/newsfirstlive-kannada/media/post_attachments/wp-content/uploads/2024/07/Rishi-Sunak-2.jpg)
ಲಂಡನ್: ಇಂಗ್ಲೆಂಡ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಹುನಿರೀಕ್ಷಿತ ಫಲಿತಾಂಶ ಹೊರ ಬಿದ್ದಿದೆ. ಅಧಿಕಾರದಲ್ಲಿದ್ದ ಕನ್ಸರ್ವೇಟೀವ್ ಪಾರ್ಟಿ ಅಧಿಕಾರ ಕಳೆದುಕೊಂಡಿದ್ದು, ಲೇಬರ್ ಪಕ್ಷದ ಕೈರ್ ಸ್ಟಾರಮರ್ ಪ್ರಧಾನಿ ಪಟ್ಟಕ್ಕೇರುವುದು ನಿಶ್ಚಿತವಾಗಿದೆ.
ಈ ಬಾರಿಯ ಪಾರ್ಲಿಮೆಂಟ್ ಚುನಾವಣೆ ಇಂಗ್ಲೆಂಡ್‌ನಲ್ಲಿ ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ. ಸತತ 14 ವರ್ಷಗಳಿಂದ ಕನ್ಸರ್ವೇಟೀವ್ ಪಾರ್ಟಿಯೇ ಅಧಿಕಾರದಲ್ಲಿತ್ತು. ಇದೀಗ ಲೇಬರ್ ಪಕ್ಷ ಬ್ರಿಟಿಷ್ ಸಾಮ್ರಾಜ್ಯದ ಅಧಿಪತಿಯಾಗುತ್ತಿದ್ದಾರೆ.
ಸೋತರೂ ಸಂಪ್ರದಾಯ ಬಿಡದ ಸುನಕ್!
ರಿಷಿ ಸುನಕ್ ಅವರು ಕಳೆದ 2022ರಲ್ಲಿ ಇಂಗ್ಲೆಂಡ್ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದ ರಿಷಿ ಸುನಕ್ ತಮ್ಮ ಅಧಿಕಾರ ತ್ಯಜಿಸಿದ್ದಾರೆ.
ರಿಷಿ ಸುನಕ್ ಅವರ ಕನ್ಸರ್ವೇಟೀವ್ ಪಕ್ಷ ಚುನಾವಣೆಯಲ್ಲೂ ಸೋತರು ರಿಷಿ ಸುನಕ್ ಅವರು ತಮ್ಮ ಪಾರ್ಲಿಮೆಂಟ್ ಕ್ಷೇತ್ರದಿಂದ ಗೆದ್ದಿದ್ದಾರೆ. ಇಂಗ್ಲೆಂಡ್‌ನ ರಿಚಮಂಡ್ ಅಂಡ್ ನಾರ್ತರಲಂಟನ್ ಕ್ಷೇತ್ರದಿಂದ ರಿಷಿ ಸುನಕ್ ಅವರು ಸ್ಪರ್ಧಿಸಿದ್ದರು. 23 ಸಾವಿರ ಮತಗಳನ್ನು ಪಡೆದು 12 ಸಾವಿರ ಮತಗಳಿಂದ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಎಕ್ಸಿಟ್ ಪೋಲ್ನಲ್ಲಿ ಹೀನಾಯ ಸೋಲಿನ ಭವಿಷ್ಯ.. ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ?
ಇಂಗ್ಲೆಂಡ್‌ನಲ್ಲಿ ಹಾಲಿ ಪ್ರಧಾನಮಂತ್ರಿಗಳು ಇದುವರೆಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋತಿಲ್ಲ. ಅದೇ ಸಂಪ್ರದಾಯ, ಪರಂಪರೆಯನ್ನು ರಿಷಿ ಸುನಾಕ್ ಮುಂದುವರಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡ ರಿಷಿ ಸುನಾಕ್ ಅವರು ನನ್ನನ್ನು ಕ್ಷಮಿಸಿ ಎಂದು ಕನ್ಸರ್ವೇಟೀವ್ ಪಕ್ಷದ ಸದಸ್ಯರಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ