/newsfirstlive-kannada/media/post_attachments/wp-content/uploads/2024/10/JOB_VIDHANA_SOUDHA.jpg)
ರೈಲ್ವೆ ಸಚಿವಾಲಯದ ಅಡಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (RITES Ltd) ಅರ್ಜಿ ಆಹ್ವಾನ ಮಾಡಿದೆ. ಇದು ಭಾರತದ ಸಾರಿಗೆ, ಮೂಲಸೌಕರ್ಯ ಮತ್ತು ಕ್ಷೇತ್ರಗಳಲ್ಲಿ ಪ್ರಧಾನ ಬಹು-ಶಿಸ್ತಿನ ಸಲಹಾ ಸಂಸ್ಥೆಯಾಗಿದೆ. ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸಕ್ತರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಈಗಾಗಲೇ ಅರ್ಜಿಗಳನ್ನು ಆರಂಭವಾಗಿದ್ದು ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. RITES ವೆಬ್ಸೈಟ್ಗೆ ಭೇಟಿ ನೀಡಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಅವಕಾಶ ಇದೆ. ಇವೆಲ್ಲ ಕೇಂದ್ರ ಸರ್ಕಾರದಡಿ ಬರುವ ಕೆಲಸಗಳು ಆಗಿದ್ದರಿಂದ ಒಳ್ಳೆಯ ರೀತಿಯಲ್ಲಿ ಮಾಸಿಕ ವೇತನ ಇರುತ್ತದೆ. ಇನ್ನು ಗುತ್ತಿಗೆ ಆಧಾರದ ಮೇಲೆ ಈ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.
ಒಟ್ಟು ಹುದ್ದೆಗಳು- 25
ವಯಸ್ಸಿನ ಮಿತಿ- 40 ವರ್ಷದ ಒಳಗಿನವರಿಗೆ ಅವಕಾಶ
ಕೆಲಸದಲ್ಲಿ 5 ರಿಂದ 10 ವರ್ಷಗಳ ಅನುಭವ ಇರಬೇಕು
ಇದನ್ನೂ ಓದಿ: ಟ್ರಾಫಿಕ್ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಳಿಗೆ ಉದ್ಯೋಗ ಕೊಟ್ಟ ಸರ್ಕಾರ.. ಮನೆಯಲ್ಲಿ ಸಂಭ್ರಮ
ಮಾಸಿಕ ವೇತನ ಶ್ರೇಣಿ
41,241 ರಿಂದ 46,417 ರೂಪಾಯಿಗಳು
ಆಯ್ಕೆ ವಿಧಾನ
ಸಂದರ್ಶನ
ಹುದ್ದೆಗಳ ಹೆಸರು
- ಸಹಾಯಕ ಹೆದ್ದಾರಿ ಎಂಜಿನಿಯರ್
- ಸರ್ವೆ ಎಂಜಿನಿಯರ್
- ಸಹಾಯಕ ಸೇತುವೆ ಎಂಜಿನಿಯರ್
- ಪ್ರಮಾಣ ಸರ್ವೇಯರ್ (Quantity Surveyor)
- ಎಲೆಕ್ಟ್ರಿಕಲ್ ಇಂಜಿನಿಯರ್
- ಸಿಎಡಿ ತಜ್ಞರು
ವಿದ್ಯಾರ್ಹತೆ (ಪದವಿ)
- ಬಿಇ ಸಿವಿಲ್ ಇಂಜಿನಿಯರ್
- ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್
- ಎಲೆಕ್ಟ್ರಿಕಲ್ ಎಂಜಿನಿಯರಿಂಗ್
- ಸಿವಿಲ್ / ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 17 ಜನವರಿ 2025
ಸಂದರ್ಶನ ನಡೆಯುವ ದಿನಾಂಕ- ಜನವರಿ 13 ರಿಂದ 17, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ