/newsfirstlive-kannada/media/post_attachments/wp-content/uploads/2025/05/Tej-Paratap-Yadav-3.jpg)
12 ವರ್ಷದ ತೇಜ್ ಪ್ರತಾಪ್ ಯಾದವ್ ಪ್ರೀತಿ ಬಗ್ಗೆ ಕೇಳಿ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ತನ್ನ ಮಗ ಒಂದು ಹುಡುಗಿ ಜೊತೆ ಆಪ್ತವಾಗಿರೋ ಫೋಟೋ, ವಿಡಿಯೋಗಳು ವೈರಲ್ ಆಗಿ ಬಿಹಾರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಈ ಗುಟ್ಟಾದ ಸಂಬಂಧವನ್ನ ಖುದ್ದು ತೇಜ್ ಪ್ರತಾಪ್ ಯಾದವ್ ಅವರೇ ಬಯಲು ಮಾಡಿ ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ಮುಜುಗರ ತಂದಿದ್ದಾರೆ.
'12 ವರ್ಷದಿಂದ ಕಾಯ್ತಾ ಇದ್ದೆ!'
ನಾನು ಇದನ್ನ 12 ವರ್ಷದಿಂದ ಎಲ್ಲರಿಗೂ ಹೇಳಬೇಕೆಂದು ಬಯಸುತ್ತಿದ್ದೆ. ಆದರೆ ಅದನ್ನು ಹೇಗೆ ಹೇಳಬೇಕೆಂದು ಅರ್ಥವಾಗಿರಲಿಲ್ಲ. ಹಾಗಾಗಿ ಇಂದು ಈ ಪೋಸ್ಟ್ ಮೂಲಕ ನನ್ನ ಹೃದಯದ ಭಾವನೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಹೇಳುತ್ತಿರುವುದು ನಿಮಗೆಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ.
- ತೇಜ್ ಪ್ರತಾಪ್ ಯಾದವ್, ಲಾಲು ಪ್ರಸಾದ್ ಯಾದವ್ ಪುತ್ರ
ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಫೇಸ್‌ಬುಕ್‌ನಲ್ಲಿ ಹೀಗಂತ ಪೋಸ್ಟ್ ಮಾಡಿದ್ದಾರೆ. ಇದೊಂದ್ ಪೋಸ್ಟ್ ಬಿಹಾರದ ರಾಜಕೀಯದಲ್ಲಿ, ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಅಕ್ಷರಶಃ ಬಿರುಗಾಳಿ ಎಬ್ಬಿಸಿ ಬಿಟ್ಟಿದೆ.
/newsfirstlive-kannada/media/post_attachments/wp-content/uploads/2024/03/TEJ-PRATAP-1.jpg)
ಹೇಳಿ ಕೇಳಿ ಬಿಹಾರದ ವಿಧಾನಸಭೆ ಚುನಾವಣೆ ಹತ್ತಿರ ಬಂತು... ಇಂತಾ ಟೈಮ್‌ನಲ್ಲಿ ಲಾಲು ಪ್ರಸಾದ್ ಪುತ್ರ ತಾನು ಯುವತಿಯೊಬ್ಬಳ ಜೊತೆ ಇರೋ ರಂಗು ರಂಗಿನ ಫೋಟೋ ಹಾಕಿ 12 ವರ್ಷದಿಂದ ಹೇಳ್ಬೇಕು ಅಂತಾ ಇದ್ದೆ. ಈಗ ಹೇಳ್ತಿದ್ದೇನೆ ಅಂತಾ ಹೇಳಿದ್ರೆ ರಾಜಕೀಯದಲ್ಲಿ ಕೋಲಾಹಲ ಎದ್ದೇಳದೇ ಇರುತ್ತಾ? ನಿರೀಕ್ಷೆ ಅಂತೆ ಕೋಲಾಹಲ ಸೃಷ್ಟಿಯಾಗಿದೆ. ಹಾಗೇ ತಮ್ಮ ಹಿರಿಯ ಪುತ್ರನ ನಡೆ ಲಾಲು ಪ್ರಸಾದ್ ಯಾದವ್‌ಗೂ ತೀವ್ರ ಮುಜುಗರ ಸೃಷ್ಟಿ ಮಾಡಿದೆ. ಹೀಗಾಗಿಯೇ ಇನ್ಮೇಲೆ ನೀನು ನನ್ನ ಮಗನಲ್ಲ ಅನ್ನೋ ರೀತಿಯಲ್ಲಿ, ಪಕ್ಕಾ ಸಿನಿಮಾ ಸ್ಟೈಲ್‌ನಲ್ಲಿ ಗೇಟ್ ಪಾಸ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Lalu-Prasad-Yadav-Son.jpg)
ಅಕ್ರಮ ಸಂಬಂಧ ಘೋಷಣೆ ಮಾಡ್ಕೊಂಡ್ರಾ ತೇಜ್ ಯಾದವ್?
ಸೇಮ್​ ಸೂರ್ಯವಂಶ ರೀತಿಯೇ ಮಗನ ಆಚೆ ಹಾಕಿದ ಲಾಲು!
ಸಿನಿಮಾಗಳಲ್ಲಿ ನೀನು ಇನ್ಮೇಲೆ ನನ್ನ ಮಗ ಅಲ್ಲ ಅಂತಾ ಹೇಳಿ ಮನೆಯಿಂದ ಮಗನನ್ನ ಹೊರಹಾಕೋ ಸೀನ್ ನೋಡಿರ್ತೀರಿ. ಕನ್ನಡದ ಸೂರ್ಯವಂಶ ಸಿನಿಮಾದಲ್ಲೂ ಅಂತಾ ಸೀನ್ ಇದೆ. ಆದ್ರೆ, ತೇಜ್ ಪ್ರತಾಪ್ ಯಾದವ್ ಸ್ಟೋರಿ ಆ ಸಿನಿಮಾಗಳನ್ನ ಕಥೆಯನ್ನೂ ಮೀರಿದ್ದು. ಇಲ್ಲಿ ತೇಜ್ ಪ್ರತಾಪ್ ಯಾದವ್ ಹೀರೋನಾ? ವಿಲನ್ ನಾ? ಅನ್ನೋ ಪ್ರಶ್ನೆಗೆ ಜನರೇ ಉತ್ತರ ಕಂಡುಕೊಳ್ಳಬೇಕು.
ತೇಜ್ ಪ್ರತಾಪ್ ಒಂದು ಮದುವೆಯಾಗಿ ಅದು ಡಿವೋರ್ಸ್ ಹಂತದಲ್ಲಿ ಇರುವಾಗ ತಾನು 12 ವರ್ಷದಿಂದ ಈ ಬಗ್ಗೆ ಹೇಳ್ಬೇಕು ಅಂತಾ ಇದ್ದೆ ಅಂತಾ ಪೋಸ್ಟ್ ಮಾಡಿದ್ದು. ಹೀಗಾಗಿಯೇ ವಿವಾದದ ರೂಪ ಪಡ್ಕೊಂಡಿದೆ. ಇವ್ರು 2018 ರಲ್ಲಿ ಐಶ್ವರ್ಯ ರೈ ಅನ್ನೋ ಯುವತಿಯ ಜೊತೆ ಸಪ್ತಪತಿ ತುಳಿದಿದ್ರು. ಆದ್ರೆ, ಇಬ್ಬರ ನಡುವೆ ಹೊಂದಾಣಿಗೆ ಬರದಿಂದ ಕಾರಣಕ್ಕೆ ಇಬ್ಬರು ಡಿವೋರ್ಸ್ ಮೊರೆ ಹೋಗಿದ್ರು. ಅದು ಕೋರ್ಟ್‌ನಲ್ಲಿ ವಿಚಾರಣೆ ನಡೀತಾ ಇದೆ. ಈ ನಡುವೆ ತೇಜ್ ಪ್ರತಾಪ್ ಯಾದವ್ ತಾನು 12 ವರ್ಷದ ಬಾಂಧವ್ಯ ಹೇಳ್ಬೇಕು ಅಂತಾ ಇದ್ದೆ ಅಂತಾ ಅನುಷ್ಕಾ ಯಾದವ್ ಅನ್ನೋ ಯುವತಿ ಜೊತೆಗಿರೋ ಫೋಟೋ ಪೋಸ್ಟ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Tej-Paratap-Yadav-1.jpg)
ತೇಜ್ ಪ್ರತಾಪ್ ಯಾದವ್ ಮದುವೆಯಾಗಿ ಆರೇಳು ವರ್ಷವಾಯ್ತು. ಆದ್ರೆ, ಅನುಷ್ಕಾ ಯಾದವ್ ಜೊತೆಗಿನ ತನ್ನ ಸಂಬಂಧ 12 ವರ್ಷದ್ದು ಅಂತಾ ಹೇಳ್ಕೊಂಡಿದ್ದಾರೆ. ಹೀಗಾಗಿ ಲಾಲು ಪುತ್ರ ಅಕ್ರಮ ಸಂಬಂಧವನ್ನ ಘೋಷಣೆ ಮಾಡ್ಕೊಂಡ್ರಾ? ಅನ್ನೋ ಪ್ರಶ್ನೆ ಎಲ್ಲೆಡೆ ಕೇಳಿ ಬರ್ತಾ ಇದೆ.
ಈ ನಡುವೆ ತೇಜ್ ಪ್ರತಾಪ್ ಯಾದವ್ ಮತ್ತು ಅನುಷ್ಕಾ ಯಾದವ್ ಇಬ್ಬರು ಆಪ್ತರಾಗಿರೋ ಇನ್ನಷ್ಟು ಫೋಟೋಗಳು, ವಿಡಿಯೋಗಳು ಸಖತ್ ವೈರಲ್ ಆಗಿವೆ. ಕೆಲವು ಫೋಟೋಗಳಲ್ಲಿ ತುಂಬಾ ಅಪ್ತರಾಗಿ, ರೋಮ್ಯಾಂಟಿಕ್ ಮೂಡ್‌ನಲ್ಲಿರೋದು ಕಾಣಿಸ್ತಿದೆ. ಇನ್ನು ಕೆಲವು ವಿಡಿಯೋಗಳು ಇಬ್ಬರಿಗೂ ಆತ್ಮೀಯ ಬಾಂಧವ್ಯ ಇತ್ತು ಅನ್ನೋದನ್ನ ಸಾರಿ ಸಾರಿ ಹೇಳ್ತಿವೆ. ಆದ್ರೆ, ಈ ವಿಡಿಯೋಗಳನ್ನ, ಫೋಟೋಗಳನ್ನ ಲೀಕ್ ಮಾಡಿದವ್ರು ಯಾರು? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ವಿವಾದ ಭುಗಿಲೇಳ್ತಾ ಇದ್ದಂತೆ ತಮ್ಮ ಪುತ್ರನಿಗೆ ಲಾಲು ಪ್ರಸಾದ್ ಯಾದವ್ ಗೇಟ್ ಪಾಸ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Tej-Paratap-Yadav-2.jpg)
'ಪಕ್ಷದಿಂದ, ಕುಟುಂಬದಿಂದ ಗೇಟ್‌ಪಾಸ್'
ಖಾಸಗಿ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟಗಳು ದುರ್ಬಲಗೊಳ್ಳುತ್ತದೆ. ಅದರಂತೆ, ನನ್ನ ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ, ನಾನು ಅವರನ್ನು ಪಕ್ಷ ಮತ್ತು ಕುಟುಂಬದಿಂದ ದೂರವಿಡುತ್ತೇನೆ. ಇನ್ನು ಮುಂದೆ ಆತನಿಗೆ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ರೀತಿಯ ಸ್ಥಾನಮಾನ ಇರೋದಿಲ್ಲ. ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗುತ್ತಿದೆ.
- ಲಾಲು ಪ್ರಸಾದ್ ಯಾದವ್, ಮಾಜಿ ಸಿಎಂ
ರಾಜಕೀಯ ಇತಿಹಾಸದ ಪುಟಗಳನ್ನ ತೆರೆದು ನೋಡಿದಾಗ ಮಾಜಿ ಮುಖ್ಯಮಂತ್ರಿಗಳು ತಮ್ಮ ಪುತ್ರನನ್ನ ಪಕ್ಷದಿಂದ ಹೊರಹಾಕಿದ್ದು ಬೇಕಾದಷ್ಟು ಕಾಣಿಸುತ್ತೆ. ಆದ್ರೆ, ಕುಟುಂಬದಿಂದಲೂ ಗೇಟ್ ಪಾಸ್ ಅಂತಾ ಹೇಳಿದ್ದನ್ನ ನೋಡಿದ್ದು ತೀರಾ ವಿರಳ. ಆದ್ರೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವ್ರು ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಹಾಗೇ ಕುಟುಂಬದಿಂದಲೂ ಹೊರ ಹಾಕಿದ್ದಾರೆ. ಈ ಬಗ್ಗೆ ತೇಜ್ ಪ್ರತಾಪ್ ಯಾದವ್ ಸಹೋದರ ತೇಜಸ್ವಿ ಯಾದವ್ ಕೂಡ ತಂದೆ ತೀರ್ಮಾನವನ್ನ ಸಮರ್ಥಿಸಿಕೊಂಡಿದ್ದಾರೆ.
ಇದು ನಮಗೆ ಸರಿ ಅನಿಸ್ತಿಲ್ಲ. ಇದನ್ನ ಸಹಿಸಿಕೊಳೋದಕ್ಕೂ ಆಗಲ್ಲ. ಇನ್ನೊಂದು ವಿಚಾರ ಏನಂದ್ರೆ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ನಾವು ಬಿಹಾರಕ್ಕೆ ಸಮರ್ಪಣೆಯಾಗಿದ್ದೇವೆ. ನಾವು ಜನರ ಸುಖ ದುಃಖದಲ್ಲಿ ಭಾಗಿಯಾದ್ದೇವೆ. ನನ್ನ ಅಣ್ಣನ ವಿಚಾರದಲ್ಲಿ ಹೇಳ್ಬೇಕಂದ್ರೆ, ರಾಜಕೀಯ ಜೀವನಕ್ಕೂ ವೈಯಕ್ತಿಕ ಜೀವನಕ್ಕೂ ವ್ಯತ್ಯಾಸವಿರುತ್ತೆ. ಅವನು ದೊಡ್ಡವನಿದ್ದಾನೆ ತಿಳಿದವನಿದ್ದಾನೆ. ಯಾವುದು ಸರಿ ಯಾವುದು ತಪ್ಪು ಅಂತ ನಿರ್ಧರಿಸುವ ಅಧಿಕಾರ ಆತನಿಗೆ ಇರುತ್ತೆ. ಅವನ ನಿರ್ಧಾರ ಅವನೇ ತೆಗೆದುಕೊಳ್ಳಲಿ. ಈ ಬಗ್ಗೆ ಆರ್‌ಜೆಡಿ ನಾಯಕರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅವರ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ.
- ತೇಜಸ್ವಿ ಯಾದವ್, ಮಾಜಿ ಡಿಸಿಎಂ
ಲಾಲು ಕುಟುಂಬದಲ್ಲಿ ಕೋಲಾಹಲ ಸೃಷ್ಟಿಸಿದ ಅನುಷ್ಕಾ ಯಾದವ್!
ಯಾರು ಈ ಅನುಷ್ಕಾ ಯಾದವ್? ಪ್ರೀತಿ ಹುಟ್ಟಿಕೊಂಡಿದ್ದು ಹೇಗೆ?
ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಪ್ರೇಮಕಥೆ ಸ್ಫೋಟದಿಂದ ಬಿಹಾರದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಒಂದು ಕಡೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಈ ಪ್ರಕರಣ ಆರ್‌ಜೆಡಿಗೆ ಎಷ್ಟು ಡ್ಯಾಮೇಜ್ ಮಾಡುತ್ತೆ? ಬಿಜೆಪಿ-ಜೆಡಿಯು ದೋಸ್ತಿಗೆ ಎಷ್ಟು ಲಾಭ ತರುತ್ತೆ ಅನ್ನೋ ಲೆಕ್ಕಾಚಾರ ಮಾಡ್ತಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್​ ಅಧ್ಯಕ್ಷನ ಮೂತಿಗೆ ತಿವಿದ ಪತ್ನಿ.. ಲೈವ್‌ನಲ್ಲಿ ಭಾರೀ ಮುಜುಗರ; ವಿಡಿಯೋ ಫುಲ್ ವೈರಲ್!
ಇನ್ನೊಂದು ಕಡೆ ಲಾಲು ಕುಟುಂಬದಲ್ಲಿ ಬಿರುಗಾಳಿ ಬೀಸ್ತಿದೆ. ಲಾಲು ಪ್ರಸಾದ್ ಟ್ವೀಟ್ ಮಾಡಿ ಮಗನನ್ನ ಉಚ್ಛಾಟನೆ ಮಾಡಿದನ್ನ, ಕುಟುಂಬದಿಂದ ಹೊರಹಾಕಿದ್ದನ್ನ ಹೇಳ್ಕೊಂಡಿದ್ದಾರೆ. ಹಾಗೆ ತೇಜಸ್ವಿ ಯಾದವ್ ಕೂಡ ಅಣ್ಣನ ನಡೆ ಸಹಿಸೋದಕ್ಕೆ ಸಾಧ್ಯವಿಲ್ಲ ಅಂತಾ ಸಮಾಧಾನ ವ್ಯಕ್ತಪಡ್ಸಿದ್ದಾರೆ. ಹೀಗಾಗಿ ಪ್ರೇಮಕಥೆಯಲ್ಲಿರೋ ತೇಜ್ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್ ಯಾರು ಅನ್ನೋ ಪ್ರಶ್ನೆ ಹುಟ್ಕೊಂಡಿದೆ. ಬಣ್ಣ ಬಣ್ಣನ ಫೋಟೋಗಳು, ರೋಮ್ಯಾಂಟಿಕ್ ಫೋಟೋಗಳು ವೈರಲ್ ಆಗಿರೋ ಹಿನ್ನೆಲೆಯಲ್ಲಿ ಈ ಬಗ್ಗೆ ಜನಸಾಮಾನ್ಯರೂ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರೆ. ಅಷ್ಟಕ್ಕೂ ಅನುಷ್ಕಾ ಯಾದವ್ ಯಾರು? ಅಂತಾ ನೋಡ್ತಾ ಹೋದಾಗ ನಮ್ಗೆ ಕೆಲವೊಂದಷ್ಟು ಉತ್ತರ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2025/05/Tej-Paratap-Yadav.jpg)
ಅನುಷ್ಕಾ ಯಾರು?
ಅನುಷ್ಕಾ ಯಾದವ್ ಕುಟುಂಬ ಪಾಟ್ನಾದ ಲಂಗರ್ಟೋಲಿ ಎಂಬಲ್ಲಿ ವಾಸವಾಗಿದ್ದಾರೆ. ಅನುಷ್ಕಾ ತಂದೆ ಮನೋಜ್ ಯಾದವ್ ಅನ್ನೋದು ತಿಳಿದು ಬಂದಿದೆ. 2021ರಲ್ಲಿ ಆರ್‌ಜೆಡಿಯ ವಿದ್ಯಾರ್ಥಿ ವಿಭಾಗದ ರಾಜ್ಯ ಅಧ್ಯಕ್ಷರಾಗಿದ್ದ ಆಕಾಶ್ ಯಾದವ್ ಅವರ ಸಹೋದರಿ ಅನುಷ್ಕಾ ಯಾದವ್ ಅನ್ನೋದ್ ಕನ್ಫರ್ಮ್ ಆಗಿದೆ. ಅಂದು ಆಕಾಶ್ ಯಾದವ್ ಅನ್ನ ನೇಮಕ ಮಾಡಿದ್ದೇ ತೇಜ್ ಪ್ರತಾಪ್ ಯಾದವ್ ಆಗಿದ್ರು. ಈ ನಡುವೆ ಅಂದಿನ ರಾಜ್ಯ ಆರ್‌ಜೆಡಿ ಅಧ್ಯಕ್ಷರಾಗಿದ್ದ ಜಗದಾನಂದ್ ಸಿಂಗ್ ಏನ್ ಮಾಡ್ತಾರೆ ಅಂದ್ರೆ ಆಕಾಶ್ ಯಾದವ್‌ಗೆ ಗೇಟ್‌ಪಾಸ್ ಕೊಡ್ತಾರೆ. ಅಂತಾ ಸಂದರ್ಭದಲ್ಲಿ ಜಗದಾನಂದ್‌ಗೂ? ತೇಜ್ ಪ್ರತಾಪ್ ಯಾದವ್‌ಗೂ ಬೆಂಕಿ ಹತ್ತಿಕೊಳ್ಳುತ್ತೆ.
ಅನುಷ್ಕಾ ಯಾದವ್ ಯಾರು ಅನ್ನೋದಕ್ಕೆ ಇಲ್ಲೇ ಸಿಕ್ತಾ ಇದೆ ನೋಡಿ ಉತ್ತರ. ಆಕೆ ನೇರಾ ನೇರವಾಗಿ ಆರ್‌ಜೆಡಿಯಲ್ಲಿ ಕಾಣಿಸ್ಕೊಂಡಿಲ್ಲ. ಆದ್ರೆ, ಆಕೆಯ ಸಹೋದರನನ್ನ ಆರ್‌ಜೆಡಿ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಆಕೆಯ ಪಾತ್ರವಿತ್ತು ಅನ್ನೋದು ಖಚಿತವಾಗಿದೆ.
/newsfirstlive-kannada/media/post_attachments/wp-content/uploads/2025/05/Tej-Paratap-Yadav-1.jpg)
ಆಕಾಶನನ್ನ ಏಕಾಏಕಿ ಹುದ್ದೆಯಿಂದ ಕಿತ್ತು ಹಾಕಿದಾಗ ತೇಜ್ ಪ್ರತಾಪ್ ದೊಡ್ಡ ಪ್ರಮಾಣದಲ್ಲಿ ಗಲಾಟೆ ಮಾಡಿದ್ದ. ಆಗಿನ ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್‌ಗೆ ಹಿಗ್ಗಾಮುಗ್ಗಾ ಬೈದಾಡಿದ್ದ. ಆ ನೋವನ್ನ ಜಗದಾನಂದ್ ಅವ್ರು ಲಾಲು ಪ್ರಸಾದ್ ಬಳಿ ಮತ್ತು ತೇಜಸ್ವಿ ಯಾದವ್ ಬಳಿ ತೋಡಿಕೊಂಡಿದ್ದರಂತೆ. ಇನ್ನು ತೇಜ್ ಪ್ರತಾಪ್ ಯಾವಾಗ್ಲೂ ಹುಚ್ಚಾಟ ಮಾಡ್ತಾನೇ ಬರ್ತಾ ಇದ್ರೂ ಯಾವತ್ತೂ ಉಚ್ಚಾಟನೆ ಮಾಡೋದಕ್ಕೆ, ಕುಟುಂಬದಿಂದ ಗೇಟ್‌ಪಾಸ್ ನೀಡೋದಕ್ಕೆ ಮುಂದಾಗಿರ್ಲಿಲ್ಲ ಲಾಲು. ಆದ್ರೆ, ಇದೀಗ ದಿಢೀರ್ ಅಂತಾ ಉಚ್ಛಾಟನೆ ಮಾಡಿದ್ದಾರೆ. ಹಾಗೇ ಕುಟುಂಬದಿಂದಲೂ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us