/newsfirstlive-kannada/media/post_attachments/wp-content/uploads/2024/08/RITIKA-JINDAL-3.jpg)
ಅಪ್ಪ ಅಂದರೆ ಆಕಾಶ! ಹೆಣ್ಮಕ್ಕಳಿಗಂತೂ ಅವನೇ ಪ್ರಪಂಚ. ಈ ಸ್ಟೋರಿಯಲ್ಲಿ ಬರುವ ಹೆಣ್ಣು ಮಗಳ ಅಪ್ಪನ ಕನಸು ತುಂಬಾ ದೊಡ್ಡದಿತ್ತು. ತನ್ನ ಮಗಳು IAS ಅಧಿಕಾರಿ ಆಗಬೇಕು ಅಂತಾ ಆಕೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅಂತೂ ಖುಷಿ ಪಡುವ ಕಾಲವೂ ಸನ್ನಿತವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದೆ. ಮಗಳು ತನ್ನ ಕನಸನ್ನು ಈಡೇರಿಸಿಯೇಬಿಟ್ಟಳು ಎಂಬ ಖುಷಿಯಲ್ಲಿದ್ದ ತಂದೆಗೆ ಕ್ಯಾನ್ಸರ್ ಎಂಬ ಬರಸಿಡಿಲಿನ ಆಘಾತ ಎದುರಾಯ್ತು.
ಇದನ್ನೂ ಓದಿ:ವಿನೇಶ್ ಫೋಗಟ್ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?
ಇದರಿಂದ ಅಪ್ಪನ ಕನಸನ್ನು ಈಡೇರಿಸಲು ದಂಡೆತ್ತಿ ಹೋಗಿದ್ದ ಮಗಳಿಗೆ ದೊಡ್ಡ ವಿಘ್ನ ಬಂದು ಕೂತಿತ್ತು. ಅಪ್ಪನಿಗೆ ಟ್ರೀಟ್ಮೆಂಟ್ ಕೊಡಿಸುವುದೋ ಅಥವಾ ಅಪ್ಪನ ಕನಸನ್ನು ಪೂರ್ಣಗೊಳಿಸುವುದೋ ಎಂಬ ಇಕ್ಕಟ್ಟಿನಲ್ಲಿದ್ದ ಮಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೂ ಒಂದು ದಿನ ಟ್ರೀಟ್ಮೆಂಟ್ ಕೊಡಿಸಿ, ಅಪ್ಪನ ಕನಸನ್ನೂ ಸಾಕಾರಗೊಳಿಸಿ ಉನ್ನತ ಹುದ್ದೆಯ ಹತ್ತಿರಕ್ಕೆ ಹೋಗ್ತಿದ್ದಂತೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಬಿಡ್ತಾಳೆ.
ಅಂದ್ಹಾಗೆ ಆಕೆಯ ಹೆಸರು ರಿತಿಕಾ ಜಿಂದಾಲ್. ಪಂಜಾಬ್ ಮೂಲದ ರಿತಿಕಾ ಜಿಂದಾಲ್, ಓದುವುದರಲ್ಲಿ ತುಂಬಾನೇ ಚೂಟಿ. ದ್ವಿತಿಯ ಪಿಯುಸಿಯಲ್ಲಿ ಉತ್ತಮ ಸ್ಕೋರ್ ಮಾಡಿ ಉತ್ತರ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದರು. ತಮ್ಮ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದ ನಂತರ, ರಿತಿಕಾ ದೆಹಲಿಯ ‘ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್’ಗೆ ಪ್ರವೇಶ ಪಡೆದರು. ಅಲ್ಲಿ ಪದವಿ ಓದುತ್ತಿರುವಾಗಲೇ ಐಎಎಸ್ ಆಗುವ ಕನಸು ಚಿಗುರಿತ್ತು. ಇತ್ತ ಮಗಳನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು ಅಂತಾ ತಂದೆ ಕೂಡ ಕನಸು ಕಂಡಿದ್ದ. ಅದರಂತೆ ಮಗಳಿಗೆ UPSC ಪರೀಕ್ಷೆಯ ತಯಾರಿಗೆ ಎಲ್ಲಾ ಸಹಕಾರ ನೀಡಿದ್ದರು.
ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್ ಮ್ಯಾನ್..!
ಪದವಿ ಮುಗಿದ ಬೆನ್ನಲ್ಲೇ ಮೊದಲ ಪ್ರಯತ್ನ ನಡೆಸಿದರು. ರಿತಿಕಾ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಅಂತಿಮ ಹಂತ ತಲುಪಲು ಸಾಧ್ಯವಾಗಲಿಲ್ಲ. ಮತ್ತೆ ಬಿಡದೆ ತಯಾರಿ ಮುಂದುವರೆಸಿದ ರಿತಿಕಾ, ಮತ್ತೆ ಪರೀಕ್ಷೆ ಬರೆದು ದೇಶಕ್ಕೆ 88ನೇ ರ್ಯಾಂಕ್ ಬಂದರು. ಪರೀಕ್ಷೆಯಲ್ಲಿ ಪಾಸ್ ಆದ ಸಂದರ್ಭದಲ್ಲಿ ಅವರಿಗೆ ಕೇವಲ 22 ವರ್ಷ. ಹೀಗಾಗಿ ಐಎಎಸ್ ಪಯಣ ಸುಲಭವಾಗಿರಲಿಲ್ಲ.
ಕರ್ತವ್ಯ ಪೂರೈಸಿದ ಮಗಳು!
ರಿತಿಕಾ ಜಿಂದಾಲ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಅವರ ತಂದೆಗೆ ಕ್ಯಾನ್ಸರ್ ಇರೋದು ಗೊತ್ತಾಗಿದೆ. ಇದರಿಂದಾಗಿ ಇಡೀ ಕುಟುಂಬವೇ ಛಿದ್ರವಾಗಿತ್ತು. ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದ ಮಗಳಿಗೆ ಭೂಮಿಯೇ ಕುಸಿದು ಬಿದ್ದಂತೆ ಆಗಿತ್ತು. ಬಾಯಿಗೆ ಕ್ಯಾನ್ಸರ್ ಬಂದಿದ್ದರಿಂದ ಚಿಕಿತ್ಸೆಯ ಮೂಲಕ ಹೇಗೋ ಬಚಾವ್ ಮಾಡಿದ್ದರು. ಒಂದು ಕ್ಯಾನ್ಸರ್ನಿಂದ ಪಾರಾಗಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಲಂಗ್ಸ್ ಕ್ಯಾನ್ಸರ್ ಬಂದಿರೋದು ಗೊತ್ತಾಗಿದೆ. ಇಂಥ ಪರಿಸ್ಥಿತಿಯಲ್ಲಿ ರಿತಿಕಾಗೆ ಪರೀಕ್ಷೆಗೆ ತಯಾರಿ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ.
ಇದನ್ನೂ ಓದಿ:ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?
ಸಂದರ್ಶನವೊಂದರಲ್ಲಿ.. ರಿತಿಕಾ ತನ್ನ ಮನೆ ಸಣ್ಣ ಪಟ್ಟಣದಲ್ಲಿದೆ ಎಂದು ಹೇಳಿದ್ದರು. ಅಲ್ಲಿ ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಕೊರತೆ ಇತ್ತು. ಇದರಿಂದಾಗಿ ತಂದೆಯನ್ನು ಚಿಕಿತ್ಸೆಗಾಗಿ ಲೂಧಿಯಾನಕ್ಕೆ ಕರೆದುಕೊಂಡು ಹೋಗಬೇಕಾಯಿತು ಎಂದು ಹೇಳಿದ್ದಾರೆ.
ನಾನು ಎಐಎಸ್ ಪರೀಕ್ಷೆ ಪಾಸ್ ಮಾಡಿ ತರಬೇತಿಯಲ್ಲಿದ್ದೆ. ಈ ವೇಳೆ ತಂದೆ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ಅಪ್ಪ ಸತ್ತ ಎರಡು ತಿಂಗಳೊಳಗೆ ತಾಯಿ ಕೂಡ ಕ್ಯಾನ್ಸರ್ನಿಂದ ನಿಧನರಾದರು ಎಂದು ರಿತಿಕಾ ಹೇಳಿದ್ದಾರೆ. ಇಷ್ಟಾದರೂ ಕುಗ್ಗದ ರಿತಿಕಾ ತಮ್ಮ ಮನಸ್ಸಿನಲ್ಲಿ ಹೆತ್ತವರ ಕನಸನ್ನು ಕಂಡಿದ್ದಳು. ಮಗಳು ಸಮಾಜಕ್ಕೆ ಸಹಾಯ ಮಾಡಬೇಕೆಂದು ಬಯಕೆಯನ್ನು ಇಂದು ಈಡೇರಿಸುತ್ತಿದ್ದಾರೆ. ಅಂದ್ಹಾಗೆ ರಿತಿಕಾ ಜಿಂದಾಲ್ 2019ರ ಐಎಎಸ್ ಬ್ಯಾಚ್ನ ಅಧಿಕಾರಿ ಆಗಿದ್ದಾರೆ.
ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್ಗೆ ಈಕೆ ಬೋಲ್ಡ್ ಆಗಿದ್ದೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ