Advertisment

ಗೆಲುವು ಟೀಮ್ ಇಂಡಿಯಾದಿಂದ ಕೈಜಾರಿತ್ತು.. ಕೊನೆಯಲ್ಲಿ 22 ರನ್​ಗೆ 7 ವಿಕೆಟ್ ಕಿತ್ತು ರೋಚಕ ಫಿನಿಶಿಂಗ್..!

author-image
Bheemappa
Updated On
ಗೆಲುವು ಟೀಮ್ ಇಂಡಿಯಾದಿಂದ ಕೈಜಾರಿತ್ತು.. ಕೊನೆಯಲ್ಲಿ 22 ರನ್​ಗೆ 7 ವಿಕೆಟ್ ಕಿತ್ತು ರೋಚಕ ಫಿನಿಶಿಂಗ್..!
Advertisment
  • ತಂಡಕ್ಕೆ ಭದ್ರವಾದ ಬುನಾದಿ ಹಾಕಿದ್ದ ಶ್ರೀಲಂಕಾ ಓಪನರ್ಸ್​
  • ಪಾಥುಮ್ ನಿಸ್ಸಾಂಕಾರನ್ನ ಕ್ಲೀನ್ ಬೋಲ್ಡ್​ ಮಾಡಿದ ಅಕ್ಷರ್​
  • ಲಂಕೆಯ ಬ್ಯಾಟ್ಸ್​​ಮನ್​ಗಳನ್ನ ಕಾಡಿದ ಭಾರತದ ಬೌಲರ್ಸ್​

214 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ್ದ ಶ್ರೀಲಂಕಾ, ಗೆಲ್ಲೋ ಆತ್ಮವಿಶ್ವಾಸದಲ್ಲಿತ್ತು. ಟಾಪ್ ಆರ್ಡರ್​ಗಳ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಸುಲಭ ಗೆಲುವಿನ ನಿರೀಕ್ಷೆ ಮೂಡಿತ್ತು. ಅಕ್ಷರ್ ನೀಡಿದ ಆ 2 ವಿಕೆಟ್​​ಗಳ ಬ್ರೇಕ್​ ಥ್ರೂನಿಂದ ಎಲ್ಲವೂ ಬದಲಾಯ್ತು. ಟೀಮ್ ಇಂಡಿಯಾ ಕೈಜಾರಿದ್ದ ಗೆಲುವು, ಮುಕುಟಕ್ಕೇರಿತು.

Advertisment

ಇದನ್ನೂ ಓದಿ: ‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ

214 ಟಾರ್ಗೆಟ್​.. 14 ಓವರ್​.. 140 ರನ್​.. ನಿಸ್ಸಾಂಕಾ ಸಿಡಿಲಬ್ಬರದ ಬ್ಯಾಟಿಂಗ್.. ಟೀಮ್ ಇಂಡಿಯಾದ ಕ್ಯಾಚ್ ಡ್ರಾಪ್. ಎಲ್ಲವೂ ಲಂಕಾ ಗೆಲುವಿಗೆ ಫೇವರ್ ಹಾಗಿಯೇ ಇತ್ತು. ಅಕ್ಷರ್ ಪಟೇಲ್, ರಿಯಾನ್ ಜಾದೂ ಮುಂದೆ, ಲಂಕಾ ಮಕಾಡೆ ಮಲಗಿತು.

ಇದನ್ನೂ ಓದಿ: ಸರ್ಕಾರಿ ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್​.. ಸಂಸದನ ನಡೆ ಬಗ್ಗೆ ಭಾರೀ ಚರ್ಚೆ..! 

Advertisment

publive-image

ಲಂಕಾಗೆ ಭದ್ರ ಬುನಾದಿ ಹಾಕಿದ್ದ ಓಪನರ್ಸ್

214 ರನ್​​ಗಳ ಟಾರ್ಗೆಟ್​ ಬೆನ್ನಟ್ಟಿದ ಲಂಕಾಗೆ ಉತ್ತಮ ಆರಂಭ ಸಿಕ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಿಸ್ಸಾಂಕಾ, ಕುಸಾಲ್ ಮೆಂಡಿಸ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ 55 ರನ್ ಗಳಿಸಿದ ಈ ಜೋಡಿ, ಶ್ರೀಲಂಕಾಗೆ ಭದ್ರಬುನಾದಿ ಹಾಕಿದ್ರು.

ಇದನ್ನೂ ಓದಿ: KRS ಡ್ಯಾಂನ ಒಳ ಹರಿವು, ಹೊರ ಹರಿವು ಹೇಗಿದೆ.. ಎಷ್ಟು ಟಿಎಂಸಿ ನೀರು ಸಂಗ್ರಹ ಆಗಿದೆ ಗೊತ್ತಾ?

ನಾನಾ.. ನೀನಾ ಎಂಬಂತೆ ರನ್ ಗಳಿಸಿ ಈ ಓಪನಿಂಗ್ ಜೋಡಿ, ಮೊದಲ ವಿಕೆಟ್​ಗೆ 84 ರನ್​ಗಳ ಜೊತೆಯಾಟವಾಡಿತು. ಈ ವೇಳೆ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಒಳಗೊಂಡ 45 ರನ್ ಸಿಡಿಸಿ ಅಪಾಯಕಾರಿಯಾಗ್ತಿದ್ದ ಕುಸಾಲ್ ಮೆಂಡಿಸ್​​​ಗೆ ಅರ್ಷದೀಪ್ ಸಿಂಗ್ ಬ್ರೇಕ್ ಹಾಕಿದರು.

Advertisment

ನಿಸ್ಸಾಂಕಾ ಸ್ಫೋಟಕ ಆಟ.. ಭಾರತ ನಿರುತ್ತರ..!

ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಕೈಹಾಕಿದ್ದ ನಿಸ್ಸಾಂಕಾ, ಕುಸಾಲ್ ಮೆಂಡಿಸ್ ವಿಕೆಟ್ ಪತನದ ಬಳಿಕ ಮತ್ತಷ್ಟು ಬೋರ್ಗೆರೆದರು. ಸ್ಟೇಡಿಯಂನ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ನಿಸ್ಸಾಂಕಾ, 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಟೀಮ್ ಇಂಡಿಯಾದ ಪ್ರತಿ ಬೌಲರ್​​​ಗೆ ಬೆಂಡೆತ್ತಿದ್ದ ನಿಸ್ಸಾಂಕಾ, ಲಂಕಾ ಗೆಲುವಿಗೆ ಪಣ ತೊಟ್ಟಂತೆ ಕಂಡಿದ್ದರು. ಆದ್ರೆ, 48 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್​ ಒಳಗೊಂಡ 79 ರನ್​​ ಸಿಡಿಸಿದ್ದ ನಿಸ್ಸಾಂಕಾಗೆ ಅಕ್ಷರ್​, ಕ್ಲೀನ್ ಬೋಲ್ಡ್​ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿದರು. ಇಲ್ಲಿಂದ ಶುರುವಾಗಿದ್ದೆ ಲಂಕಾ ದಹನ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!

Advertisment

publive-image

140ಕ್ಕೆ 1 ವಿಕೆಟ್.. ಶ್ರೀಲಂಕಾ 170ಕ್ಕೆ ಆಲೌಟ್​..!

14 ಓವರ್​ಗಳಲ್ಲಿ 140 ರನ್​ ಕಲೆಹಾಕಿ ಜಸ್ಟ್​ ಒಂದೇ ಒಂದು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ನಿಸ್ಸಾಂಕಾ ವಿಕೆಟ್ ಪತನವಾಯ್ತು. ಈ ಬೆನ್ನಲ್ಲೇ 20 ರನ್ ಗಳಿಸಿದ್ದ ಕುಸಾಲ್ ಪೆರೆರಾಗೂ ಆಕ್ಷರ್​ ಪವಿಲಿಯನ್​ಗೆ ಹಾದಿ ತೋರಿದರು. ಈ ಬಳಿಕ ಕಮಿಂದು ಮೆಂಡಿಸ್​ 12 ರನ್ ಬಿಟ್ಟರೆ, ಉಳಿದ್ಯಾರು ಕ್ರೀಸ್​ನಲ್ಲಿ ಉಳಿಯುವ ಟೀಮ್ ಇಂಡಿಯಾ ಬೌಲರ್​ಗಳು ಬಿಡಲಿಲ್ಲ.

ನಾಯಕ ಚರಿತ ಅಸಲಂಕಾ, ಶನಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರೆ. ವನಿಂದು ಹಸರಂಗ, ಮಹೇಶ ತೀಕ್ಷಣ 2 ರನ್​ಗೆ ಆ ಮುಗಿಸಿದರು. ಪತಿರಣ 6 ರನ್, ಮಧುಶನಕ ಸೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪರಿಣಾಮ ಕೊನೆ 7 ಬ್ಯಾಟರ್​ಗಳು 22 ರನ್​ಗಳಷ್ಟೇ ಗಳಿಸಿದರು. ಇದರೊಂದಿಗೆ ಶ್ರೀಲಂಕಾ 170 ರನ್​ಗೆ ಆಲೌಟ್​ ಆಯ್ತು. ಟೀಮ್ ಇಂಡಿಯಾ 43 ರನ್​ಗಳ ಗೆಲುವು ದಾಖಲಿಸಿತು.

ಇದನ್ನೂ ಓದಿ: Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..?

Advertisment


">July 27, 2024

ಇಂದೇ ಸರಣಿ ವಶಪಡಿಸಿಕೊಳ್ಳುತ್ತಾ ಟೀಮ್ ಇಂಡಿಯಾ..?

ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಮುಖಭಂಗ ಅನುಭವಿಸಿರುವ ಶ್ರೀಲಂಕಾ, ಟಿ20 ಸರಣಿ ಉಳಿಸಿಕೊಳ್ಳಬೇಕಾದ್ರೆ, ಇಂದಿನ ಪಂದ್ಯ ಗೆಲ್ಲಲೇಬೇಕಿದೆ. ಆದ್ರೆ, ಮೊದಲ ಪಂದ್ಯ ಗೆದ್ದ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಇಂದೇ ಸರಣಿ ವಶಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಯಾರ ಕೈ ಮೇಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment