/newsfirstlive-kannada/media/post_attachments/wp-content/uploads/2024/04/HEAT-WAVE.jpg)
ಕಳೆದ 2 ವಾರದಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಜೋರಾಗಿದೆ. ಈ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಬೇಸಿಗೆಯಲ್ಲಿ ಅತಿ ದೊಡ್ಡ ಆರೋಗ್ಯದ ಸಮಸ್ಯೆ ಏನೆಂದರೆ ದೇಹದಲ್ಲಿ ನೀರಿನ ಕೊರತೆ ಅಂದರೆ ನಿರ್ಜಲೀಕರಣ. ನಿರ್ಜಲೀಕರಣದಿಂದ ಹೃದಯದ ಕೆಲಸ ಕೂಡ ಹದಗೆಡಬಹುದು. ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರ ವಹಿಸಬೇಕು ಎನ್ನುತ್ತಾರೆ ವೈದ್ಯರು.
ಶಾಖದ ಅಲೆಯಿಂದ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಪರಿಣಾಮ ಆಯಾಸ, ದೌರ್ಬಲ್ಯ, ಪ್ರಜ್ಞಾಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಅದಕ್ಕೆ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ಇದ್ದರೂ ಸಾಲದು.
ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
- ದೇಹದಲ್ಲಿ ನಿರ್ಜಲೀಕರಣ ಆಗದಂತೆ ಎಚ್ಚರ ವಹಿಸಿ
- ಪ್ರತಿ ಎರಡು ಗಂಟೆಗಳಿಗೊಮ್ಮೆ ನೀರು ಕುಡಿಯುತ್ತಿರಿ
- ನೀವು ಮನೆಯಿಂದ ಹೊರಡುವಾಗ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ
- ಬಿಸಿಲಿಗೆ ಹೋದರೆ ತಲೆಯನ್ನು ಮುಚ್ಚಿಕೊಳ್ಳಿ, ಕನ್ನಡಕವನ್ನು ಧರಿಸಿ
- ಕಲ್ಲಂಗಡಿ ಸೇರಿದಂತೆ ನೀರಿನಂಶ ಇರುವ ಹಣ್ಣುಗಳನ್ನು ಸೇವಿಸಿ
ರೋಗಗಳು ಬರುವ ಅಪಾಯ
ಟೈಫಾಯಿಡ್: ಬೇಸಿಗೆಯಲ್ಲಿ ಟೈಫಾಯಿಡ್ ಸಮಸ್ಯೆ ಕಾಡಬಹುದು. ಮಕ್ಕಳಲ್ಲಿ ಇಂತಹ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಆಹಾರ ಪದ್ಧತಿಯಿಂದಲೂ ಈ ರೋಗ ಬರುತ್ತದೆ. ಜ್ವರ, ತಲೆನೋವು, ವಾಂತಿ, ಭೇದಿ, ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಟೈಫಾಯಿಡ್ ಪ್ರಕರಣಗಳೂ ಹೆಚ್ಚಿವೆ.
ಕಣ್ಣಿನ ಸೋಂಕು: ಬೇಸಿಗೆ ಕಾಲದಲ್ಲಿ ಉಂಟಾಗುವ ಬಿಸಿಲಿನ ತಾಪ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರಿಂದ ಸೋಂಕು ಹರಡುವ ಅಪಾಯ ಇರುತ್ತದೆ. ಪ್ರಕಾಶಮಾನವಾದ ಸೂರ್ಯನ ಬೆಳಕು ಕಣ್ಣಿನ ಸಮಸ್ಯೆ ಉಂಟುಮಾಡುತ್ತದೆ. ಬಿಸಿಲಿನಲ್ಲಿ ಹೋಗುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕನ್ನಡಕ ಧರಿಸಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ