/newsfirstlive-kannada/media/post_attachments/wp-content/uploads/2025/04/Bangalore-Rain-Effect-4.jpg)
ಕೆಲ ದಿನಗಳಿಂದ ಬಿಸಿಲ ಧಗೆ ಬೆಂಗಳೂರಿಗರನ್ನ ಸುಡ್ತಿತ್ತು. ಹೊರಗಡೆ ಕಾಲಿಟ್ರೆ ರಣ ರಣ ಅನ್ನೋ ಬಿಸಿಲು. ಆದರೆ ಇವತ್ತು ಬೆಳಗ್ಗೆಯಿಂದ ಅಲ್ಲಲ್ಲಿ ಸುರಿದ ಮಳೆ ಇಡೀ ಸಿಟಿಯನ್ನ ಕೂಲ್ ಮಾಡಿದೆ. ಒಂದಿಷ್ಟು ಅವಾಂತರವನ್ನೂ ತಂದೊಡ್ಡಿದೆ.
ಹಾಟ್ ಹಾಟ್ ಆಗಿದ್ದ ಸಿಲಿಕಾನ್ ಸಿಟಿ ಇವತ್ತು ಬೆಳಗ್ಗಿನಿಂದಾನೇ ಸುರಿದ ಮಳೆಗೆ ಕೂಲ್ ಕೂಲ್ ಆಗಿದೆ. ಮಧ್ಯಾಹ್ನದ ವೇಳೆಗಂತೂ ಧೋ ಅಂತ ಅಪ್ಪಳಿಸಿದ ಮಳೆರಾಯ ರಾಜಧಾನಿಯನ್ನ ತಂಪು ಮಾಡೋದ್ರ ಜೊತೆಗೆ ಒಂದಿಷ್ಟು ಸಮಸ್ಯೆಯನ್ನೂ ತಂದೊಡ್ಡಿದ್ದಾನೆ.
ಬಿರುಗಾಳಿ ಸಹಿತ ಅಬ್ಬರಿಸಿದ ಮಳೆಯಿಂದ ರಾಜಾಜಿನಗದಲ್ಲಿ ಬೃಹತ್ ಮರ ಉರುಳಿಬಿದ್ದು ಎರಡು ಕಾರು ಮತ್ತು ಬೈಕ್‌ನ ಜಖಂಗೊಂಡಿದೆ. ಇದ್ರಿಂದ ರಸ್ತೆ ಬ್ಲಾಕಾಗಿ ಸಮಸ್ಯೆ ಆಗಿತ್ತು. ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಸಿಬ್ಬಂದಿ ಮತ್ತು ಕೆಇಬಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಆಡುಗೋಡಿ ಸುತ್ತಮುತ್ತ ಧಾರಕಾರ ಮಳೆ ಸುರಿದಿದೆ. ಪರಿಣಾಮ ರಸ್ತೆಗಳು ಕರೆಯಂತಾಗಿದ್ರಿಂದ ವಾಹನ ಸವಾರರು ಪರದಾಡಿದ್ರು. ಬಿಟಿಎಂ ಲೇಔಟ್‌ನಲ್ಲೂ ರಸ್ತೆಯಲ್ಲಿ ನೀರು ವಾಹನ ಸವಾರರು ಈಜಾಡ್ಬೇಕಾಯ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
NGF ಸಿಗ್ನಲ್ ಬಳಿಯ BEML ರೋಡ್ ಕೂಡ ಜಲಾವೃತವಾಗ್ಬಿಟ್ಟಿತ್ತು. ಚರಂಡಿಗಳು ಬ್ಲಾಕ್ ಆಗಿ, ರಸ್ತೆಯ ತುಂಬೆಲ್ಲಾ ನೀರು ನಿಂತಿದ್ದರಿಂದ ಸಂಚರಿಸೋದೇ ಸಾಹಸ ಆಗ್ಬಿಟ್ಟಿತ್ತು..
ಮತ್ತೊಂದ್ಕಡೆ ಮಳೆಯಿಂದಾಗಿ ಟಿನ್ ಫ್ಯಾಕ್ಟರಿ ಟು ಹೆಬ್ಬಾಳ ರಿಂಗ್ ರೋಡ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯಲ್ಲೇ ನೀರು ಹರಿದಿದ್ದರಿಂದ ಜಾಮ್ ಆಗಿ ವಾಹನ ಸವಾರರು ಹೈರಾಣಾದ್ರು.
ಸರ್ಜಾಪುರದಲ್ಲೂ ಬಾರೀ ಮಳೆಯ ಪರಿಣಾಮವನ್ನ ಜನ ಅನುಭವಿಸ್ಬೇಕಾಯ್ತು. ಧಾರಾಕಾರ ಮಳೆಗೆ ಜಲಾವೃತವಾದ ರಸ್ತೆಯಲ್ಲಿ ಸವಾರರು ಪರದಾಡಿದ್ರು. ಇದ್ರೊಂದಿಗೆ ರಾಯಸಂದ್ರ ಜಂಕ್ಷನ್, ಹೆಚ್‌ಎಎಲ್ ಮೈನ್ ರೋಡ್‌ನಲ್ಲೂ ಮಳೆಯ ಅವಾಂತರ ಕಂಡು ಬಂತು.
ಇದನ್ನೂ ಓದಿ: ನಡುರೋಡಲ್ಲಿ RCB ಮ್ಯಾಚ್ ನೋಡುತ್ತಿದ್ದ ಚಾಲಕನಿಗೆ ₹1500 ದಂಡ! ಆಗಿದ್ದೇನು?
ಸದ್ದಿಲ್ಲದೆ ಅಪ್ಪಳಿಸಿದ ವರುಣದೇವ ರಾಜಧಾನಿಯಲ್ಲಿ ಒಂದಿಷ್ಟು ಅವಾಂತರ ಸೃಷ್ಟಿ ಮಾಡಿದ್ದಾನೆ. ಹವಾಮಾನ ಇಲಾಖೆ ನೀಡಿರೋ ಮಾಹಿತಿ ಪ್ರಕಾರ ಇನ್ನೊಂದು ವಾರ ಆಗ್ಗಾಗ್ಗೆ ಮಳೆರಾಯನ ಎಂಟ್ರಿ ಪಕ್ಕಾ. ಬೆಂಗಳೂರು ಮಹಾನಗರ ಪಾಲಿಕೆಯವ್ರಂತೂ ಈ ಮಳೆಗೆ ತಯಾರಾಗಿಲ್ಲ, ನಾಳೆಯಿಂದ ನೀವು ಮನೆ ಬಿಡೋ ಮುನ್ನ ಯಾವುದಕ್ಕೂ ರೆಡಿಯಾಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ