Advertisment

VIDEO: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ.. ಮಗುವಿದ್ದ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ

author-image
AS Harshith
Updated On
VIDEO: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ.. ಮಗುವಿದ್ದ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ
Advertisment
  • ನಡು ರಸ್ತೆಯಲ್ಲಿಯೇ ಕಿಡಿಗೇಡಿಯ ಅಟ್ಟಹಾಸ
  • ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ ದುರ್ವರ್ತನೆ
  • ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿರುವ ಪ್ರಸಂಗ ಬೆಳಕಿಗೆ ಬರುತ್ತಿವೆ. ಅದರಂತೆಯೇ ಮತ್ತೊಂದು ಘಟನೆ ಇದೀಗ ವರದಿಯಾಗಿದೆ.

Advertisment

ಕಿಡಿಗೇಡಿಯೋರ್ವ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರಾರಂಭದಲ್ಲಿ ಜಗಳಕ್ಕಿಳಿದ ಯುವಕ ಕಾರಿನ ವೈಪರ್​ ತುಂಡರಿಸಿದ್ದಾನೆ. ಬಳಿಕ ಗ್ಲಾಸ್​ಗೆ ಒಡೆದಿದ್ದಾನೆ.

ಇದನ್ನೂ ಓದಿ: ತವರಿಗೆ ಹೋಗ್ತೀನಿ ಎಂದ ಹೆಂಡತಿ ಮೂಗು ಕತ್ತರಿಸಿದ ಪಾಪಿ ಗಂಡ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಯುವಕ ವೈಪರ್​ನಿಂದ ಕಾರಿನ ಗ್ಲಾಸ್​​ ಮೇಲೆ ಹೊಡೆಯುತ್ತಿದ್ದಂತೆ ಗ್ಲಾಸ್​​ ಒಡೆದಿದೆ. ಬಳಿಕ ಕಲ್ಲು ಎತ್ತಿ ಹಾಕಿದ್ದಾನೆ. ಈ ವೇಳೆ ದಾರಿ ಹೋಕರು ತಡೆದರೂ ಸಹ ಯುವಕ ದುರ್ವರ್ತನೆ ಜೋರಾಗಿದೆ.

Advertisment

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ.. 5 ದಿನ ಈ ಮಾರ್ಗದಲ್ಲಿ ರೈಲುಗಳ ಸಂಚಾರ ವ್ಯತ್ಯಯ.. ಕಾರಣ?

ಇತ್ತ ಕಾರಿನಲ್ಲಿದ್ದವರು ವಿಡಿಯೋ ಮಾಡುತ್ತಿದ್ದಂತೆ ಯುವಕ ವರ್ತನೆ ಜೋರಾಗಿದೆ. ಕಾರಿನಲ್ಲಿದ್ದ ಮಹಿಳೆ ಇದನ್ನು ಕಂಡು ಜೋರಾಗಿ ಕಿರುಚಾಡಿದ್ದಾಳೆ. ಕಾರಿನಲ್ಲಿ ಮಗು ಇದ್ದರೂ ಸಹ ಕಿಡಿಗೇಡಿ ನಡುರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾನೆ.

Advertisment


">August 20, 2024

ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ನಿಮಗೂ ಬರುತ್ತೆ.. ರಾಜ್ಯಪಾಲರ ವಿರುದ್ಧ ಐವಾನ್ ಡಿಸೋಜಾ ಮಾತಿಗೆ ಆಕ್ರೋಶ!

ಘಟನೆ ನಡೆದ ಬೆನ್ನಲ್ಲೇ ಎಕ್ಸ್ ನಲ್ಲಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ಕಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment