ಸಿನಿಮೀಯ ಸ್ಟೈಲ್​ನಲ್ಲಿ ಜ್ಯುವೆಲ್ಲರಿ ಶಾಪ್​ಗೆ ಗನ್ ಜತೆಗೆ ಎಂಟ್ರಿ ಕೊಟ್ಟ ಕಳ್ಳರು.. ಆಮೇಲೇನಾಯ್ತು?

author-image
Veena Gangani
Updated On
ಸಿನಿಮೀಯ ಸ್ಟೈಲ್​ನಲ್ಲಿ ಜ್ಯುವೆಲ್ಲರಿ ಶಾಪ್​ಗೆ ಗನ್ ಜತೆಗೆ ಎಂಟ್ರಿ ಕೊಟ್ಟ ಕಳ್ಳರು.. ಆಮೇಲೇನಾಯ್ತು?
Advertisment
  • ಗನ್ ಹಿಡಿದು ಶಾಪ್​ಗೆ ಎಂಟ್ರಿಯಾಗಿದ್ದ ಮೂವರು
  • ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದೋಚಿದ ಗ್ಯಾಂಗ್
  • ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ಘಟನೆ

ಬೆಂಗಳೂರು: ಗನ್ ತೋರಿಸಿ ಜ್ಯುವೆಲ್ಲರಿ ಶಾಪ್​ನಲ್ಲಿ ದರೋಡೆ ಮಾಡಿರೋ ಘಟನೆ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ.
ರಾಮ್ ಜ್ಯುವೆಲ್ಲರಿ ಶಾಪ್ ಕ್ಲೋಸ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. 24ರಂದು 9 ಗಂಟೆ ಸುಮಾರಿಗೆ ಕೈನಲ್ಲಿ ಗನ್ ಹಿಡಿದು ಮುಸುಕುದಾರಿಗಳ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಇದೇ ವೇಳೆ ಕಳ್ಳರ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಆಸೆ ಸೀರಿಯಲ್​ನಲ್ಲಿ ಏನಾಗ್ತಿದೆ..? ಮೀನ-ಸೂರ್ಯ, ಮನೋಜ-ರೋಹಿನಿ ರೋಮ್ಯಾನ್ಸ್ ವಿಡಿಯೋ ವೈರಲ್!

publive-image

ಇನ್ನೂ, ಮುಸುಕುದಾರಿಗಳ ಗ್ಯಾಂಗ್​ ಬರುತ್ತಿದ್ದಂತೆ ಸಿಬ್ಬಂದಿ ಏಕಾಏಕಿ ಕಾಪಾಡಿ, ಕಾಪಾಡಿ ಅಂತ ಕೂಗಾಡಿದ್ದಾರೆ. ಆಗ ಮುಸುಕುದಾರಿಗಳ ಗ್ಯಾಂಗ್ ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದೋಚಿಕೊಂಡಿದ್ದಾರೆ. ಸಿಬ್ಬಂದಿಯ ಕೂಗಾಟ ಕೇಳಿ ಅಕ್ಕ ಪಕ್ಕದ ಅಂಗಡಿಯವರು ಶಾಪ್ ಬಳಿ ಓಡಿ ಬಂದಿದ್ದಾರೆ. ಅಷ್ಟೋತ್ತಿಗೆ ಅಲ್ಲಿಂದ ಗ್ಯಾಂಗ್ ಪರಾರಿಯಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಗ್ಯಾಂಗ್​ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment