/newsfirstlive-kannada/media/post_attachments/wp-content/uploads/2025/02/RISHI-SUNAK.jpg)
ಯುನೈಟೆಡ್ ಕಿಂಗ್ಡಮ್ನ ಮಾಜಿ ಪ್ರಧಾನಿ ಹಾಗೂ ಭಾರತದ ಅಳಿಯ ರಿಷಿ ಸುನಕ್ ಮುಂಬೈಗೆ ಭೇಟಿ ನೀಡಿ ಪಾರ್ಸಿ ಜಿಮ್ಖಾನಾದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ. ಈ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಿಷಿ ಸುನಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಆಡದೇ ಇದ್ದರೆ ಮುಂಬೈ ಪ್ರವಾಸ ಸಂಪೂರ್ಣ ಆಗುವುದೇ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಹೊಸ ಜೀವನ ಆರಂಭ.. ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?
ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಬ್ಯಾಟ್ ಹಿಡಿದುಕೊಂಡು ಅವರು ಬ್ಯಾಟಿಂಗ್ ಆಡುತ್ತಿದ್ದರು. ಅವರ ಸುತ್ತಲೂ ಅನೇಕ ಜನರು ಸೇರಿಕೊಂಡಿದ್ದರು. ಇಂಗ್ಲೆಂಡ್ನ ರಾಜಕಾರಣಿ ಕ್ರೀಡೆಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿತ್ತು. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಬ್ಯಾಂಟ್ ಹಾಕಿಕೊಂಡು ಸ್ಪೋರ್ಟ್ಸ್ ಧರಿಸಿದ್ದ ರಿಷಿ ಸುನಕ್ ಸ್ಟಫ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
No trip to Mumbai would be complete without a game of tennis ball cricket. pic.twitter.com/UNe6d96AFE
— Rishi Sunak (@RishiSunak)
No trip to Mumbai would be complete without a game of tennis ball cricket. pic.twitter.com/UNe6d96AFE
— Rishi Sunak (@RishiSunak) February 2, 2025
">February 2, 2025
ಜಿಮ್ಖಾನಾದ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ರಿಷಿ ಸುನಕ್ ಇಲ್ಲಿ ಬರುವುದೇ ನಮಗೆ ಒಂದು ಸಂಭ್ರಮ. ಈ ಐತಿಹಾಸಿಕ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದು ನಿಜಕ್ಕೂ ಖುಷಿ ನೀಡಿದೆ. ನಿಜಕ್ಕೂ ಇದು ಒಂದು ಅದ್ಭುತ ಇತಿಹಾಸ ಹೊಂದಿರುವ ಸಂಸ್ಥೆ. ಇದು ಇನ್ನಷ್ಟು ಮತ್ತಷ್ಟು ಬೆಳೆಯಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ‘ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗ; ಹುಡುಗಿಯ ತಂದೆ ಮಾಡಿದ್ದೇನು?
ಪಾರ್ಸಿ ಜಿಮ್ಖಾನಾ 1885ರಲ್ಲಿ ಸ್ಥಾಪನೆಯಾಗಿತ್ತು. ಸರ್ ಜೆಮಸೆಟ್ಜೀ ಜೆಜೀಭೋಯ್ ಇದರ ಮೊದಲ ಅಧ್ಯಕ್ಷರಾಗಿದ್ದರೆ ಜೇಮಸೆಟ್ಜೀ ಟಾಟಾ ಇದರಚೇರ್ಮೆನ್ ಆಗಿದ್ದರು. ಈ ಒಂದು ಸಂಸ್ಥೆ ಮುಂಬೈನ ಕ್ರಿಕೆಟ್ ಸಂಸ್ಕೃತಿಯನ್ನು ಬೆಳೆಸಲೆಂದೇ ಸೃಷ್ಟಿಯಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ