ತಂಡದಲ್ಲಿ ಸಂಜು ಇದ್ದರೂ ರಿಯಾನ್ ಪರಾಗ್​​ಗೆ ಯಾಕೆ ನಾಯಕತ್ವ ನೀಡಿದ್ದು ಗೊತ್ತಾ..?

author-image
Ganesh
Updated On
IPL ಟ್ರೇಡ್​ ವಿಂಡೋ ಓಪನ್​​.. ಬಲಿಷ್ಠ ತಂಡಕ್ಕಾಗಿ ಪ್ಲಾನ್​, ಚೆನ್ನೈಗೆ ಹೊಸ ವಿಕೆಟ್​ ಕೀಪರ್?​
Advertisment
  • ಮೊದಲ ಮೂರು ಪಂದ್ಯಗಳಿಗೆ ಪರಾಗ್ ಕ್ಯಾಪ್ಟನ್
  • ರಾಜಸ್ಥಾನ್ ರಾಯಲ್ಸ್ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ
  • ಸಂಜು ಸ್ಯಾಮ್ಸನ್​​ಗೆ ಏನಾಯ್ತು? ಯಾಕೆ ಕೊಕ್..?

ರಾಜಸ್ಥಾನ್ ರಾಯಲ್ಸ್​​ ತಂಡವು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದು, ಮೊದಲು ಮೂರು ಪಂದ್ಯಗಳಿಗೆ ರಿಯಾನ್ ಪರಾಗ್ ಅವರು ಕ್ಯಾಪ್ಟನ್ ಆಗಿ ಘೋಷಣೆ ಮಾಡಿದೆ. ವಿಶೇಷ ಅಂದ್ರೆ ಆರ್​ಆರ್​​ನ ದೀರ್ಘಕಾಲದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಕೂಡ ಪರಾಗ್ ಕ್ಯಾಪ್ಟನ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.

ಯಾಕೆ..?

ಮಾರ್ಚ್​ 23 ರಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆಡುವ ಮೂಲಕ ರಾಜಸ್ಥಾನ್ ರಾಯಲ್ಸ್​ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸ್ತಿದೆ. ಆದರೆ ಸಂಜು ಸ್ಯಾಮ್ಸನ್ ಮೊದಲ ಮೂರು ಪಂದ್ಯಗಳನ್ನು ಲೀಡ್ ಮಾಡುವುದಿಲ್ಲ. ಕಾರಣ ಇಷ್ಟೇ, ಸಂಜು ಸ್ಯಾಮ್ಸನ್ ಕೈ ಬೆರಳಿಗೆ ಗಾಯಮಾಡಿಕೊಂಡಿದ್ದು, ಚೇತರಿಸಿಕೊಳ್ತಿದ್ದಾರೆ. ಹೀಗಾಗಿ ರಿಯಾನ್ ಪರಾಗ್ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಫ್ರಾಂಚೈಸಿ ಹೇಳಿಕೆ ಪ್ರಕಾರ, ಸಂಜು ಸ್ಯಾಮ್ಸನ್​ ಅವರಿಗೆ ವಿಕೆಟ್ ಕೀಪಿಂಗ್​​ಗೆ ಮತ್ತು ಫೀಲ್ಡಿಂಗ್ ಮಾಡಲು ಕೂಡ ಅವಕಾಶ ಸಿಕ್ಕಿಲ್ಲ. ಆದರೆ ಸ್ಯಾಮ್ಸನ್ ಯಾವುದೇ ಪಂದ್ಯವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಇವರು ಬ್ಯಾಟಿಂಗ್ ಸ್ಪೆಷಲಿಸ್ಟ್​ ಆಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದೆ.

ಸಂಜು ಸ್ಯಾಮ್ಸನ್ ಸಂಪೂರ್ಣ ಗುಣಮುಖ ಆಗುವವರೆಗೂ ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್ ಮಾಡುವುದಿಲ್ಲ. ಅಲ್ಲಿಯವರೆಗೆ ಬ್ಯಾಟಿಂಗ್​ನಲ್ಲಿ ಮಾತ್ರ ಮಾಡ್ತಾರೆ. ವೈದ್ಯರಿಂದ ಅನುಮತಿ ಸಿಕ್ಕ ಬಳಿಕ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ. ಅವರು ಶೀಘ್ರದಲ್ಲೇ ಫಿಟ್ ಆಗಲಿದ್ದಾರೆ ಅಂತಾ ಫ್ರಾಂಚೈಸಿ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮಾಡಿದ ಫ್ರಾಂಚೈಸಿ.. ರೊಚ್ಚಿಗೆದ್ದ ಕನ್ನಡ ಚಳವಳಿ ಕೇಂದ್ರ ಸಮಿತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment