಲ್ಲ. 23ಕ್ಕೆ ನಾವು ಗುಜರಾತ್ಗೆ ತಲುಪಿ, ಇಲ್ಲಿ ನನ್ನ ಸೋದರ, ಎಲ್ಲಾ ಕುಟುಂಬಸ್ಥರು, ಕುಳಿತು ವಿಡಿಯೋಗಳನ್ನ ನೋಡ್ತಿದ್ದಾಗ, ನಾವು ಇದನ್ನ ನೋಟಿಸ್ ಮಾಡಿದ್ದು. ಮೊದಲ ವಿಡಿಯೋಗಳಲ್ಲಿ ಎಲ್ಲೂ ಆತ ಏನೂ ಹೇಳಿಲ್ಲ, ಆದ್ರೆ ಈ ವಿಡಿಯೋದಲ್ಲಿ ಹೇಳ್ತಿದ್ದಾನೆ.
ಕೂಡಲೇ ಫೈರಿಂಗ್ ಸ್ಟಾರ್ಟ್ ಆಗುತ್ತೆ. ನೋಡೋಕೆ ಸಾಮಾನ್ಯ ಕಾಶ್ಮೀರಿಯಂತೆಯೇ ಇದ್ದ. ಅವರಿಗೂ ಗಡ್ಡ ಎಲ್ಲಾ ಇತ್ತು. ಇಬ್ಬರನ್ನೇ ನೋಡಿದ್ದು ನಾನು, ಅದೂ ಕೂಡ ಹತ್ತಿರದಿಂದಲ್ಲ, 30-35 ಅಡಿ ಎತ್ತರದಿಂದ. ಪಠಾಣ್ ವ್ಯಕ್ತಿಯೊಬ್ಬನಿದ್ದ, ತನ್ನ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ. ನಾವು ಹೋದಾಗ ಕೆಳಗಡೆ ಸಂಪೂರ್ಣವಾಗಿ ಸೇನೆ ಇತ್ತು, ಕಾಡಿನಲ್ಲೂ ಸಹ ಸೇನೆ ಇತ್ತು. ಘಟನೆ ನಡೆದ ಸ್ಥಳದಲ್ಲಿ ಸೇನೆಯ ಅಧಿಕಾರಿಗಳು ಇರಲಿಲ್ಲ. ಅಲ್ಲಿ ಜಮ್ಮು ಕಾಶ್ಮೀರದ ಪೊಲೀಸರಿದ್ದರು, ಮೇನ್ ಗೇಟ್ನಲ್ಲೂ ಮೂವರು ಸೆಕ್ಯೂರಿಟಿ ಗಾರ್ಡ್ಗಳಿದ್ದರು. ನಾನು ಗ್ರೌಂಡ್ನಲ್ಲಿದ್ದ ಇಬ್ಬರನ್ನ ನೋಡಿದೆ, ಅದ್ರಲ್ಲಿ ಒಬ್ಬ ಪಠಾಣ್ ರೀತಿಯ ಬಟ್ಟೆಯನ್ನ ಧರಿಸಿದ್ದ, ಅದನ್ನ ನನ್ನ ಪತ್ನಿ ಗುರುತು ಹಿಡಿದಿದ್ದಾಳೆ. ಇನ್ನೊಬ್ಬ ಗ್ರೌಂಡ್ನಲ್ಲಿದ್ದಾತ, ಧರ್ಮ ಕೇಳಿ ಗುಂಡು ಹೊಡೆಯುತ್ತಿದ್ದವ, ಹಸಿರು ಬಣ್ಣದ ಸೇನೆಯ ಬಟ್ಟೆಯಲ್ಲಿದ್ದ. ಕಾಶ್ಮೀರ ಸ್ವರ್ಗ, ಅಲ್ಲಿಗೆ ಹೋಗಬೇಕು. ಆದ್ರೆ ಅದು ನರಕ ಕೂಡ. ಯಾವಾಗ ಹೊರಟೋಗ್ತೀವೋ ಗೊತ್ತಿಲ್ಲ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ