/newsfirstlive-kannada/media/post_attachments/wp-content/uploads/2024/04/Riyan-Parag.jpg)
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್​ಮನ್​ ರಿಯಾನ್​ ಪರಾಗ್​ ನಿನ್ನೆ ಅರ್ಧ ಶತಕ ಬಾರಿಸಿದ್ದರು. ಮಗನ ಅದ್ಭುತ ಬ್ಯಾಟಿಂಗ್​ ಕಂಡು ರಿಯಾನ್​ ತಾಯಿ ಓಡಿ ಹೋಗಿ ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್​ ತಂಡದ ನಡುವೆ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯದಲ್ಲಿ ಮುಂಬೈ ತಂಡ 125 ರನ್​ ಬಾರಿಸಿತ್ತು. ಆದರೆ ಈ ರನ್​ ಅನ್ನು ಚೇಸ್​ ಮಾಡಿದ ರಾಜಸ್ಥಾನ್​ 127 ರನ್​ ಬಾರಿಸುವ ಮೂಲಕ 6 ವಿಕೆಟ್​ಗಳ​ ಜಯ ತನ್ನದಾಗಿಸಿಕೊಂಡಿದೆ.
No one loves you like your mom does. ? pic.twitter.com/oaWC2SYR47
— Rajasthan Royals (@rajasthanroyals)
No one loves you like your mom does. 💗 pic.twitter.com/oaWC2SYR47
— Rajasthan Royals (@rajasthanroyals) April 1, 2024
">April 1, 2024
ಇದನ್ನೂ ಓದಿ: VIDEO: ನೀರಿಗಾಗಿ ಬಂದ ಯುವತಿ ಮೇಲೆ ಹಲ್ಲೆ.. ಜಡೆ ಹಿಡಿದು ಎಳೆದಾಡಿ ಥಳಿಸಿದ ವ್ಯಕ್ತಿ
ರಾಜಸ್ಥಾನ್​ ತಂಡ ಬ್ಯಾಟ್ಸ್​ಮನ್​ ರಿಯಾನ್​ ಪರಾಗ್​ 39 ಎಸೆತಕ್ಕೆ 54 ರನ್​ ಬಾರಿಸಿದ್ದಾರೆ. ಅದರಲ್ಲಿ 5 ಫೋರ್​ 3 ಸಿಕ್ಸ್​ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಡಲು ಕಾರಣರಾದರು. ಇವರ ಆಟವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ ಆತನ ತಾಯಿ ಸಂತಸ ಪಟ್ಟಿದ್ದಾರೆ. ಮ್ಯಾಚ್​ ಮುಗಿಸಿ ಹೊರಬಂದಂತೆ ಓಡಿ ಹೋಗಿ ಆತನನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ. ರಿಯಾನ್​ ಕೆನ್ನೆಗೆ, ಹಣೆಗೆ ಮುತ್ತಿಟ್ಟಿದ್ದಾರೆ.
ಅಂದಹಾಗೆಯೇ ರಿಯಾನ್​​ ಆರೆಂಜ್​ ಕಾಪ್ ಗಿಟ್ಟಿಸಿಕೊಂಡ ಕ್ರಿಕೆಟರ್​ ಆಘಿ ಗುರುತಿಸಿಕೊಂಡಿದ್ದಾರೆ.​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us