/newsfirstlive-kannada/media/post_attachments/wp-content/uploads/2024/10/GOLD_PRICE_1.jpg)
ಇತ್ತೀಚೆಗೆ ಕರ್ನಾಟಕದ ಮಂಗಳೂರಿನಲ್ಲಿ ಹಾಡ ಹಗಲೇ ಬ್ಯಾಂಕಿಗೆ ನುಗ್ಗಿ 12 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ಸೇರಿ ದರೋಡೆ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈಗ ಇಂತಹುದೇ ಘಟನೆ ದೆಹಲಿಯ ಲಕ್ಷ್ಮೀ ಬಾಯಿ ಕಾಲೇಜ್ನ ಬಳಿನಡೆದಿದೆ. ಗುಲೇಲ್ ಗ್ಯಾಂಗ್ ಗ್ರೂಪ್ನ ಖದೀಮರು ಕಾರಿನ ಗ್ಲಾಸ್ ಒಡೆದು ವ್ಯಕ್ತಿಯ ತೆಗೆದುಕೊಂಡು ಹೋಗುತ್ತಿದ್ದ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಭಾರಣದ ಬ್ಯಾಗ್ನ್ನು ಕದ್ದುಕೊಂಡು ಹೋಗಿದ್ದಾರೆ.
ಪೊಲೀಸರು ನಡೆಸಿದ ವಿಚಾರಣೆಯ ಪ್ರಕಾರ ವಿಜಯ ವರ್ಮಾ ಎಂಬುವವರು ಕರೋಲ್ ಭಾಗ್ ಬಳಿ ಚಿನ್ನಾಭರಣವನ್ನು ಖರೀದಿಸಿದ್ದರು. ರಾತ್ರಿ ಸುಮಾರು 8.15ರ ವೇಳೆ ಶಿಮಲರ್ ಭಾಗ್ನಲ್ಲಿರುವ ತಮ್ಮ ಮನೆಯ ಕಡೆಗೆ ತಮ್ಮ ಮಗ ಹಾಗೂ ಡ್ರೈವರ್ ಜೊತೆ ಹೋಗುತ್ತಿದ್ದರು. ಈ ವೇಳೆ ಸ್ಕೂಟರ್ ಮೇಲೆ ಇಬ್ಬರು ವ್ಯಕ್ತಿಗಳು ಅವರನ್ನು ಹಿಂಬಾಲಿಸಿದ್ದಾರೆ.
ಇದನ್ನೂ ಓದಿ:ಕೋಟೆಕಾರು ಬ್ಯಾಂಕ್ ಲೂಟಿ.. ದರೋಡೆಯ ಪ್ರಮುಖ ಆರೋಪಿ ಮೇಲೆ ಶೂಟೌಟ್; ಆಗಿದ್ದೇನು?
ಸುಮಾರು 9 ಗಂಟೆ ಸುಮಾರಿಗೆ ವಿಜಯ್ ವರ್ಮ ಪೊಲೀಸರಿಗೆ ಕರೆ ಮಾಡಿ ನನ್ನ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ದೆಹಲಿಯ ನಾರ್ಥ್ ವೆಸ್ಟ್ನ ಡೆಪ್ಯೂಟಿ ಪೊಲೀಸ್ ಕಮಿಷನರ್ ಹೇಳುವ ಪ್ರಕಾರ ನಾವು ಸಿಸಿಟಿವಿ ಚೆಕ್ ಮಾಡಿದಾಗ ಇಬ್ಬರು ವ್ಯಕ್ತಿಗಳು ವಿಜಯ್ ವರ್ಮಾ ಅವರ ಕಾರ್ನ್ನು ಫಾಲೋವ್ ಮಾಡಿಕೊಂಡು ಬಂದಿರುವು ಕಂಡು ಬಂದಿದೆ. ಲಕ್ಷ್ಮೀ ಬಾಯಿ ಕಾಲೇಜ್ ಹತ್ತಿ ರೆಡ್ ಲೈಟ್ ಸಿಗ್ನಲ್ ಬಿದ್ದಾಗ ಇವರ ಕಾರ್ ಸ್ಟಾಪ್ ಆಗಿದೆ. ಈ ವೇಳೆ ಗುಲೇಲ್ ಗ್ಯಾಂಗ್ನಿಬ್ಬರು ಕಾರಿನ ಕಿಟಕಿಯ ಗ್ಲಾಸ್ ಒಡೆದು ಬ್ಯಾಗ್ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೈಕ್ರೋ ಫೈನಾನ್ಸ್ ಕಿರುಕುಳ: ಸಿಬ್ಬಂದಿ ಗಲಾಟೆಗೆ ಬೇಸತ್ತು ಪ್ರಾಣವನ್ನೇ ಬಿಟ್ಟ ಮಹಿಳೆ
ಇತ್ತೀಚೆಗೆ ಈ ಗುಲೇಲ್ ಗ್ಯಾಂಗ್ ದೆಹಲಿಯಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಹಲವು ರೀತಿಯ ದರೋಡೆ ಮಾಡಿದೆ. ಸದ್ಯ ಸಿಸಿಟಿವಿ ಫೋಟೇಜ್ಗಳಲ್ಲಿ ಆರೋಪಿಗಳನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿಯೇ ಬಂಧನ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ