newsfirstkannada.com

ಬೆಂಗಳೂರಲ್ಲಿ ಹಗಲು ರಾತ್ರಿಯೆನ್ನದೇ ಎಲ್ಲೆಂದರಲ್ಲಿ ರೌಡಿಗಳ ಪುಂಡಾಟ; ಸಾರ್ವಜನಿಕರೇ ಹುಷಾರ್​​!

Share :

Published April 7, 2024 at 6:15am

    ರೌಡಿಶೀಟರ್ ಓಪನ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ ಡೋಂಟ್​ಕೇರ್​

    ವಿರೋಧ ವ್ಯಕ್ತಪಡಿಸಿದ್ರೆ ನಿಮ್ಮ ಕಾರಿನ ಗ್ಲಾಸ್​​ ಉಡೀಸ್ ಮಾಡ್ತಾರೆ

    ಸೇಫ್ ಅಂತ ಕಾರುಗಳಲ್ಲಿ ಹೋದ್ರು, ತಪ್ಪಿಲ್ಲ ಕಿಡಿಗೇಡಿಗಳ ಕಾಟ

ಬೆಂಗಳೂರು: ರೋಡ್​ ರೇಜ್​. ಈ ಪದ ಕೇಳಿದ್ರೆ ಸಾಕು ಸಿಲಿಕಾನ್​ ಸಿಟಿ ಮಂದಿ ಬೆಚ್ಚಿ ಬೀಳುವಂತಾಗಿದೆ. ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ಓಡಾಡಂಗಿಲ್ಲ. ತಮ್ಮಿಷ್ಟದ ಊರಿಗೆ ತೆರಳಂಗಿಲ್ಲ. ಆ ರೀತಿಯ ವಾತಾವರಣ ನಿರ್ಮಾಣವಾಗ್ಬಿಟ್ಟಿದೆ. ಬೈಕ್​ ಹೋಗಲಿ, ಕಾರ್​​ಗಳು ಕೂಡ ಸೇಫ್​ ಇಲ್ಲ. ಕಳೆದ ಮೂರು ತಿಂಗಳಲ್ಲಿ ದಾಖಲಾದ ರೋಡ್​ ರೇಜ್​ ಪ್ರಕರಣ ಇಂತದ್ದೊಂದು ಭಯಾನಕ ದೃಶ್ಯ ಬಿಚ್ಚಿಟ್ಟಿದೆ.

ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರಾ ನಟ ಸುದೀಪ್​ ಮಗಳು? ಏನಿದು ಸಾನ್ವಿ ಸ್ಟೋರಿ?

ಸಿಲಿಕಾನ್​ ಸಿಟಿ, ಉದ್ಯಾನನಗರಿ, ಹೈಟೆಕ್​ ಸಿಟಿ ಅಂತೆಲ್ಲಾ ಹೆಸರು ಪಡೆದಿರುವ ಬೆಂಗಳೂರು ಅದ್ಯಾಕೋ ಬರ ಬರುತ್ತಾ ಡೆಂಜರಸ್​ ಸಿಟಿಯಾಗಿ ಬದಲಾಗ್ತಾಯಿದೆ. ಇದಕ್ಕೆ ಕಾರಣ ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು. ಬೈಕ್​ಗಳಲ್ಲಿ ಹೋಗೋರನ್ನು ನಿರ್ಜನ ಪ್ರದೇಶಗಳಲ್ಲಿ ತಡೆದು ಹಲ್ಲೆ ಮಾಡ್ತಿದ್ದ ವರದಿಗಳು ದಾಖಲಾಗ್ತಿದ್ದಾಗಲೇ ದಂಗಾಗಿದ್ದ ಜನರಿಗೆ ಇದೀಗ ಕಾರ್​ ಕೂಡ ಸೇಫ್​ ಅಲ್ಲ ಅನ್ನೋ ಮಟ್ಟಿಗೆ ಕಿಡಿಗೇಡಿಗಳ ಕಾಟ ಕಂಟಕವಾಗ್ಬಿಟ್ಟಿದೆ.

ಘಟನೆ: 1

ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ
ಸರ್ಕಲ್ ಮಾರಮ್ಮ ದೇವಸ್ಥಾನ ಸರ್ಕಲ್​ನಲ್ಲಿ ನಡೆದ ಘಟನೆ
ಕಾರಿನಿಂದ ಇಳಿದು ಬಂದ ಚಾಲಕನಿಗೆ ಗುದ್ದಿ ಹತ್ಯೆಗೆ ಯತ್ನ

ಘಟನೆ 2

ಬೈಕ್ ಅಡ್ಡಾದಿಡ್ಡಿಯಾಗಿ ಓಡಿಸಿ ಬೈಕ್ ಸವಾರನಿಂದ ಪುಂಡಾಟ
ಸರ್ಜಾಪುರ ರಸ್ತೆ ಸಿಂಗೇನಹಳ್ಳಿಯ ಬಳಿ ನಡೆದ ಘಟನೆ
ಕಾರಿಗೆ ದಾರಿ ಬಿಡದೆ ದಂಪತಿ ಮುಂದೆ ಬೈಕ್​ ಸವಾರನ ದುರ್ವರ್ತನೆ

ಘಟನೆ 3

ಕಾರ್ ಟಚ್ ಆಯ್ತು ಅಂತ ಕ್ಯಾಬ್ ಚಾಲಕನಿಂದ ಗಲಾಟೆ
ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದ ಘಟನೆ
ಗಲಾಟೆ ವೇಳೆ ಚಾಲಕ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ

ಘಟನೆ 4

ಇಂಡಿಕೇಟರ್ ಆಫ್ ಮಾಡು ಅಂದಿದಕ್ಕೆ ಕಾರು ಅಡ್ಡಗಟ್ಟಿ ಗಲಾಟೆ
ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ
ಬೇಗೂರು – ಯೆಲೇನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿರುವ ಘಟನೆ

ಘಟನೆ 5

ಜ.15ಕ್ಕೆ ಸರ್ಜಾಪುರ ರಸ್ತೆ ಸಿಂಗೇನಹಳ್ಳಿಯ ಬಳಿ ನಡೆದ ಘಟನೆ

ಘಟನೆ 6

ಕಾರು ಚೇಸ್ ಮಾಡಿ ಬಂದು ಕಿರುಕುಳ ನೀಡಿದ ಪುಂಡರು
ಕೋರಮಂಗಲದಲ್ಲಿ ದಂಪತಿ ಕಾರ್​ಗೆ ಡಿಕ್ಕಿ ಹೊಡೆದು ಗಲಾಟೆ
ಟ್ರಿಬಲ್​ ರೈಡಿಂಗ್​ನಲ್ಲಿ ಬಂದು ಕಾರಿನ ಡೋರ್​ ತೆರೆಯಲು ಯತ್ನ

ಘಟನೆ 7

ರಂಕಾ ಕಾಲೋನಿ ಬಳಿ ಇಬ್ಬರು ಯುವಕರಿಂದ ಗಲಾಟೆ
ಕಾರಿಗೆ ಬೈಕ್​ ಅಡ್ಡ ತಂದು ಕಾರು ಚಾಲಕನ ಮೇಲೆ ಹಲ್ಲೆ
ಕುಡಿದು ಬಂದು ಹಲ್ಲೆ ನಡೆಸಿದ ಇಬ್ಬರು ದುಷ್ಕರ್ಮಿಗಳು

ಒಂದಲ್ಲ ಎರಡಲ್ಲ ಇಂತಹ ಹತ್ತಾರು ಘಟನೆಗಳು ನಡೆಯುತ್ತಲಿದೆ. ಅಚ್ಚರಿ ಅಂದ್ರೆ ಇದೇ ರೀತಿ ಬೆಳಕಿಗೆ ಬಾರದ ಅದೆಷ್ಟೋ ಕೇಸ್​​ಗಳು ಬೆಂದಕಾಳುರಲ್ಲಿ ನಿತ್ಯವೂ ಸಂಭವಿಸುತ್ತಿದೆ. ಕೆಲವೊಂದು ಕೃತ್ಯಗಳಲ್ಲಿ ಕೇಸ್​​ ದಾಖಲಾಗ್ತಾಯಿದ್ರೆ ಮತ್ತೆ ಹಲವು ಪೊಲೀಸ್,​ ಕೋರ್ಟ್​ ಅನ್ನೋ ಗೋಜಿಗೆ ಹೋಗುವ ಕಿರಿ ಕಿರಿ ಬೇಡ ಅಂತ ಜನ ಸುಮ್ಮನಾಗ್ತಿದ್ದಾರೆ. ವಿಪರ್ಯಾಸ ಅಂದ್ರೆ, ಇಂತಹ ದುರುಳರ ವಿರುದ್ಧ ರೌಡಿಶೀಟ್ ಓಪನ್ ಮಾಡೋ ಎಚ್ಚರಿಕೆಯನ್ನ ಪೊಲೀಸರು ಕೊಟ್ಟಿದ್ರು ಡೋಂಟ್ ಕೇರ್ ಅಂತಿದ್ದಾರೆ ಕಿಡಿಗೇಡಿಗಳು. ರಸ್ತೆಗಳಲ್ಲಿ ಕಾರಣಗಳನೇ ಹುಡುಕುತ್ತಾ. ಚೇಸಿಂಗ್​, ಬೆದರಿಕೆ, ರಾಬರಿ, ಹಲ್ಲೆ ಮಾಡೋರಿಗೆ ತಕ್ಕ ಶಾಸ್ತಿ ಯಾವಾಗ? ಜನ ನೆಮ್ಮದಿಯಾಗಿ ಓಡಾಡೋದು ಯಾವಾಗ? ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಹಗಲು ರಾತ್ರಿಯೆನ್ನದೇ ಎಲ್ಲೆಂದರಲ್ಲಿ ರೌಡಿಗಳ ಪುಂಡಾಟ; ಸಾರ್ವಜನಿಕರೇ ಹುಷಾರ್​​!

https://newsfirstlive.com/wp-content/uploads/2024/04/bng-road-case.jpg

Load More