/newsfirstlive-kannada/media/post_attachments/wp-content/uploads/2025/06/Riyan_Parag.jpg)
ಭಾರತದ ದೇಶಿಯ ತಂಡವಾಗಿರುವ ಅಸ್ಸಾಂ ರಾಜ್ಯ ಕ್ರಿಕೆಟ್​ ಟೀಮ್​, ನಮೀಬಿಯಾ ವಿರುದ್ಧ 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಜೂನ್ 21 ರಿಂದ ಆರಂಭವಾಗುವ ಈ ಏಕದಿನ ಸರಣಿಗೆ ರಿಯಾನ್ ಪರಾಗ್​ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ.
ನಮೀಬಿಯಾದಲ್ಲಿ ಇದೇ ಜೂನ್ 21 ರಿಂದ 29ರವರೆಗೆ ಅಸ್ಸಾಂ ರಾಜ್ಯ ಕ್ರಿಕೆಟ್ ತಂಡ ಹಾಗೂ ನಮೀಬಿಯಾ ಟೀಮ್ ಏಕದಿನ ಸರಣಿಯನ್ನು ಆಡಲಿವೆ. ಈ ಸರಣಿಯಲ್ಲಿ ರಿಯಾನ್ ಪರಾಗ್ ಅವರಿಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ತಂಡವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ನಿರೀಕ್ಷೆ ಇದೆ. ಏಕೆಂದರೆ ಈಗಾಗಲೇ ರಿಯಾನ್ ಪರಾಗ್ ಅವರು ಐಪಿಎಲ್​ನಲ್ಲಿ ರಾಜಸ್ಥಾನ ತಂಡದ ನಾಯಕನಾಗಿ ಕೆಲ ಪಂದ್ಯಗಳನ್ನು ಮುನ್ನಡೆಸಿದ್ದರು.
ರಾಜಸ್ಥಾನ ತಂಡದ ನಾಯಕನಾಗಿದ್ದಾಗ ಕನ್ನಡಿಗ ರಾಹುಲ್ ದ್ರಾವಿಡ ಹಾಗೂ ಸಂಜು ಸ್ಯಾಮ್ಸನ್​ ಅವರ ಜೊತೆ ಸಾಕಷ್ಟು ಕ್ರಿಕೆಟ್​ ಸೂತ್ರಗಳನ್ನು​ ಕಲಿತುಕೊಂಡಿದ್ದಾರೆ. ಹೀಗಾಗಿ ನಮೀಬಿಯಾ ವಿರುದ್ಧದ ಸರಣಿಯನ್ನು ಗೆದ್ದುಕೊಂಡು ಬರುವ ಭರವಸೆಯಲ್ಲಿ ರಿಯಾನ್ ಪರಾಗ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಆಲ್​ರೌಂಡರ್ ಆಗಿರುವ ರಿಯಾನ್ ಪರಾಗ್ ಬೌಲಿಂಗ್​ನಲ್ಲೂ ಎದುರಾಳಿ ಮೇಲೆ ಒತ್ತಡ ಏರಬಲ್ಲರು.
ರಿಯಾನ್ ಪರಾಗ್​ 2025ರ ಐಪಿಎಲ್​ನಲ್ಲಿ 14 ಮ್ಯಾಚ್​ಗಳಿಂದ 393 ರನ್​ಗಳನ್ನು ಗಳಿಸಿದ್ದರು. 166.53 ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಕೆಕೆಆರ್​ ವಿರುದ್ಧ ಕೇವಲ 45 ಎಸೆತಗಳಲ್ಲಿ 95 ರನ್​ಗಳನ್ನು ರಿಯಾನ್ ಬಾರಿಸಿದ್ದು ಈ ಸೀಸನ್​ನಲ್ಲಿ ಶ್ರೇಷ್ಠ ರನ್ ಆಗಿದೆ. ನಮೀಬಿಯಾದ ಕಾಲಾಮಾನ ಪ್ರಕಾರ ಎಲ್ಲ 5 ಪಂದ್ಯಗಳು ಬೆಳಗ್ಗೆ 9:30ರಿಂದಲೇ ಆರಂಭಗೊಳ್ಳಲಿವೆ. ಜೂನ್ 21, 23, 25, 27, 29 ರಂದು ಪಂದ್ಯಗಳು ನಡೆಯಲಿವೆ.
ಅಸ್ಸಾಂ ರಾಜ್ಯ ಕ್ರಿಕೆಟ್ ತಂಡ
ರಿಯಾನ್ ಪರಾಗ್ (ಕ್ಯಾಪ್ಟನ್), ಡೆನಿಶ್ ದಾಸ್, ಪ್ರದ್ಯುನ್ ಸೈಕಿಯಾ, ರಾಹುಲ್ ಹಜಾರಿಕಾ, ರಿಶವ್ ದಾಸ್, ಸುಭಮ್ ಮಂಡಲ್, ಸಿಬ್ಶಂಕರ್ ರಾಯ್, ಆಕಾಶ್ ಸೆಂಗುಪ್ತಾ, ಆಮ್ಲನ್ ಜ್ಯೋತಿ ದಾಸ್, ಕುನಾಲ್ ಶರ್ಮಾ, ಮೃನಾಯ್ ದತ್ತಾ, ಪರ್ವೇಜ್ ಮುಸಾರಫ್, ಸ್ವರೂಪಮ್, ಅಭಿಷೇಕ್ ಠಾಕುರಿ (ವಿಕೆಟ್ ಕೀಪರ್), ಅಂಕುರ್ ಠಾಕುರಿ (ವಿಕೆಟ್ ಕೀಪರ್), ಸುಮಿತ್ ಘಡಿಗಾಂವ್ಕರ್ (WK), ಅವಿನೋವ್ ಚೌಧರಿ, ಭಾರ್ಗವ್ ದತ್ತಾ, ದರ್ಶನ್, ಸೈಕಿಯಾ, ಮುಖ್ತಾರ್ ಹುಸೇನ್, ರಾಹುಲ್ ಸಿಂಗ್, ಸಿದ್ಧಾರ್ಥ್ ಶರ್ಮಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ