/newsfirstlive-kannada/media/post_attachments/wp-content/uploads/2025/05/PARAG.jpg)
ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ನ ಕ್ಯಾಪ್ಟನ್ ರಿಯಾನ್ ಪರಾಗ್ ವಿನಾಶಕಾರಿ ಬ್ಯಾಟಿಂಗ್ ನಡೆಸಿದರು. ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು.
ಕೆಕೆಆರ್ ಬೌಲರ್ ಮೊಯಿನ್ ಅಲಿ ಎಸೆದ ಇನ್ನಿಂಗ್ಸ್‌ನ 13ನೇ ಓವರ್‌ನ ಮೊದಲ ಎಸೆತದಲ್ಲಿ ಆರ್‌ಆರ್ ಬ್ಯಾಟರ್ ಹೆಟ್ಮೆಯರ್ ಸಿಂಗಲ್ ತೆಗೆದುಕೊಂಡು ರಿಯಾನ್ ಪರಾಗ್‌ಗೆ ಸ್ಟ್ರೈಕ್ ನೀಡಿದರು. ನಂತರ ಪರಾಗ್ ಸತತ 4 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ‘ವಿರಾಟ್’ ವೀರಾವೇಷದ ಆನ್ಸರ್.. RCB ‘ಸಿಕ್ಸರ್ ಕಿಂಗ್’ ಮುಂದೆ ಚೆನ್ನೈ ಚಿಂದಿ!
ನಂತರ ಮೊಯಿನ್ ಅಲಿ ಒಂದು ವೈಡ್ ಬಾಲ್ ಮಾಡಿದರು. ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದರು. ನಂತರ ವರುಣ್ ಚಕ್ರವರ್ತಿ ಓವರ್ ಬೌಲ್ ಮಾಡಲು ಬಂದರು. ಹೆಟ್ಮೆಯರ್ ಮತ್ತೊಮ್ಮೆ ಸಿಂಗಲ್ ತೆಗೆದುಕೊಂಡು ಪರಾಗ್‌ಗೆ ಸ್ಟ್ರೈಕ್ ನೀಡಿದರು. ಆಗ ಮತ್ತೊಂದು ಸಿಕ್ಸರ್ ಬಾರಿಸಿದರು. ಆ ಮೂಲಕ ತಾವು ಎದುರಿಸಿದ ಆರು ಬಾಲ್ನಲ್ಲಿ 6 ಸಿಕ್ಸರ್ ಬಾರಿಸಿದರು, ಈ ಆರು ಸಿಕ್ಸರ್‌ಗಳು ಒಂದೇ ಓವರ್‌ನಲ್ಲಿ ಬರದಿದ್ದರೂ, ಅವು ಸತತ ಆರು ಎಸೆತಗಳಲ್ಲಿ ಬಂದವು.
ಪಂದ್ಯ ಮುಗಿದ ಮೇಲೆ ಏನು ಹೇಳಿದರು..?
ಕೊನೆಯ 2 ಓವರ್‌ಗಳವರೆಗೆ ನಾನು ಕ್ರೀಸ್ನಲ್ಲಿ ಇರಬೇಕೆಂದು ಪ್ಲಾನ್ ಮಾಡಿದ್ದೆ. ದುರಾದೃಷ್ಟವಶಾತ್ 18ನೇ ಓವರ್‌ನಲ್ಲಿ ಔಟಾದೆ. ನನ್ನ ಲೆಕ್ಕಾಚಾರ ತಪ್ಪಾಯ್ತಯ್ತು. ಕೊನೆಯ 6 ಓವರ್‌ಗಳಲ್ಲಿ ನಮಗೆ ಉತ್ತಮ ಆಯ್ಕೆಗಳು ಸಿಗಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಬೇರೆಯವರ ಬಗ್ಗೆ ದೂರುವುದಕ್ಕೆ ಏನೂ ಇಲ್ಲ. ನಾನೇ ಅದನ್ನು ಮಾಡಬೇಕಿತ್ತು ಎಂದರು. ಪರಾಗ್ ಬ್ಯಾಟಿಂಗ್ ಅಬ್ಬರದ ನಡುವೆಯೂ ಕೆಕೆಆರ್ ರಾಜಸ್ಥಾನ್ ವಿರುದ್ಧ ಕೇವಲ ಒಂದು ರನ್ಗಳಿಂದ ಗೆಲುವು ಸಾಧಿಸಿತು.
ಇದನ್ನೂ ಓದಿ: IPLನಲ್ಲಿ ಮತ್ತೊಂದು ಹೈಟೆನ್ಷನ್ ಪಂದ್ಯ.. ಲಾಸ್ಟ್ ಓವರ್‌ನಲ್ಲಿ RR ವಿರುದ್ಧ ಕೋಲ್ಕತ್ತಾಗೆ ರೋಚಕ ಜಯ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್