/newsfirstlive-kannada/media/post_attachments/wp-content/uploads/2025/01/Kotekar-Bank-News.jpg)
ಕೋಟೆಕಾರು ಬ್ಯಾಂಕ್​ ಕೆ.ಸಿ.ರೋಡ್ ಶಾಖೆಯಿಂದ ಭಾರೀ ದರೋಡೆ ನಡೆದಿದ್ದು ಈಗ ರಾಜ್ಯದಲ್ಲಿ ದೊಡ್ಡ ಸುದ್ದಿಯುಂಟಾಗಿದೆ. ಮಾರಾಕಾಸ್ತ್ರ ತೋರಿಸಿದ ತಂಡ ದರೋಡೆ ನಡೆಸಿದೆ. ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಈ ಕೃತ್ಯ ನಡೆದಿದ್ದು, ಕಿರಾತಕರು ಮುಸುಕುದಾರಿಗಳಾಗಿ ಬಂದು ಕೃತ್ಯ ನಡೆಸಿದ್ದಾರೆ. ಚಿನ್ನ, ಒಡವೆ, ನಗದುಗಳೆಲ್ಲವೂ ದರೋಡೆ ಮಾಡಿದ್ದು ಫಿಯೇಟ್ ಕಾರಿನಲ್ಲಿ ಬಂದು ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇನ್ನು ಬ್ಯಾಂಕ್ ದರೋಡೆ ಪ್ರಕರಣದ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಕೊತೆ ಸಿಎಂ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದ್ದಾರೆ. ದೇರಳಕಟ್ಟೆ ಮಾರ್ಗವಾಗಿ ದರೋಡೆಕೋರರು ಪರಾರಿಯಾಗಿರುವ ಮಾಹಿತಿ ಬಂದಿದೆ. ಎಲ್ಲಾ ಟೋಲ್​ಗಳಲ್ಲೂ ತಪಾಸಣೆ ಮಾಡಿ ನೋಡಿದಾಗ ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:CCTV ಕ್ಯಾಮೆರಾ ರಿಪೇರಿಗೆ; CM ಪ್ರೋಗ್ರಾಂ ಬೇರೆ; ಪಕ್ಕಾ ಪ್ಲಾನ್ ಮಾಡಿ 12 ಕೋಟಿ ಬ್ಯಾಂಕ್​ ದರೋಡೆ
ಸದ್ಯ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದ್ದು ತಲಪಾಡಿ ಟೋಲ್ ಗೇಟ್​ನಲ್ಲಿ 150 ರೂಪಾಇ ಹಣ ಕೊಟ್ಟು ರಶೀದಿಯನ್ನು ದರೋಡೆಕೋರರು ಪಡೆದಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ನಂಬರ್ ಪ್ಲೇಟ್ ಫೇಕ್ ಆಗಿದ್ದರಿಂದ ಫಾಸ್ಟಾಗ್​ ಇರಲಿಲ್ಲ ಎಂದು ತಿಳಿದು ಬಂದಿದೆ. ದರೋಡೆಕೋರರು ಕಾರಿಗೆ ಫೇಕ್ ನಂಬರ್ ಪ್ಲೇಟ್ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. KA04 MQ9923 ಎಂಬ ನಂಬರ್ ಹಾಕಿದ್ದಾರೆ. ಈ ನಂಬರ್ ಪ್ಲೇಟ್​ ಡಿಟೇಲ್ ತೆಗೆದು ನೋಡಿದ ಪೊಲೀಸರಿಗೆ ಶಾಕ್​ ಆಗಿದೆ. KA04 MQ9923 ನಂಬರ್ ನ ಅಸಲಿ ಮಾಲೀಕನಿಗೆ ಪೊಲೀಸರು ಕರೆ ಮಾಡಿದಾಗ ಶಾಕ್​ಗೆ ಒಳಗಾಗಿದ್ದಾನೆ.
ಪ್ರಕರಣದಲ್ಲಿ ಇನ್ನೂ ಒಂದು ಅಚ್ಚರಿಯ ಘಟನೆ ನಡೆದಿದೆ. ದರೋಡೆಕೋರರರು ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ದೋಚಿ ಓಡಿಹೋಗುವ ಪ್ಲ್ಯಾನ್​ನಲ್ಲಿದ್ದರು. ಇದೇ ಆತುರದಲ್ಲಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ. ಸುಮಾರು 12ಕೆಜಿಯಷ್ಟು ಚಿನ್ನವನ್ನು ಬ್ಯಾಂಕ್​ನಲ್ಲಿಯೇ ಉಳಿಸಿದ ತಮ್ಮ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ದೋಚಿಕೊಂಡು ಹೋಗಿದ್ದಾರೆ. ಎಲ್ಲಾ ಹೊತ್ತುಕೊಂಡು ಹೋಗುವಷ್ಟರಲ್ಲಿ ಒಂದು ಪೊಲೀಸರಿಗೆ ಸಮಯ ಕೊಟ್ಟ ಹಾಗೆ ಆಗುತ್ತೆ ಮತ್ತೊಂದು ಎತ್ತುಕೊಂಡು ಹೋಗಲು ಭಾರವಾಗುತ್ತೆ ಎಂಬ ಕಾರಣದಿಂದ ಬಿಟ್ಟು ಹೋಗಿರುವ ಶಂಕೆಯಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us